ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಮುಸ್ಲಿಂ ಕುಟುಂಬವೊಂದು ಸೋಮವಾರ ನವೆಂಬರ್ 13ರಂದು ತಮ್ಮ ಮನೆಯಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದ್ದಾರೆ.
ಈ ಕುರಿತು ಸಲ್ಮಾಬಾನು ನದಾಪ್ ಮಾತನಾಡಿ ಸಮಾಜದಲ್ಲಿ ಇಂದು ಹಿಂದೂ-ಮುಸ್ಲಿಂ ಬೇರೆಮಾಡಿ ಒಡೆದು ಆಳುವ ಕುತಂತ್ರದಲ್ಲಿ ರಾಜಕಾರಣಿಗಳು ಮುಳಿಗಿದ್ದಾರೆ. ಯಾವುದೇ ಆಚರಣೆ ಆಗಲಿ, ಎಲ್ಲರೂ ಆಚರಿಸಬಹುದು. ಅದಕ್ಕೆ ಸಂವಿಧಾನವು ಸಮಾನವಾದ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ನಾವು ದೀಪಾವಳಿ ಆಚರಣೆ ಮಾಡುತ್ತಿದ್ದೇವೆ ಎಂದರು.
ನಾವು ದಸರಾ, ನಾಗರಪಂಚಮಿ ಹಬ್ಬಗಳನ್ನೂ ನಾವು ಆಚರಿಸುತ್ತೇವೆ. ವರ್ಷಕ್ಕೊಮ್ಮೆ ಎಲ್ಲಮ್ಮನ ಗುಡ್ಡಕ್ಕೂ ಹೋವುತ್ತೇವೆ. ಇದರ ಹಿಂದಿನ ಮೂಲ ಉದ್ದೇಶ, ಭಾವೈಕೈತೆ.
ಭಾವೈಕೈತೆ ಸಮಾಜದಲ್ಲಿ ಕ್ರಮೇಣ ಕ್ಷೀಣಿಸುತ್ತ ಹೊರಟಿದೆ. ಭಾತೃತ್ವವು ಇಲ್ಲದಂತಾಗುತ್ತಿದೆ. ಹೀಗಾಗಬಾರದು ಎಂದು, ನಾವೆಲ್ಲರೂ ಒಂದು ಎಂಬ ಭಾವನೆ ನಮ್ಮೆಲ್ಲರಲ್ಲಿ ಮೂಡಲಿ ಎಂಬ ಭಾವನೆ ನಮ್ಮದಾಗಿದೆ. ನಮಗೆಲ್ಲ ದೇವರು ಒಬ್ಬನೆ, ದೇವರು ಜಾತಿ ಮಾಡಿಲ್ಲ. ಆದರೆ, ನಾವು ಜಾತಿ ಎಂದು ಕಿತ್ತಾಡುವುದು ಸರಿಯಲ್ಲ ಎಂದು ತಮ್ಮ ಮನದ ಮಾತು ವ್ಯಕ್ತ ಪಡಿಸಿದರು.
ಸಾಮಾನ್ಯವಾಗಿ ತಮ್ಮ ತಮ್ಮ ಧರ್ಮದ ಆಚರಣೆಗಳು ತಮ ತಮಗೇ ಸೀಮಿತ ಎಂಬ ಭಾವನೆ ಹುಟ್ಟುತ್ತಿರುವ ಈ ಕಾಲದಲ್ಲಿ ಉತ್ತರಕರ್ನಾಟಕದ ಮುಸ್ಲಿಂ ಬಾಂಧವರು ದೀಪಾವಳಿ ಹಬ್ಬವನ್ನು ಹಿಂದೂಗಳು ಆಚರಿಸುವಂತೆ ಆಚರಿಸಿ ಭಾವೈಕ್ಯತೆ ಮೆರೆದಿದ್ದಾರೆ.