ಗಾಂಧಿ ತತ್ವಗಳು ವಿದ್ಯಾರ್ಥಿಗಳ ಜೀವನ ಬದಲಿಸಬಲ್ಲವು. ಆದ್ಧರಿಂದ ವಿದ್ಯಾರ್ಥಿಗಳು ಗಾಂಧಿ ತತ್ವ ಅಳವಡಿಸಿಕೊಳ್ಳಿ ಎಂದು ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಹೇಳಿದರು.
ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಮತ್ತು ಡಾ ಸುಶೀಲಾ ಮುರಿಗೆಪ್ಪ ಶೇಷಗಿರಿ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ದಿಗಂತ್ ಗುರಪ್ಪ ಹಾಗೂ ಗೌರಮ್ಮ ಬೆಲ್ಲದ ಮತ್ತು ಜಾಕೀರ್ ಕಾಲಿ ಮಿರ್ಚಿ ಇನ್ನೀತರ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಇಲ್ಲದೆ, ದುಶ್ಚಟಗಳ ದಾಸರಾಗುತ್ತಿದ್ದಾರೆ.
ಅಸತ್ಯವನ್ನೇ ಸತ್ಯವೆಂಬ ಭ್ರಮೆಯಲ್ಲಿ ಇಂದಿನ ಯುವ ಜನಾಂಗವಿದ್ದು, ಅಹಿಂಸೆಯನ್ನು ಗಾಳಿಗೆ ತೂರಿದೆ. ಈ ಹಿನ್ನಲೆಯಲ್ಲಿ ಗಾಂಧಿತತ್ವಗಳು ವಿದ್ಯಾರ್ಥಿಗಳ ಜೀವನ ಬದಲಿಸಬಲ್ಲವು. ಆದ್ಧರಿಂದ ವಿದ್ಯಾರ್ಥಿಗಳು ಗಾಂಧಿ ತತ್ವ ಅಳವಡಿಸಿಕೊಳ್ಳಿ ಎಂದರು.
ಮಹಾತ್ಮಾ ಗಾಂಧೀಜಿ ಬ್ರಿಟಿಷ ವಿರುದ್ಧ ನಿರಂತರ ಅಹಿಂಸಾತ್ಮಕವಾಗಿಯೇ ಹೋರಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅಸತ್ಯದ ಮೇಲೆ ಸತ್ಯ ಜಯಗಳಿಸುತ್ತದೆ ಎಂದು ಕಿಟೆಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಮ್.ವಾಯ್. ಸಾವಂತ ಹೇಳಿದರು.
ಇದನ್ನೂ ಓದಿ ಸ್ಮಶಾನದಲ್ಲಿ ಹೆಣ ಸುಡುವ ಕಾಯಕದಲ್ಲೂ ಕೈಲಾಸ ಕಂಡ ಬಬನ್
ಡಾ ಮಾರ್ಕಂಡೇಯ ದೊಡ್ಡಮನಿ, ಶಿವಶಂಕರ್ ಹಿರೇಮಠ, ರಾಮಚಂದ್ರ ದೊಂಗಡಿ, ಬಿ, ಕೆ,ಹೊಂಗಲ, ಶ್ರೀನಿವಾಸ್ ವಾಡಪ್ಪಿ, ಕೆ ಎಸ್, ಪತ್ತಾರ, ಬಿ, ಕೆ ನಾವಲಗಿಮಠ, ಚಂದ್ರ ಕಾಂತ ಬೆಲ್ಲದ, ಮಹಾದೇವ ಹೊರಟ್ಟಿ, ಮೈನುದ್ದೀನ ಭಾವಿಕಟ್ಟಿ, ಅವರನ್ನು ಸನ್ಮಾನಿಸಿದರು. ದಯಾನಂದ ಭಂಡಿ, ಡಾ ಆರ್, ಎಂ, ಶೆಟ್ಟರ್ ಉಪಸ್ಥಿತರಿದ್ದರು. ಪ್ರೊ ಕೆ ಎಸ್ ಕೌಜಲಗಿ ಸ್ವಾಗತಿಸಿದರು. ಡಾ ಜಿನದತ್ತ ಹಡಗಲಿ ಕಾರ್ಯಕ್ರಮ ನಿರೂಪಿಸಿದರು.