ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರು ಸೇರಿ ಹಲವು ಮೂಲ ಸೌಕರ್ಯ ಸಮರ್ಪಕವಾಗಿ ಒದಗಿಸಿದಾಗ ಮಾತ್ರ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಆಗುವುದರೊಂದಿಗೆ ದೇಶದ ಉನ್ನತಿಗೂ ಸಹಾಯವಾಗುತ್ತದೆ ಎಂದು ನವಲಗುಂದ ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ನವಲಗುಂದ ತಾಲೂಕಿನ ಬ್ಯಾಹಟ್ಟಿ-ಮೊರಬ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆ ಮಾಡಲು ಸರಿಯಾಗಿ ರಸ್ತೆ ಇಲ್ಲದೆ ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿ, ಈ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಇನ್ನು ರೈತರಿಗೆ ಈ ರಸ್ತೆ ತುಂಬಾ ಅನುಕೂಲವಾಗಲಿದೆ ಎಂದು ಭರವಸೆ ನೀಡಿದರು.
ಬಿಜೆಪಿಯ ದುರಾಡಳಿತದಲ್ಲಿ ಬಡವರು, ರೈತರು ಬದುಕುವುದು ಕಷ್ಟವಾಗಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪ್ರಗತಿಯ ಹಾದಿಯಲ್ಲಿ ಈಗಾಗಲೆ ನಡೆಯಲು ಶುರುಮಾಡಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಬ್ಯಾಹಟ್ಟಿಯಿಂದ ಕಿರೇಸೂರ ರಸ್ತೆಯಲ್ಲಿ ಶಿಥಿಲವಾದ ಸೇತುವೆ ವೀಕ್ಷಿಸಿ ಆದಷ್ಟು ಬೇಗ ದುರಸ್ತಿ ಮಾಡಿಕೊಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಅತ್ಯಾಚಾರ ಆರೋಪಿ ಮುರುಘಾಶ್ರೀ ಪೀಠತ್ಯಾಗಕ್ಕೆ ಮಾಜಿ ಸಚಿವ ಒತ್ತಾಯ