ಧಾರವಾಡ | ಶರಣರು ಚಲನೆಯ ತತ್ವವನ್ನು ಪ್ರತಿಪಾದಿಸುತ್ತಾರೆ: ರೆಹಮತ್ ತರೀಕೆರೆ

Date:

Advertisements

ಶರಣರು ಚಲನೆಯ ತತ್ವವನ್ನು ಪ್ರತಿಪಾದಿಸಿದ್ದು, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದು ದೃಢವಾಗಿ ನಂಬಿದ್ದರು. ಕಲ್ಯಾಣದಲ್ಲಿ ಅತೀ ಹೆಚ್ಚು ಕುಶಲಕರ್ಮಿಗಳು ಸಿಗುತ್ತಾರೆ. ಕುಶಲಕರ್ಮಿಗಳೆಲ್ಲ ಬಸವಣ್ಣನವರಿಗೆ ಘನತೆ ತಂದುಕೊಟ್ಟರು ಎಂದು ಚಿಂತಕ ರೆಹಮತ್ ತರೀಕೆರೆ ಹೇಳಿದರು.

ಆದ್ಯ ವಚನಕಾರ ಜೇಡರ ದಾಸಿಮಯ್ಯ ಜಯಂತುತ್ಸವದ ಅಂಗವಾಗಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ, ಜೇಡರ ದಾಸಿಮಯ್ಯ ವಚನಗಳ ದತ್ತಿ ಉಪನ್ಯಾಸದಲ್ಲಿ ನೇಕಾರ ಸಂಸ್ಕೃತಿ ಮತ್ತು ಅನುಭಾವ ವಿಚಾರವಾಗಿ ಅವರು ಮಾತನಾಡುತ್ತಾ, ಆದ್ಯ ವಚನಕಾರ ದೇವರ ದಾಸಿಮಯ್ಯ ಅನ್ನುವದಕ್ಕಿಂತ ಜೇಡರ ದಾಸಿಮಯ್ಯ ಅನ್ನುವುದು ಸೂಕ್ತವಾಗುತ್ತದೆ. ವಿಶೇಷವಾಗಿ ದಾಸಿಮಯ್ಯ ತಮ್ಮ ವಚನಗಳಲ್ಲಿ ಅತ್ಯಂತ ಹೆಚ್ಚು ಪ್ರಾಣಿ ರೂಪಕಗಳನ್ನು ಬಳಸುತ್ತಾರೆ. ಕಲ್ಯಾಣದಲ್ಲಿ ಸಾಮಾನ್ಯರು ಲಿಂಗದೀಕ್ಷೆ ಪಡೆದು ಶರಣರಾಗಿ ರೂಪಾಂತರವಾದರು. ಕಲ್ಯಾಣವೆಂಬುದು ಪಟ್ಟಣವಾಗಿತ್ತು ಆದ್ಧರಿಂದ ಎಲ್ಲ ರೀತಿಯ ಕುಶಲಕರ್ಮಿಗಳು ಅಲ್ಲಿಗೆ ಧಾವಿಸಿದರು.

IMG 20250505 090012

ಮುಖ್ಯವಾಗಿ ಶರಣರು ಚಲನೆಯ ತತ್ವವನ್ನು ಪ್ರತಿಪಾದನೆ ಮಾಡುತ್ತಾರೆ. ಕುಶಲಕರ್ಮಿಗಳಲ್ಲಿ ಕಾಯಕನಿಷ್ಠೆ ಇತ್ತು. ಕಾಯಕದೊಂದಿಗೆ ವೃತ್ತಿಧರ್ಮವನ್ನು ಪಾಲಿಸಿದರು. ಅನುಭವ ಮೂಲಕ ಅನುಭಾವದ ಶಿಖರವನ್ನೇರಿದರು. ಕಲ್ಯಾಣದಲ್ಲಿ ಎಲ್ಲ ರೀತಿಯ ಸಮಾನತೆ ಇತ್ತು. ಸಮಾಜದಲ್ಲಿ ಸಮಾನತೆ ತರುವುದು ಕಷ್ಟವಾದರೂ ಸಮಾನತೆಯ ಕನಸು ಕಾಣುವುದ ನಿಲ್ಲಿಸಬಾರದು ಎಂಬ ಅಂಬೇಡ್ಕರರ ಮಾತನ್ನು ಈ ವೇಳೆ ನೆನಪಿಸಿಕೊಂಡರು. ಬಹುಶಃ ಬಸವಣ್ಣನವರ ಕಾಲದಲ್ಲಿ ಕುಶಲಕರ್ಮಿಗಳ ಶ್ರಮಕ್ಕೆ ಅಷ್ಟೊಂದು ಬೆಲೆ ಇರಲಿಲ್ಲ ಅನಿಸುತ್ತದೆ. ಅದರಿಂದ ನೊಂದು, ಬೆಂದ ಎಲ್ಲ ಕಾಯಕ ವರ್ಗದವರು ಬಸವಣ್ಣನವರ ಸಾಮಿಪ್ಯ ಬಯಸಿ ಬಂದರು. ಇದರಿಂದ ಚಲನಶೀಲ ತತ್ವಗಳು ಬಹಳ ಮುಖ್ಯವಾಗಿವೆ ಎಂದು ಸಾಬೀತಾಯಿತು ಎಂದರು.

Advertisements

ಈ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕಿ ಶಾಂತಾ ಇಮ್ರಾಪುರ ಮಾತನಾಡಿ, ದೇವರ ದಾಸಿಮಯ್ಯ ಮುಂಬರುವ ಶರಣರಲ್ಲಿ ವೈಚಾರಿಕತೆಯ ಬೀಜ ಬಿತ್ತಿದರು. ದಾಸಿಮಯ್ಯ ವಚನ ಚಳುವಳಿಗೆ ತಾತ್ವಿಕ ನೆಲೆಗಟ್ಟು ತಂದುಕೊಟ್ಟರು ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಧರ್ಮದ ಕಾಲಂ’ನಲ್ಲಿ ‘ನವಬೌದ್ಧ’ ಎಂದು ನಮೂದಿಸಲು ಮೂಲನಿವಾಸಿ ದ್ರಾವಿಡ ಒಕ್ಕೂಟ ಕರೆ

ಈ ವೇಳೆ ಸತೀಶ್ ತುರಮರಿ, ಶಂಕರ ಹಲಗತ್ತಿ, ವೀರಣ್ಣ ವಡ್ಡಿನ, ಜಿನದತ್ತ ಹಡಗಲಿ, ಬಸವಪ್ರಭು ಹೊಸಕೇರಿ, ಪ್ರೊ. ಐ ಜಿ ಸನದಿ, ಸುರೇಶ್ ಭಂಡಾರಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X