ಗ್ರಾಮ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಆದಂತೆ, ಗ್ರಾಮ ಸ್ವಚ್ಛತೆಯಿಂದ ಉತ್ತಮ ಆರೋಗ್ಯ ಸಾಧ್ಯ, ಇದು ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಸ್ವಚ್ಛತೆ ಎಲ್ಲಿ ಇರುತ್ತದೆಯೋ ಅಲ್ಲಿ ಅಭಿವೃದ್ಧಿ ಇರುತ್ತದೆ. ಗಾಂಧೀಜಿ ಅವರ ಕನಸನ್ನು ಸಾಕಾರಗೊಳಿಸಲು ಮುಂದಾಗಿ ಎಂದು ಮರೆವಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೋಯಪ್ಪನವರ್ ಹೇಳಿದರು.
ಧಾರವಾಡ ತಾಲೂಕಿನ ಮರೆವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಂಜುಮನ್ ಪದವಿ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ, ಕರ್ನಾಟಕ ಗ್ರಾಮೀಣ ಸಂರ್ವರ್ಧನ ಜೀವೊನಪಾಯ ಸಂಸ್ಥೆ ಸಹಯೋಗದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಡಿಯಲ್ಲಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಎನ್ಎಸ್ಎಸ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪಿಡಿಓ ಕೋಯಪ್ಪನವರ ಮಾತನಾಡಿ, ಗ್ರಾಮ ಅಭಿವೃದ್ಧಿಗೆ ಗ್ರಾಮಸ್ಥರೇ ಹೆಚ್ಚು ಖಾಳಜಿ ವಹಿಸಬೇಕು. ನಮ್ಮ ಓಣಿ, ನಮ್ಮ ಊರು ಎಂದು ಸ್ವಶ್ಚತೆ ಕಾಪಾಡಿಕೊಂಡರೆ ಮಾತ್ರ ಸ್ವಶ್ಚ ಗ್ರಾಮವಾಗಲು ಸಾಧ್ಯ. ವಿದ್ಯಾರ್ಥಿಗಳು ಗಾಂಧೀಜಿಯವರ ವಿಚಾರಗಳನ್ನು ತಿಳಿದು, ಸ್ವಶ್ಚತೆ ಕಡೆಗೆ ಮುನ್ನೆಜ್ಜೆ ಇಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ ಅಧ್ಯಕ್ಷ ಈರಪ್ಪ ಪೂಜಾರ, ಸುನಿತಾ ಹಡಪದ, ಪಂಚಾಯತ್ ಸದಸ್ಯ ಮಹಾಂತಯ್ಯ ಹಿರೇಮಠ್, ರೇಣುಕಾ ತಡಕೋಡ್, ಎನ್ಎಸ್ಎಸ್ ಅಧಿಕಾರಿ ಡಾ. ನಾಗರಾಜ್ ಗುದಗನವರ್, ಡಾ. ತಾಜುನ್ನಿಸಾ, ಐಕ್ಯೂಎಸಿ ಸಂಚಾಲಕ ಡಾ. ಎನ್ ಬಿ ನಾಲತವಾಡ, ಪ್ರೊ. ಮುಬಾರಕ್ ಮುಲ್ಲಾ ಇದ್ದರು.