ಧಾರವಾಡದಲ್ಲಿ ನೀರಿನ ಅಭಾವ ಎದುರಾಗಿದೆ. ಕಳೆದ ಒಂದು ವಾರದಿಂದ ಕುಡಿಯುವ ನೀರಿಗಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ. ನೀರು ಪೂರೈಕೆಗಾಗಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಮಾರುತಿ ಗೊಲ್ಲರ, “ಒಂದು ವಾರದಿಂದ ನಮಗೆ ಕುಡಿಯುವ ನೀರು ಪೂರೈಕೆಯಾಗಿಲ್ಲ. ನನ್ನಂತೆ ದೂರದಿಂದ ಓದಲು ಬಂದು ಬಾಡಿಗೆ ರೂಮ್‌ಗಳಲ್ಲಿ ವಾಸವಿರುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ” ಎಂದರು.
“ಕುಡಿಯಲು ನೀರಿಲ್ಲದ ಕಾರಣ ಜಿಲ್ಲಾಧಿಕಾರಿ ಕಚೇರಿ ಹತ್ತಿರವಿರುವ ನೀರು ಸರಬರಾಜು ಕೇಂದ್ರದಿಂದ ನೀರು ಹೊತ್ತು ತಂದು ಕುಡಿಯುವಂತಾಗಿದೆ. ಗುರುವಾರ ರಾತ್ರಿ (ಜುಲೈ 13) ಕೇಂದ್ರ ಅಂಚೆ ಕಚೇರಿಯಿಂದ ಕೊಡಗಳಿಂದ ನೀರು ಹೊತ್ತು ತಂದಿದ್ದೇವೆ” ಎಂದು ತಮ್ಮ ಕಷ್ಟವನ್ನು ಹೇಳಿಕೊಂಡದರು.
ವಿದ್ಯಾರ್ಥಿ ಮಹಾಂತೇಶ ಚಿಕ್ಕಣ್ಣವರ ಮಾತನಾಡಿ, “ಧಾರವಾಡದಲ್ಲಿ ನೀರಿನ ತೀವ್ರವಾಗಿ ಕಾಡುತ್ತಿದೆ. ಇಲ್ಲಿನ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಮನುಷ್ಯನಿಗೆ ಮೂಲಭೂತವಾಗಿ ಬೇಕಿರುವುದು ನೀರು. ಅಂತಹ ನೀರಿನ ಕೊರತೆ ಉಂಟಾದರೆ ಸಮಸ್ಯೆಗಳ ಮಹಾಪೂರವೆ ಬೆಳೆಯುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದರು.