ಧಾರವಾಡ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್ ನವಲಗುಂದ ತಾಲೂಕಿನ ಶಿರೂರು ಗ್ರಾಮ ಪಂಚಾಯತಿಯ ಡಿಜಿಟಲ್ ಲೈಬ್ರರಿ ಅರಿವು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಕಥೆ ಕವನ ಕಾದಂಬರಿ ಹಾಗೂ ಸ್ವರ್ದಾತ್ಮಕ ಪುಸ್ತಕಗಳು ಅರಿವು ಕೇಂದ್ರದಲ್ಲಿ ಲಭ್ಯವಿದ್ದು ಶಾಲಾ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ ಎಂದು ತಿಳಿಸಿದರು. ಗ್ರಾಮದ ಯುವಕನೋರ್ವ ಮಹೇಶ್ ತೊಗಲಂಗಿ ಪ್ರಜಾಪ್ರಭುತ್ವದ ಬಗ್ಗೆ ಅಂಬೇಡ್ಕರ್ ಚಿಂತನೆ ಕುರಿತು ಪಿ ಎಚ್ ಡಿ ಮಾಡುತ್ತಿದ್ದಾರೆ. ಗ್ರಾಮದ ಶಾಲಾ ಮಕ್ಕಳು ಅರಿವು ಕೇಂದ್ರದ ಸುದುಪಯೋಗ ಮಾಡಿಕೊಂಡಿದ್ದಾರೆ ಎಂದರು.
ಪ್ರತಿದಿನ ಅರಿವು ಕೇಂದ್ರದಲ್ಲಿ ಗ್ರಾಮದ ಹಿರಿಯರು ಭೇಟಿ ನೀಡುತ್ತಿದ್ದು ಅರಿವು ಕೇಂದ್ರದಲ್ಲಿ ಇರತಕ್ಕ ಪುಸ್ತಕಗಳನ್ನು ಓದುತ್ತಾ ಆಧ್ಯಾತ್ಮಿಕ ಚಿಂತನೆ ಎಂಬ ಪುಸ್ತಕವನ್ನು ಗ್ರಾಮದ ಹಿರಿಯ ಈರಪ್ಪ ಸನಮನಿ ಬರೆದಿದ್ದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ಏ. 30 ರಂದು ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ
ನಂತರ ಶಿರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯಗಳ ಕುರಿತು ಚರ್ಚಿಸಿದರು.