ಧಾರವಾಡದ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆ (ಇಂಟ್ಯಾಕ್) ವತಿಯಿಂದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ 7, 8 ಮತ್ತು 9ನೇ ತರಗತಿ ಶಾಲಾ ಮಕ್ಕಳಿಗೆ ಪೋಸ್ಟರ್ ರಚಿಸುವ ಸ್ಪರ್ಧೆಯನ್ನು ಆಯೋಜಿಸಿದ್ದರು.
ಸ್ಪರ್ದೆಯಲ್ಲಿ ಹುಬ್ಬಳ್ಳಿ-ಧಾರವಾಡದ ವಿವಿಧ ಶಾಲೆಗಳ ಸುಮಾರು 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಕುರಿತು ಭಾರತದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಮೀಸಲಾದ ದೇಶದ ಅತಿ ದೊಡ್ಡ ಸಂಸ್ಥೆ ಇಂಟ್ಯಾಕ್ ಎಂದು ಡಾ.ಆರ್.ಜಿ.ಪುರಾಣಿಕ ಹೇಳಿದರು.
ಚಿತ್ರ ಕಲಾ ಮಹಾವಿದ್ಯಾಲಯದ ಪ್ರೊ. ಎಸ್.ಕೆ.ಪತ್ತಾರ, ಪೋಸ್ಟರ್ ತಯಾರಿಸುವ ಕುರಿತು ವಿವರಿಸಿದರು. ಇಂಟ್ಯಾಕ್ ಸಂಚಾಲಕ ಡಾ. ಮೋಹನ ಮಠ, ಸಾಂಸ್ಕೃತಿಕ ಪರಂಪರೆಯನ್ನು ಒಳಗೊಂಡ ಪ್ರಾದೇಶಿಕ ಹಬ್ಬಗಳು, ಸಂಪ್ರದಾಯ, ಪದ್ಧತಿ ಮತ್ತು ಸಾಮಾಜಿಕ ಆಚರಣೆಗಳ ಕುರಿತು ಪೋಸ್ಟರ್ ರಚಿಸಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು.
ಈ ವರದಿ ಓದಿದ್ದೀರಾ? ಉತ್ತರ ಕನ್ನಡ | ಮಂಗನಬಾವು ಸೋಂಕು 130ಕ್ಕೆ ಏರಿಕೆ: ಜಿಲ್ಲಾ ವೈದ್ಯಾಧಿಕಾರಿ ಹೇಳಿದ್ದೇನು?
ಸಂಸ್ಥೆಯ ಸದಸ್ಯ ಸುರೇಶ ಹಾಲಭಾವಿ, ಶೈಲಾ ಕರಗುದರಿ, ಬಿ.ಆರ್.ಸಾರಥಿ, ಡಾ.ಶಶಿಧರ ನರೇಂದ್ರ, ರೇಖಾ ಶೆಟ್ಟರ, ಡಾ.ರಾಜಶ್ರೀ ಗುದಗನವರ, ಗಝಲ್ ಕಾಮತ್ ಉಪಸ್ಥಿತರಿದ್ದರು. ಪ್ರೊ.ಸುರೇಶ ಗುದಗನವರ ಸ್ವಾಗತಿಸಿದರು. ಡಾ.ಎನ್. ಬಿ.ನಾಲತವಾಡ ನಿರೂಪಿಸಿದರು. ಲತಾ ಶಹಾಪುರ ವಂದಿಸಿದರು.