ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಬದುಕಿನ ಕೌಶಲ್ಯಗಳನ್ನು ಕಲಿಸಬೇಕಾಗಿದೆ. ನಾವು ಪ್ರತಿ ದಿನ ಪ್ರಚಲಿತ ವಿದ್ಯಮಾನಗಳನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳಿಗೆ ಬದುಕಿನ ಭರವಸೆಯನ್ನು ತುಂಬಬೇಕೆಂದು ಧಾರವಾಡದ ಸಿ.ಎಸ್.ಐ ಕಾಲೇಜಿನ ಪ್ರಾಧ್ಯಾಪಕ ಡಾ. ಶಂಭು ಹೆಗಡ್ಯಾಳ ಹೇಳಿದರು.
ನಗರದ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡ “ಎಂಪ್ಲಾಯ್‌ಮೆಂಟ್ ಎಂಪ್ಲಾಯ್ದಿಲಿಟಿ ಆ್ಯಂಡ್ ಹೈಯರ್ ಎಜ್ಯುಕೇಶನ್ ಇನ್ ಇಂಡಿಯಾ: ದಿ ಮಿಸ್ಸಿಂಗ್ ಲಿಂಕ್” ರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭದ ಅತಿಥಿಗಳಾಗಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮಹಾವಿದ್ಯಾಲಯದಲ್ಲಿ ಓದುವುದರಿಂದ ಅವರಿಗೆ ಮುಂದಿನ ಬದುಕಿನ ಬಗ್ಗೆ ಭರವಸೆಯನ್ನು ತುಂಬುತ್ತಾ ಪಠ್ಯೆಯನ್ನು ಬೋಧಿಸಬೇಕು ಎಂದರು.
ಮೊದಲನೆ ವಿಚಾರ ಸಂಕಿರಣದ ಅವಧಿಯಲ್ಲಿ ಡಾ. ಎ.ಎಸ್. ಶಿರಾಳಶೆಟ್ಟಿ, ಡಾ. ಬಸವರಾಜ ತಲ್ಲೂರ, ಪ್ರೊ. ಅಬ್ದುಲ್ ಮತೀನ್ ಎಮ್. ಬಿಡಿವಾಲೆ, ಎನ್.ಹೆಚ್. ಪಾಟೀಲ್ ಭಾಗವಹಿಸಿದರು. ಡಾ. ಬಿ.ಹೆಚ್. ನಾಗೂರ್. ಡಾ. ಶ್ಯಾಮಲಾ ರತ್ನಾಕರ, ಪ್ರೊ. ಮೋಹನ್ ಸಿದ್ಧಾಂತಿ. ರವೀಂದ್ರ ದ್ಯಾಬೇರಿ, ಅಫ್ತಾಬ್ ಬಾಯ್ ಅಂತಿಮ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
ಸಂಸ್ಥೆಯ ಉಪಾಧ್ಯಕ್ಷ ಬಶೀರ್ ಅಹ್ಮದ್ ಜಹಗೀರದಾರ್, ಪ್ರಾಚಾರ್ಯ ಡಾ. ಎನ್.ಎಮ್. ಮಕಾಂದಾರ, ಕೆಯುಡಿ ಪ್ರಾಧ್ಯಾಪಕರು ಪ್ರೊ. ಎ.ಎಸ್. ಶಿರಾಳಶೆಟ್ಟಿ, ಡಾಎ.ಎಸ್. ಬಳ್ಳಾರಿ, ಡಾ ಆಯ್.ಎ.ಮುಲ್ಲಾ, ಡಾ.ಎನ್.ಬಿನಾಲತವಾಡ, ಮೇಟಿ ರುದ್ರೇಶ ಮತ್ತು ನಾಡಿನ ಅನೇಕ ವಿದ್ವಾಂಸರು, ಸಂಶೋಧಕರು, ಕಾಲೇಜಿನ ಪ್ರಾಧ್ಯಾಪಕ ವೃಂದ, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.