ಸಾಮಾನ್ಯವಾಗಿ ನಾವು ಕಾಣುವಂತೆ ಬಹುತೇಕರು ಕೇಕ್ ಕತ್ತರಿಸಿ ತಮ್ಮ ಜನುಮ ದಿನ ಆಚರಿಸಿಕೊಳ್ಳುತ್ತಾರೆ. ಆದರೆ ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಶಿಬಿರಾರ್ಥಿಗಳು ಉದ್ಯಾನವನ ಸ್ವಚ್ಛಗೊಳಿ ಹಾಗೂ ಸಸಿ ನೆಡುವುದರ ಮೂಲಕ ತಮ್ಮ ಹುಟ್ಟ ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಧಾರವಾಡ ಜಿಲ್ಲಾ ನೂಡಲ್ ಅಧಿಕಾರಿ ಡಾ. ಬಸವರಾಜ ತಲ್ಲೂರ ಮಾರ್ಗದರ್ಶನದಲ್ಲಿ ಎನ್ಎಸ್ಎಸ್ ಶಿಬಿರಾರ್ಥಿಗಳಾದ ಆಕಾಶ ಹಾಗೂ ಬೀರಪ್ಪ ತಮ್ಮ ಹುಟ್ಟು ಹಬ್ಬಕ್ಕೆ ಕೇಕ್ ಕತ್ತರಿಸಿಕೊಳ್ಳದೆ ಉದ್ಯಾನವನವನ್ನು ಸ್ವಚ್ಛಗೊಳಿಸುವ ಹಾಗೂ ಸಸಿ ನೆಡುವುದರ ಮೂಲಕ ಶ್ರಿನಗರವನ್ನು ಸ್ವಚ್ಛಗೊಳಿಸಿದರು. ಈ ರೀತಿಯ ವಿಶೇಷ ಆಚರಣೆ ಶಿಬಿರಾರ್ಥಿಗಳಲ್ಲಿ ಬಹಳ ಉತ್ಸಾಹ ತಂದಿತ್ತು.

ಈ ಕುರಿತು ನೂಡಲ್ ಅಧಿಕಾರಿ ಡಾ. ಬಸವರಾಜ ತಲ್ಲೂರ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಈ ಬಗೆಯ ವಿಶಿಷ್ಠ ಹುಟ್ಟು ಹಬ್ಬದ ಆಚರಣೆಯನ್ನು ಆಚರಿಸಿಕೊಳ್ಳುತ್ತಿದ್ದು, ನಮ್ಮ ದಾರಿಯಲ್ಲಿ ನಮ್ಮ ವಿದ್ಯಾರ್ಥಿಗಳೂ ಸರಳವಾಗಿ ನಡೆಯುತ್ತಿರುವುದು ಸಂತಸ ತಂದಿದೆ. ಹೀಗೇ ಸಾಧ್ಯವಾದಷ್ಟು ಹುಟ್ಟು ಹಬ್ಬದ ಸಂದರ್ಭದಲ್ಲಿ ಸ್ವಚ್ಛತೆ ಇತ್ಯಾದಿ ಸಾಮಾಜಿಕ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು. ಡಾ. ವಿಳಾಸ ಕುಲಕರ್ಣಿ ಮಾತನಾಡಿ ಸಂತಸ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಕಾರು ಲಾರಿ ಡಿಕ್ಕಿ; 5 ಮಂದಿ ಸ್ಥಳದಲ್ಲೇ ಸಾವು
ಈ ವೇಳೆ ಎನ್ಎಸ್ಎಸ್ ಸ್ವಯಂ ಸೇವಕರು ಇದ್ದರು.