ಜೀವನದಲ್ಲಿ ಸಾಧನೆ ಮಾಡಬೇಕಾದರೆ ಮನೋಜ್ಞಾನ ಮತ್ತು ಸಂವಹನ ಕೌಶಲ್ಯ ಅತಿ ಅಗತ್ಯವೆಂದು ಧಾರವಾಡದ ಆಕಾಶವಾಣಿಯ ನಿವೃತ್ತ ನಿರ್ದೇಶಕ ಸಿ ಯು ಬೆಳ್ಳಕಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಧಾರವಾಡ ನಗರದ ಅಂಜುಮನ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಾಯಕ ಆಯುಕ್ತ ಸಿ ಆರ್ ಪಾಟೀಲ್ ಮಾತನಾಡಿ, “ವಾಣಿಜ್ಯ ತೆರಿಗೆ ಮೊದಲು ಅವಿಭಕ್ತ ಕುಟುಂಬಗಳು ಇದ್ದವು. ಇದರಿಂದ ಭಾವನಾತ್ಮಕ ಸಂಬಂಧಗಳು ಗಟ್ಟಿಯಾಗಿತ್ತು” ಎಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಡಾ ಜುಬೇದಾ ಮುಲ್ಲಾ ಮಾತನಾಡಿ, “ಆಧುನಿಕ ತಂತ್ರಜ್ಞಾನ ಯುಗದಲ್ಲಿ ಭಾವನಾತ್ಮಕ ಸಂಬಂಧಗಳು ಕಳೆದುಕೊಳ್ಳುತ್ತಿವೆಯೆಂದು ಹಿರಿಯ ನಾಗರಿಕರ ಮೂಲಕ ಈ ಕಾರ್ಯಕ್ರಮ ಆಯೋಜಿಸಿಲ್ಲ. ವಿದ್ಯಾರ್ಥಿಗಳು ಹಿರಿಯರ ಜತೆಗೆ ಸಮಯ ಕಳೆಯಬೇಕೆಂಬುದು ಕಾರ್ಯಕ್ರಮದ ಉದ್ದೇಶ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮದ ಮುಖ್ಯಸ್ಥ ಡಾ ಎಸ್ ಎಸ್ ಅದೋನಿ, ಸಮಾಜಶಾಸ್ತ್ರದ ಮುಖ್ಯಸ್ಥೆ ಸಮೀನಾ ನದಾಫ್, ಮಂಗಲಾ ತಳವಾರ, ಡಾ ಆಸ್ಮಾ ಬಳ್ಳಾರಿ, ಡಾ ನಾಗರಾಜ್ ಗುದಗನವರ, ಡಾ ಐ ಎ ಮುಲ್ಲಾ ಸೇರಿದಂತೆ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಇದ್ದರು.
ಈ ಸುದ್ದಿ ಓದಿದ್ದೀರಾ? ಗದಗ | ನೀಟ್-ಯುಜಿಸಿ ಪರೀಕ್ಷೆ ಭ್ರಷ್ಟಾಚಾರ ಹಗರಣ; ನ್ಯಾಯಕ್ಕಾಗಿ ಎಸ್ಎಫ್ಐ ಆಗ್ರಹ
ಕಾರ್ಯಕ್ರಮದಲ್ಲಿ, ಇತ್ತೀಚಿಗೆ ನಿಧನ ಹೊಂದಿದ ಐಪಿಎಸ್ ಅಧಿಕಾರಿ ಹಾಗೂ ಉರ್ದು ಕವಿ ಖಲೀಲ್ ಮಾಮೂನ್ ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
