ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ಉಣಕಲ್ ಕೆರೆಗೆ ’ಚನ್ನಬಸವ ಸಾಗರ’ ಎಂದು ನಾಮಕರಣ ಮಾಡುವ ಕುರಿತು ನಮ್ಮಿಂದ ಯಾವುದೇ ಆಕ್ಷೇಪಣೆಗಳಿಲ್ಲ ಎಂದು ಹುಬ್ಬಳ್ಳಿ ಧಾರವಾಡ ಪೋಲಿಸ್ ಆಯುಕ್ತರಿಗೆ ವಿದ್ಯಾನಗರ ಪೊಲೀಸ್ ಇನ್ಸ್‌ಪೆಕ್ಟರ್ ಅಭಿಪ್ರಾಯ ತಿಳಿಸಿದ್ದಾರೆ.
ಉಣಕಲ್ ಕೆರೆಗೆ ’ಚನ್ನಬಸವ ಸಾಗರ’ ಎಂದು ನಾಮಕರಣ ಮಾಡುವ ಕುರಿತು ಸೂಕ್ತ ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತರು ವಿದ್ಯಾನಗರ ಠಾಣೆಗೆ ಕಾರ್ಯಾಲಯದಿಂದ ಪತ್ರ ಬರೆದಿದ್ದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಈ ಸಂಬಂಧ ಹುಬ್ಬಳ್ಳಿ-ಧಾರಾವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ಉಣಕಲ್ ಕೆರೆಗೆ “ಚನ್ನಬಸವ ಸಾಗರ ಎಂದು ನಾಮಕರಣ ಮಾಡುವ ಕುರಿತು ಪರಿಶೀಲಿಸಿ ವರದಿ ಸಲ್ಲಿಸಿದ್ದಾರೆ.
“ಪಟ್ಟಣದ ವಿದ್ಯಾನಗರ ಠಾಣಾ ವ್ಯಾಪ್ತಿಯ ಉಣಕಲ್ ಕೆರೆಗೆ ಚನ್ನಬಸವ ಸಾಗರ ಎಂದು ನಾಮಕರಣ ಮಾಡುವ ಬಗ್ಗೆ ಉಣಕಲ್ ವಾರ್ಡ್‌ನ ಚುನಾಯಿತ ಪ್ರತಿನಿಧಿಗಳು, ಉಣಕಲ್, ಸಾಯಿನಗರ ಮತ್ತು ತಾಜನಗರದ ನಾಗರಿಕರನ್ನು ಸಂರ್ಪಕಿಸಿ ಉಣಕಲ್ ಕೆರೆಗೆ “ಚನ್ನಬಸವ ಸಾಗರʼʼ ಎಂದು ನಾಮಕರಣ ಮಾಡುವ ಬಗ್ಗೆ ವಿಚಾರಿಸಲಾಗಿತ್ತು. ನಮ್ಮದು ಯಾವುದೇ ಆಕ್ಷೇಪಣೆಗಳು ಇಲ್ಲ. ಅಲ್ಲದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಠಾಣೆಗೆ ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ದೂರು ಬಂದಿಲ್ಲ” ಎಂದು ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಅದಿವಾಸಿ – ಅಲೆಮಾರಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ‘ಕೆವಿಎಸ್’