ಮಾಳಮಡ್ಡಿಯ ಪ್ರಶಾಂತ ಬಂಜೆತನ ಹಾಗೂ ಐವಿಎಫ್ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 23ಕ್ಕೆ ಉಚಿತ ಬಂಜೆತನ ತಪಾಸಣೆ ಶಿಬಿರವನ್ನು ಧಾರವಾಡದ ನಗ್ಗಿಕೇರಿ ಹನುಮಂತ ದೇವಸ್ಥಾನದಲ್ಲಿ ಬೆಳಿಗ್ಗೆ 9 ಗಂಟೆಯಿಂದ ದೇವಸ್ಥಾನದ ವತಿಯಿಂದ ಹಮ್ಮಿಕೊಂಡಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ ಕೋಮಲ ಕುಲಕರ್ಣಿ, ಉಚಿತ ಬಂಜೆತನ ಚಿಕಿತ್ಸಾ ಕಾರ್ಯಕ್ರಮವು ಸೇವಾ ಕಾರ್ಯಕ್ರಮವಾಗಿದ್ದು, ಜನರು ಇದರ ಸದುಪಯೋಗ ಪಡೆಯಬೇಕು. ಇತ್ತೀಚಿನ ದಿನಗಳಲ್ಲಿ ಬಂಜೆತನಕ್ಕೆ ತುತ್ತಾದ ರೋಗಿಗಳ ಸಂಖ್ಯೆ ಹೆಚ್ಚಾಗಿವೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರ ವರೆಗೆ, ತಪಾಸಣೆ ನಡೆಸಲಿದ್ದು, ಚಿಕ್ಕಮಕ್ಕಳ ತಜ್ಞರೂ ಆಗಮಿಸುತ್ತಾರೆ. ಇದುವರೆಗೆ ಶೇ. 60%ರಷ್ಟು ಯಶಸ್ವಿಯಾಗಿದ್ದು, ಮಕ್ಕಳನ್ನು ಪರೀಕ್ಷಿಸುವುದರೊಂದಿಗೆ, HB, ಎಲುಬು ಸಾಂದ್ರತೆ, ಶುಗರ ಪರೀಕ್ಷೆ, ಥೈರಾಯ್ಡ್ ಪರೀಕ್ಷೆ ಮಾಡಲಾಗುವದು ಎಂದರು.
ಇದನ್ನು ಓದಿದ್ದೀರಾ? ಉತ್ತರ ಕನ್ನಡ | ಯುವತಿಗೆ ಉದ್ಯೋಗ ಕೊಡಿಸಲು ಹೊರಟಿದ್ದ ಯುವಕನ ಮೇಲೆ ಹಲ್ಲೆ
ಪತ್ರಿಕಾಗೋಷ್ಠಿಯಲ್ಲಿ ಡಾ ಸಂಧ್ಯಾ ಕುಲಕರ್ಣಿ ಇದ್ದರು.