ಇಪಿಎಸ್ ನಿವೃತ್ತರ ಪಿಂಚಣಿ ಮೊತ್ತವನ್ನು ಹೆಚ್ಚಿಗೆ ಮಾಡಲು ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಮಂಡಳಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು.
ಇಪಿಎಸ್ ನೌಕರ ಹೋರಾಟ ಸಂಘದ ಪ್ರಧಾನ ಕಾರ್ಯದರ್ಶಿ ಸಿ ಎನ್ ಹಿರೇಮಠ ಮಾತನಾಡಿ, 2013 ರಿಂದ ಪಿಂಚಷಿ ಹೋರಾಟ ನಡೆಸಿದ ನಮಗೆ ಸದ್ಯ 1000 ರಿಂದ 3000 ಪಿಂಚಣಿ ಕೊಡುತ್ತಿದ್ದು, ಅದು ವಾರದ ಖರ್ಚಿಗೂ ಸಾಲುವುದಿಲ್ಲ. ಹೀಗಾಗಿ ಕೇಂದ್ರ ಡಿಎ, ನಮ್ಮ ಮಕ್ಕಳ ಮೆಡಿಕಲಗ ಮರುವೆಚ್ಚ ನೀಡಬೇಕು. ಕನಿಷ್ಠ 9000 ಕೊಟ್ಟರೆ ನಮಗೆ ಅನುಕೂಲವಾಗುತ್ತದೆ. ಈ ಕುರಿತು ಹಿಂದಿನ ಕಾಂಗ್ರೆಸ್ ಸರ್ಕಾರವೂ ಮತ್ತು ಇಂದಿನ ಬಿಜೆಪಿ ಸರ್ಕಾರವೂ ತಲೆಕೆಡಿದಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ ವಿಭಾಗದ ಅಧ್ಯಕ್ಷ ಎ ಎಚ್ ಕುಲಕರ್ಣಿ ಮಾತನಾಡಿ, ನ್ಯಾಯಯುತವಾಗಿ ನಮಗೆ ದೊರೆಯಬೇಕಿದ್ದ, 1995 ಇಪಿಎಸ್ ಪಿಂಚಣಿ ಕೇಳುತ್ತಿದ್ದೇವೆ. ಕೂಡಲೆ ಪಿಂಚಣಿ ಜಾರಿಗೊಳಿಸಬೇಕು. ಇಪಿಎಸ್ ನಿವೃತ್ತರು ಹಾಗೂ ಅವಲಂಬಿತರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಒದಗಿಸುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಮಾಡಿಕೊಂಡರು.
ಇದನ್ನು ಓದಿದ್ದೀರಾ? ಧಾರವಾಡ | ಆಟೋ-ಲಾರಿ ಮಧ್ಯೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು
ರಾಜಶೇಖರ ಕೋಪರ್ಡೆ, ಕೆ.ಎಚ್.ಕುಲಕರ್ಣಿ, ಎಚ್.ಎ.ಜಾಗೀರದಾರ, ಸಿ.ಎನ್.ಹಿರೇಮಠ, ಬಿ.ಎನ್.ಘೋರ್ಪಡೆ ಇತರರು ಮನವಿ ಸಲ್ಲಿಸಿದರು.