ಧಾರವಾಡ | ಅಲೆಮಾರಿಗಳ ಕಲಾಪ್ರಕಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಿದೆ: ಡಾ. ಎಸ್ ಬಾಲಾಜಿ

Date:

Advertisements

ಬುಡಕಟ್ಟು ಪ್ರದರ್ಶನ ಕಲೆಗಳು ಇತ್ತೀಚಿನ ದಿನಗಳಲ್ಲಿ ಅಳಿವಿನಂಚಿನಲ್ಲಿದ್ದು, ಅಲೆಮಾರಿಗಳು ಹಾಗೂ ಬುಡಕಟ್ಟು ಸಮುದಾಯದವರಿಗೆ ಪ್ರೋತ್ಸಾಹ ಮತ್ತು ತರಬೇತಿ ನೀಡುವ ಮೂಲಕ ಅವರ ಸಂಪ್ರದಾಯ ಮತ್ತು ಕಲಾಪ್ರಕಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯವಾಗಬೇಕಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ. ಎಸ್. ಬಾಲಾಜಿ ಹುಬ್ಬಳ್ಳಿ ತಾಲೂಕಿನ ನೂಲ್ವಿ ರೇಣುಕಾಚಾರ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಏರ್ಪಡಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನೆದೇವರ ಪರಿಕಲ್ಪನೆ ಹುಟ್ಟಿದ್ದು ಜಾನಪದರಿಂದ, ಬಸವಾದಿ ಶರಣರು ಹಾಗೂ ವಚನಕಾರರು ಮನೆದೇವರ ಸಾಂಪ್ರದಾಯವನ್ನು ಮುಂದುವರಿಸಿಕೊಂಡು ಬಂದರು, ಬುಡಕಟ್ಟು ಸಮುದಾಯದವರಿಗೆ ಪಾರಂಪರಿಕ ಜ್ಞಾನ ಇರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಬೆಂತೂರ ಮಾತನಾಡಿ, ಬುಡಕಟ್ಟು ಸಮುದಾಯದಲ್ಲಿ ಸಾಮರಸ್ಯ ಹಾಗೂ ಐಕ್ಯತೆಯ ಭಾವನೆಗಳು ಹೆಚ್ಚಾಗಿರುತ್ತದೆ, ಅವರಿಂದ ಒಗ್ಗೂಡಿಸಿಕೊಂಡು ಬದುಕುವುದನ್ನು ಕಲಿಯಬಹುದು ಎಂದರು. ಕನ್ನಡ ಜಾನಪದ ಪರಿಷತ್ ರಾಜ್ಯ ಕಾರ್ಯದರ್ಶಿ ಪ್ರೊ‌. ಕೆ ಎಸ್ ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಬುಡಕಟ್ಟು ಸಮುದಾಯದ ಮೂಲ ಜನಪದ ಸಾಹಿತ್ಯ ಎಂಬುದನ್ನು ಅರಿಯಬೇಕು. ಕಾಲೇಜಿನ ಪ್ರಾಚಾರ್ಯ ಜಿ ಹೆಚ್ ಕಟ್ಟಿ ಮಾತನಾಡಿ, ಮುಂದಿನ ಪೀಳಿಗೆ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಭವ ಪರಿಚಯ ಮಾಡಬೇಕೆಂದರೆ ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.

ಈ ವೇಳೆ ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್ ಶಿವಳ್ಳಿ, ಜನಪದ ಕಲಾವಿದ ಪ್ರಶಾಂತ್ ತಡಸೂರ, ಗ್ರಾಮ ಪಂಚಾಯತಿ ಸದಸ್ಯ ದೇವನಗೌಡ ಮಾ ಧರ್ಮಗೌಡ, ಕಾರವೆ ಹುಬ್ಬಳ್ಳಿ ತಾಲೂಕ ಅಧ್ಯಕ್ಷ ಗಂಗನಗೌಡ ಶಿ ನರಗುಂದ ಕಾಲೇಜಿನ ಉಪನ್ಯಾಸಕರಾದ ಜಿ ಬಿ ತಾಶಿಲ್ದಾರ್, ಎಸ್ ಎಸ್ ಹಿರೇಗೌಡ್ರು, ಎಂ ಎಂ ಹಾದಿಮನಿ, ಕೆ ಎಂ ಮಲ್ಲಿಕಾರ್ಜುನಯ್ಯ, ಎಚ್ ಡಿ ಗುಂಡಪ್ಪಲ್ಲಿ, ಧಾರವಾಡ ಜಿಲ್ಲಾ ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಂ ಸದಾನಂದ, ಕಲಘಟಗಿ ತಾಲೂಕ ಅಧ್ಯಕ್ಷ ನಿಂಗಪ್ಪ ದೊಡ್ಡ ಪೂಜಾರ್, ಕಲಾವಿದ ಪ್ರಶಾಂತ್ ಎಮ್ ತಡಿಸನ್, ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸುದ್ಧಿ ಓದಿದ್ದೀರಾ? ಧಾರವಾಡ | ನಿರಂತರ ಸುರಿದ ಮಳೆಗೆ ಬೆಳೆಹಾನಿ: ಕಟಾವಿಗೆ ಬಂದ ಫಸಲು ಕೈತಪ್ಪಿದ್ದನ್ನು ಕಂಡ ರೈತರು ತಲ್ಲಣ

ತಾಲೂಕ ಅಧ್ಯಕ್ಷ ಈಶ್ವರಪ್ಪ ಹೊಳಮ್ಮನವರ್ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಸಂತೋಷ್ ಕುಮಾರ್ ಬಡಿಗೇರ ನಿರೂಪಿಸಿದರು. ಮಂಜುನಾಥ ಐ ಕೆ, ನಿರ್ವಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X