ಧಾರವಾಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ವಾಹನ ವಿಭಾಗ)ಯ ಆವರಣದಲ್ಲಿ ನಿರುಪಯುಕ್ತ ಪೊಲೀಸ್ ದ್ವಿಚಕ್ರ ವಾಹನಗಳ ಬಹಿರಂಗ ಹರಾಜು ನವೆಂಬರ್ 6, 2024 ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ವಾಹನಗಳನ್ನು ಸ್ಕ್ರ್ಯಾಪ್ ದರದಲ್ಲಿ ಖರೀದಿಸಲು ಆಸಕ್ತಿಯುಳ್ಳವರು ದ್ವಿಚಕ್ರ ವಾಹನಗಳ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಧಾರವಾಡ | ನೇಣು ಬಿಗಿದುಕೊಂಡು ಆತ್ಮಹ್ಯತ್ಯೆಗೆ ಶರಣಾದ ವಿದ್ಯಾರ್ಥಿನಿ
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.