ದೇಶವನ್ನು ಒಗ್ಗೂಡಿಸುವಲ್ಲಿ ಸರ್ದಾರ ವಲ್ಲಭಾಯಿ ಪಟೇಲ್ ಪ್ರಯತ್ನ ಶ್ರಾಘನೀಯ ಮತ್ತು ಅವರು ದೇಶಕ್ಕೆ ಮಾದರಿ ಎಂದು ಪ್ರಾಂಶುಪಾಲ ಎನ್.ಎಂ. ಮಕಾಂದರ್ ಧಾರವಾಡದ ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ದಿನಾಚರಣೆ ಸಮಾರಂಭದಲ್ಲಿ ಹೇಳಿದರು.
ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ನವೆಂಬರ್ 2ರಂದು ಹಮ್ಮಿಕೊಂಡಿದ್ದರು. ಎನ್ಎಸ್ಎಸ್ ಅಧಿಕಾರಿ ಡಾ. ನಾಗರಾಜ್ ಗುದಗನವರ್ ಮಾತನಾಡಿ, 2014ರಲ್ಲಿ ಸರ್ಕಾರವು ವಲ್ಲಭಬಾಯಿ ಪಟೇಲ್ ಪರಂಪರೆಯ ಗೌರವಾರ್ಥವಾಗಿ ಅಕ್ಟೋಬರ್ 31ರಂದು ರಾಷ್ಟ್ರೀಯ ಏಕತಾ ದಿನವನ್ನು ಗೊತ್ತು ಪಡಿಸಿತು. ರಾಷ್ಟ್ರವನ್ನು ಒಗ್ಗೂಡಿಸುವ ಅವರ ಕೆಲಸದಿಂದ ಅವರಿಗೆ ಭಾರತದ ಉಕ್ಕಿನ ಮನುಷ್ಯ ಎಂಬ ಹೆಸರಿನಿಂದ ಕರೆಯಲಾಯಿತು ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ನೇಣು ಬಿಗಿದುಕೊಂಡು ಆತ್ಮಹ್ಯತ್ಯೆಗೆ ಶರಣಾದ ವಿದ್ಯಾರ್ಥಿನಿ
ಡಾ. ಐ ಎ ಮುಲ್ಲಾ, ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆ ಬೋಧಿಸಿದರು. ಕಾರ್ಯಕ್ರಮದಲ್ಲಿ ಡಾ. ಎನ್ ಬಿ ನಾಲತವಾಡ, ಪ್ರೊ ಮುಬಾರಕ್ ಮುಲ್ಲಾ ಉಪಸ್ಥಿತರಿದ್ದರು. ಡಾ. ಜಾದವ್ ಕಾರ್ಯಕ್ರಮ ನಿರುಪಿಸಿದರು ಮತ್ತು ಡಾ. ತಾಜೂನಿಸ್ಸಾ ವಂದನಾರ್ಪಣೆ ಸಲ್ಲಿಸಿದರು.