ಪಠ್ಯೇತರ ಚಟುವಟಿಕೆಗಳ ಜೊತೆಗೆ ವಾರ್ಷಿಕೋತ್ಸವ ಮಾಡುವುದು ಮಕ್ಕಳ ಕಲಿಕೆಗೆ ಸಾಹಯವಾಗುತ್ತದೆ. ಇಂತಹ ಸಮಾರಣಭಗಳಿಂದ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಸಾಧ್ಯ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಎಂ ಬೈಕೋಡ್ ಹೇಳಿದರು.
ನಗರದ ಸತ್ಯಸಾಯಿ ವಿದ್ಯಾ ಮಂದಿರ ವಿದ್ಯಾಲಯದ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, “ತಂದೆ ತಾಯಿಯಂದರು ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವಂತಾಗಬೇಕು” ಎಂದರು.
ಧಾರವಾಡ ಶಹರದ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ್ ಅಡಿವರ್ ಮಾತನಾಡಿ, “ಮಕ್ಕಳ ಜೀವನದಲ್ಲಿ ಈ ವೇಷ ಭೂಷಣದ ರೂಪಕಗಳು ಮುಂದೊಂದು ದಿನ ಹೊಸ ಚೇತನ ನೀಡಬಲ್ಲವು. ಇಂತಹ ಕಾರ್ಯಕ್ರಮಗಳಿಂದ ಪ್ರತಿಭಾಶಾಲಿ, ಪ್ರತಿಭಾ ಸಂಪನ್ನತೆ ಗುರುತಿಸುವುದು ಸಾಧ್ಯ” ಎಂದರು.
ಈ ಸುದ್ದಿ ಓದಿದ್ದೀರಾ? ಕೆಯುಡಬ್ಲ್ಯುಜೆ ರಾಜ್ಯಮಟ್ಟದ ‘ಬ್ರ್ಯಾಂಡ್ ಮಂಗಳೂರು ರೋಹನ್ ಕಪ್’ -2024’ಕ್ರಿಕೆಟ್ ಪಂದ್ಯ; ಬೆಂಗಳೂರು ನಗರ ಪ್ರಥಮ, ಹಾಸನ ದ್ವಿತೀಯ
ಶಾಲೆಯ ಮುಖ್ಯ ಶಿಕ್ಷಕಿ ಶೀಲಾ ಮಂಗೇಶ್ ಕೋರನ್ ಮಾತನಾಡಿ, “ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸುವುದು ಶಾಲೆಯ ಕರ್ತವ್ಯವಾಗಿದ್ದು, ಮಕ್ಕಳಿಗೆ ಸೂಕ್ತ ವೇದಿಕೆಯನ್ನು ಸಿದ್ದಪಡಿಸಿ ಮಕ್ಕಳ ಪ್ರತಿಭೆಗೆ ಸಾಕ್ಷಿಯಾಗಿದೆ” ಎಂದು ಹೇಳಿದರು.
ಇದೇ ವೇಳೆ ಗೋಪಾಲ್ ಎಂ ಬೈಕೋಡ್, ಧಾರವಾಡ ಶಿಕ್ಷಣಾಧಿಕಾರಿ ಅಶೋಕ ಸಿಂಧಗಿ, ಮಂಜುನಾಥ್ ಅಡ್ವೇರ ಅವರನ್ನು ಸನ್ಮಾನಿಸಿದರು.
ಶಾಲೆಯ ಎಲ್ಲ ಮಕ್ಕಳು ಮಕ್ಕಳಿಂದ ಸಂಗೀತ, ನೃತ್ಯ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ, ಪಾಲಕರು ಇದ್ದರು.