ಧಾರವಾಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿದು ಜಿಲ್ಲೆಯ ಕುಂದಗೋಳ ಪಟ್ಟಣದ ಪರಿವೀಕ್ಷಣಾ ಮಂದಿರ ಹಾಗೂ ಲೋಕೊಪಯೋಗಿ ಇಲಾಖೆ ಕಚೇರಿ ಮುಂಭಾಗದಲ್ಲಿ ನೀರು ಆವೃತಗೊಂಡಿದೆ.
ಕಚೇರಿ ಮುಂಭಾಗದಲ್ಲಿ ಮೊಣಕಾಲು ಉದ್ದ ನೀರು ನಿಂತಿದ್ದು, ಕಚೇರಿಗೆ ಬರುವ ಹೋಗುವವರಿಗೆ ಓಡಾಡಲು ಬಹಳಷ್ಟು ತೊಂದರೆ ಉಂಟಾಗಿದ್ದು, ಅನಿವಾರ್ಯವಾಗಿ ಕಾಂಪೌಂಡ್ ಜಿಗಿದು ಕಚೇರಿಗೆ ಹೋಗುವ ವಾತಾವರಣ ಸೃಷ್ಟಿಯಾಗಿದೆ.
ಇದನ್ನು ಓದಿದ್ದೀರಾ? ಪ್ರವಾದಿಗಳ ಬಗ್ಗೆ ಪ್ರಚೋದನಾತ್ಮಕ ಹೇಳಿಕೆ: ಯತಿ ನರಸಿಂಹಾನಂದ ವಿರುದ್ಧ ರಾಯಚೂರಿನಲ್ಲೂ ಎಫ್‌ಐಆರ್
ಲೋಕೋಪಯೋಗಿ ಇಲಾಖೆ ಎದುರೇ ಮಳೆ ನೀರು ತುಂಬಿಕೊಂಡು ಸಣ್ಣ ಕರೆಯಂತಾಗಿರುವಾಗ, ಸಾರ್ವಜನಿಕ ಸ್ಥಳಗಳ ಗತಿಯೇನು? ಎಂದು ಸ್ಥಳೀಯರೊಬ್ಬರು ಪ್ರಶ್ನಿಸಿದರು.