ಸತ್ಯ, ಶಾಂತಿ, ಅಹಿಂಸಾ ಮೌಲ್ಯಗಳು ಮರೆಯಾಗುತ್ತಿರುವ ಪ್ರಸ್ತುತದಲ್ಲಿ ಮಹಾತ್ಮಾ ಗಾಂಧೀಜಿ ಸ್ಮರಣೆ ಎಂದಿಗಿಂತ ಇಂದು ಹೆಚ್ಚು ಅಗತ್ಯವಾಗಿದೆ ಎಂದು ಸಿದ್ದವೀರ ಸತ್ಸಂಗ ಸಂಸ್ಥಾಪಕ ಮತ್ತು ಖ್ಯಾತ ಕಾಮಣೆ ತಜ್ಞ ಡಾ. ನಿತಿನ್ ಚಂದ್ರ ಹತ್ತಿಕಾಳ ಹೇಳಿದರು.
ನಗರದ ಸಿದ್ದುವೀರ ಸತ್ಸಂಗ ಮತ್ತು ಬಾಸೆಲ್ ಮಿಶನ್ ಬಾಲಿಕಾ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಗಾಂಧೀಜಿ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಗಾಂಧೀಜಿ ತತ್ವಗಳು ಮರೆಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅವುಗಳಿಗೆ ಜೀವ ತುಂಬುವ ಕೆಲಸವನ್ನು ಸಿದ್ದವೀರ ಸತ್ಸಂಗ ಮಾಡುತ್ತಾ ಬಂದಿದೆ. ಇತ್ತೀಚಿಗೆ ಸತ್ಯ, ಶಾಂತಿ, ಅಹಿಂಸಾ ಮೌಲ್ಯಗಳು ಮರೆಯಾಗುತ್ತಿದ್ದು ಗಾಂಧಿ ವಿರೋಧಿ ನಡೆಗಳು ಹೆಚ್ಚಾಗುತ್ತಿವೆ. ಎಂದಿಗಿಂತಲೂ ಇಂದು ಗಾಂಧೀಜಿ ಸ್ಮರಣೆ ಹೆಚ್ಚು ಅಗತ್ಯವಾಗಿದೆ ಎಂದರು.
ಸತ್ಸಂಗದ ಸಹಕಾರ್ಯದರ್ಶಿ ಬಸವರಾಜ ತಾಳಿಕೋಟೆ, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳ ಜೀವನದ ಬಗ್ಗೆ ವಿವರಿಸಿದರು. ಹಿರಿಯ ಪತ್ರಕರ್ತ ಗಣೇಶ ಕದಂ, ಸಿದ್ದು ವೀರ ಸತ್ಸಂಗ ನಡೆದು ಬಂದ ದಾರಿ ಬಗ್ಗೆ ಮಾತನಾಡಿದರು. ಹೆಬಿಕ ಸ್ಮಾರಕ ದೇವಾಲಯದ ಸಭಾಪತಿ ಸ್ಯಾಮ್ಯುಯೆಲ್ ಕ್ಯಾಲ್ವಿನ್ ಕಾರ್ಯಕ್ರಮ ಉದ್ಘಾಟಿಸಿದರು. ಸತ್ಸಂಗದ ಪ್ರಧಾನ ಕಾರ್ಯದರ್ಶಿ ವಿಲ್ಸನ್ ಮೈತಿ ಸ್ವಾಗತಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರವೀಂದ್ರ ಶಿಕೋಳಕರ, ದೀಪಕ್ ಅಂಗಡಿ, ಸೋಮಶೇಖರ್ ಚನ್ನಶೆಟ್ಟಿ, ಬಸವಣ್ಣೆಪ್ಪ ಉಣಕಲ್ ಅವರನ್ನು ಸನ್ಮಾನಿಸಿದರು. ಸುವರ್ಣಾ ಢವಳೆ ನಿರೂಪಿಸಿದರು. ಅಲೀಸ ಧರ್ಮದಾಸ ಒಂದಾರ್ಪಣೆ ಮಾಡಿದರು. ಏಸ್ತೇರ ತುಮಕೂರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.