ಧಾರವಾಡ | ಭಾರತೀಯರಿಗೆ ವರವಾಗಿ ದೊರೆತ ಸಂವಿಧಾನ ಪ್ರತಿಯೊಬ್ಬರ ಜೀವನಾಡಿ: ರಂಜಾನ ದರ್ಗಾ

Date:

Advertisements

ಭಾರತ ದೇಶದಲ್ಲಿ ವಾಸಿಸುವ ಜನರಿಗೆ ಸಂವಿಧಾನವು ಒಂದು ವರವಾಗಿ ದೊರೆತಿದೆ. ಆದರೆ ಅದರ ಕುರಿತು ಸರಿಯಾದ ಜ್ಞಾನ ಸಮಾಜದಲ್ಲಿರುವ ಜನರಿಗಿಲ್ಲ. ಸಂವಿಧಾನವು ದೇಶದ ಪ್ರತಿಯೊಬ್ಬರ ಜೀವನಾಡಿಯಿದ್ದಂತೆ. ಅದರ ಕುರಿತು ಮಕ್ಕಳಿಗೆ ಬಾಲ್ಯದಿಂದಲೇ ತಿಳುವಳಿಕೆಯನ್ನು ಮೂಡಿಸುವ ಕಾರ್ಯವನ್ನು ರಂಗಾಯಣ ಯಶಸ್ವಿಯಾಗಿ ಮಾಡಿದೆ ಎಂದು ಹಿರಿಯ ಚಿಂತಕ ಡಾ. ರಂಜಾನ ದರ್ಗಾ ಹೇಳಿದರು.

ಧಾರವಾಡ ರಂಗಾಯಣವು ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿವಿಧ ಟ್ರಸ್ಟ್‍ಗಳ ಸಹಯೋಗದಲ್ಲಿ ಆಯೋಜಿಸಿದ್ದ ಚಿಣ್ಣರಮೇಳ-2025ರ “ಚಿಣ್ಣರ ನಾಟಕೋತ್ಸವ”ವದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಮಕ್ಕಳ ಬಾಲ್ಯವನ್ನು ಇಂದಿನ ಆಧುನಿಕ ಸಮಾಜ ಕಸಿದುಕೊಂಡಿದೆ. ರಂಗಭೂಮಿಯಲ್ಲಿ ಮಾನವೀಯ ಸಂಬಂಧದ ಗುಣವಿದೆ. ಯಾವುದೇ ಮೇಲು-ಕೀಳು ಎಂಬ ಭೇದ ಇಲ್ಲದೆ ಸಮಚಿತ್ತದಿಂದ ಸಂಗೀತ, ನಾಟಕ, ಚಿತ್ರಕಲೆ ಸೇರಿದಂತೆ ಇತರೆ ಸಾಂಸ್ಕøತಿಕ ರಂಗ ಚಟುವಟಿಕೆಳಲ್ಲಿ ಮಕ್ಕಳು ತಲ್ಲೀಣರಾಗಿ ಶಿಬಿರದಲ್ಲಿ ತೊಡಗಿಕೊಂಡಿರುವುದು ರಂಗಾಯಣದ ಹೆಮ್ಮೆ ಎಂದರು.

IMG 20250506 WA0006 edited

ಕೇವಲ 25 ದಿನಗಳಲ್ಲಿ ಮಕ್ಕಳಿಗೆ ಎಲ್ಲ ರೀತಿಯ ಚಟುವಟಿಕೆಗಳನ್ನು ಕಲಿಸಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಪಾಲಕರು ಮಕ್ಕಳಿಗೆ ಈ ರೀತಿಯ ಶಿಬಿರಗಳಿಗೆ ಕರೆದುಕೊಂಡು ಹೋಗುವುದು ಕಾಣಸಿಗುವುದಿಲ್ಲ. ಆದರೆ ಧಾರವಾಡದಲ್ಲಿ ರಂಗಾಯಣಕ್ಕೆ ಪ್ರತಿ ಪಾಲಕರು ಮಕ್ಕಳು ಏನನ್ನಾದರೂ ಕಲಿಯಲಿ ಎಂಬ ಭಾವನೆಯಿಂದ ಶಿಬಿರಕ್ಕೆ ಸೇರಿಸಿ, ಪ್ರೋತ್ಸಾಹ ನೀಡಿರುವುದು ಉತ್ತಮ ಸಂಗತಿ. ಇಂತಹ ಕಾರ್ಯ ಯೋಜನೆಗಳಿಂದ ರಂಗಾಯಣದ ಶಕ್ತಿ ಹಿರಿಯದಾಗಿದೆ ಎಂದು ಶ್ಲಾಘಿಸಿದರು.

Advertisements

ಕಲಾಸಂಗಮ ಅಧ್ಯಕ್ಷ ಡಾ. ಪ್ರಭು ಹಂಚಿನಾಳ ಮಾತನಾಡಿ, ಮೊಬೇಲ್ ಗೀಳಿನಿಂದ ಮಕ್ಕಳನ್ನು ಹೊರತಂದು, ಅವರಲ್ಲಿರುವ ಕಲೆಗಳನ್ನು ಗುರುತಿಸಿ, ಅವರ ಸರ್ವಾಂಗೀಣ ಬೆಳವಣಿಗೆಗೆ ರಂಗಾಯಣ ಸಾಕ್ಷಿಯಾಗಿದೆ. ಮಕ್ಕಳಿಗೆ ಸಂಗೀತ, ನೃತ್ಯ, ಜನಪದ ಕಲೆಗಳ ಪರಿಚಯ, ಆರೋಗ್ಯದ ಕುರಿತು ಮನೆಮದ್ದಿನ ಉಪಯೋಗ, ಮಕ್ಕಳ ಹಕ್ಕುಗಳ ಕುರಿತು ಅರಿವು ಸೇರಿದಂತೆ ಹಲವಾರು ವಿಷಯಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ತಿಳುವಳಿಕೆಯನ್ನು ಈ ಶಿಬಿರದ ಮೂಲಕ ಮಾಡಲಾಗಿದೆ. ಎಲ್ಲ ಮಕ್ಕಳು ಆಸಕ್ತಿಯಿಂದ ಶಿಬಿರದಲ್ಲಿ ಭಾಗವಹಿಸಿ ಇಂದು ಅದ್ಭತ ಸಂದೇಶ ಸಾರುವಂತಹ ನಾಟಕಗಳನ್ನು ಪ್ರದರ್ಶಿಸಿದ್ದಾರೆ ಎಂದರು.

IMG 20250505 WA0008 1 edited

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಮಾತನಾಡಿ, ಮಕ್ಕಳನ್ನು ಹಿಡಿಯುವುದು ತುಂಬಾ ಕಷ್ಟಕರವಾದುದು. ಆದರೆ ನಮ್ಮ ಶಿಬಿರದಲ್ಲಿ ನಾಟಕ ನಿರ್ದೇಶಕರು, ಸಹನಿರ್ದೇಶಕರು ಮಕ್ಕಳಲ್ಲಿ ಮಕ್ಕಳಾಗಿ ಬೆರೆತು, ಉತ್ತಮ ರೀತಿಯಲ್ಲಿ ನಾಟಕಗಳನ್ನು ಕಲಿಸಿದ್ದಾರೆ. ಅವರ ಶ್ರಮಕ್ಕೆ ಈ ನಾಟಕಗಳು ಸಾಕ್ಷಿಯಾಗಿವೆ. ಮಕ್ಕಳು ಶಿಬಿರದಲ್ಲಿ ಪಡೆದಂತಹ ರಂಗ ಕಲಿಕೆಯನ್ನು ಮುಂದಿನ ದಿನಗಳಲ್ಲಿಯೂ ರೂಢಿಸಿಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಇದರಿಂದ ರಂಗಾಯಣದ ಕೀರ್ತಿಯು ಶಿಖರದಷ್ಟೆ ಎತ್ತರಕ್ಕೆ ಬೆಳೆಯುತ್ತದೆ ಎಂದರು.

ಈ ವೇಳೆ ರಂಗ ನಿರ್ದೇಶಕ ಬಿ. ಆಯ್. ಈಳಿಗೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕ ಕುಮಾರ ಬೆಕ್ಕೇರಿ, ಶಿಬಿರ ನಿರ್ದೇಶಕ ಲಕ್ಷ್ಮಣ ಪಿರಗಾರ ಉಪಸ್ಥಿತರಿದ್ದರು. ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿ, ವಂದಿಸಿದರು. ಪಾಲಕರು ಹಾಗೂ ಮಕ್ಕಳು ಶಿಬಿರದ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನಂತರ ಸಮಗ್ರತೆ ತಂಡದವರು “ಕಂಸಾಳೆ”ಯನ್ನು ಪ್ರಸ್ತುತಪಡಿಸಿದರು. ಪ್ರಜಾಪ್ರಭುತ್ವ ತಂಡದವರು “ಮಕ್ಕಳ ರಾಜ್ಯ” ನಾಟಕವನ್ನು ಪ್ರದರ್ಶಿಸಿ, ಜನರ ಮನವನ್ನು ಸೆಳೆದರು.

ಇದನ್ನು ಓದಿದ್ದೀರಾ? ಧಾರವಾಡ | ಉದ್ಯಾನವನ ಸ್ವಚ್ಛಗೊಳಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡ NSS ಶಿಬಿರಾರ್ಥಿಗಳು

ಕಾರ್ಯಕ್ರಮದಲ್ಲಿ ಶಿಬಿರ ಗೀತೆ, ರಂಗಗೀತೆಗಳು, ಮಕ್ಕಳ ಹಾಡುಗಳು ಹಾಗೂ ಜಾನಪದ ನೃತ್ಯಗಳು ಜರುಗಿದವು. ಶಿಬಿರದ ನಿರ್ದೇಶಕರು, ನಾಟಕ ನಿರ್ದೇಶಕರು ಹಾಗೂ ಸಹ ನಿರ್ದೇಶಕರನ್ನು ಸನ್ಮಾನಿಸಿದರು. ನಂತರ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X