ಮಗುವಿನ ಸರ್ವಾಂಗೀನ ವ್ಯಕ್ತಿತ್ವ ವಿಕಾಸದಲ್ಲಿ ಶಾಲಾ ಶಿಕ್ಷಕರು ಎಷ್ಟು ಮಹತ್ವದ ಪಾತ್ರ ನಿರ್ವಹಿಸುವರೋ, ಅಷ್ಟೇ ಪ್ರಮುಖ ಪಾತ್ರ ಪಾಲಕರು ಸಹ ನಿರ್ವಹಿಸಬೇಕು. ಮಕ್ಕಳ ಚಟುವಟಿಕೆ ಕುರಿತು ಪಾಲಕರು ಗಮನಹರಿಸಬೇಕು ಎಂದು ಅಂಜುಮನ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆಯ.ಎ .ಮುಲ್ಲಾ ಹೇಳಿದರು.
ನಗರದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಪಿ.ಜಿ ಅಧ್ಯಯನ ಕೇಂದ್ರದಲ್ಲಿ “ಪಾಲಕರು ಶಿಕ್ಷಕರ ಸಭೆಯ” ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಕ್ಕಳೊಂದಿಗೆ ಭಾವನಾತ್ಮಕವಾಗಿ ಉತ್ತಮ ಸಂಬಂಧ ಹೊಂದಿರಬೇಕು ಹಾಗೂ ಅವರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸಬೇಕು. ಶಿಕ್ಷಕರ ಜೊತೆಗೆ ಪಾಲಕರೂ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಖಾಳಜಿವಹಿಸಬೇಕು ಎಂದರು.
ಇದೇ ವೇಳೆ ರಿಜವಾನ್ ಅಹಮದ್ ಬಿ.ಎಸ್ಸಿ ವಿಭಾಗದ ಸಾಧನೆ ಮತ್ತು ವಿವಿಧ ಕಾರ್ಯಕ್ರಮಗಳ ವಿವರ ಪಿ.ಪಿ.ಟಿ ಮೂಲಕ ತಿಳಿಸಿದರು. ಉಲ್ಲಾಸ್ ದೊಡ್ಡಮನಿ ವಾಣಿಜ್ಯ ಕೋರ್ಸ್‌ದೊಂದಿಗೆ ದೊರೆಯಬಹುದಾದ ಉದ್ಯೋಗಾವಕಾಶಗಳ ಕುರಿತು ತಿಳಿಸಿದರು. ಡಾ. ಅಧೋನಿ ಮಾತನಾಡಿ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು. ಪಾಲಕರ ಅನಿಸಿಕೆಯಲ್ಲಿ ಉಮಾ ಚೌಹಾನ್ ಮಾತನಾಡಿ, ಪಾಲಕರು ಆಗಾಗ ಶಿಕ್ಷಕರೊಂದಿಗೆ ಸಂಪರ್ಕದಲ್ಲಿದ್ದು ಮಗುವಿನ ಕುರಿತು ಮಾಹಿತಿ ಪಡೆಯುತ್ತಿರಬೇಕು ಎಂದರು. ಐ.ಕ್ಯೂ.ಎ .ಸಿ ಸಂಯೋಜಕ ಡಾ. ಏನ್ .ಬಿ ನಲತವಾಡ ಸ್ವಾಗತಿಸುತ್ತಾ, ಪಾಲಕರು-ಶಿಕ್ಷಕರ ಸಭೆಯ ಉದ್ದೇಶ ತಿಳಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಏನ್.ಬಿ.ಗುದಗನವರ್ ಪಿ.ಪಿ.ಟಿ ಮೂಲಕ ಕಾಲೇಜಿನ ಪರಿಚಯ ಮಾಡಿದರು.
ಇದನ್ನು ಓದಿದ್ದೀರಾ? ಧಾರವಾಡ | ದ್ವಾಮವ್ವ, ದುರ್ಗವ್ವ ಮೂರ್ತಿ ಹೊತ್ತು ಭಾವೈಕ್ಯ ಮೆರೆದ ಮುಸ್ಲಿಮರು
ಕಾರ್ಯಕ್ರಮದಲ್ಲಿ ಅಹಮದ್‌ರಜಾ ಪಠಾಣ್ ಕುರಾನ್ ಪಠಣ ಮಾಡಿದರು, ವಿದ್ಯಾರ್ಥಿ ಪ್ರವೀಣ್ ಲಮಾಣಿ ಶ್ಲೋಕ ಪಠಿಸಿದರು. ದಿನಾಚರಣೆ ಸಮಿತಿಯ ಅಧ್ಯಕ್ಷೆ ಡಾ. ಸೌಭಾಗ್ಯ ಜಾದವ್ ಕಾರ್ಯಕ್ರಮ ನಿರೂಪಿಸಿದರು. ಶ್ರುತಿ ಯಾವಗಲ್‌ಮಠ ವಂದಿಸಿದರು.