ಸ್ಕೂಟಿ ನಡೆಸುತ್ತಿದ್ದ ಸವಾರನ ಕಣ್ಣಿಗೆ ಖಾರದಪುಡಿ ಎರಚಿದ ಮೂವರು ದುಷ್ಕರ್ಮಿಗಳು 1 ಲಕ್ಷ 80 ಸಾವಿರ ರೂಪಾಯಿ ದೋಚಿಕೊಂಡು ಪರಾರಿಯಾಗಿರುವ ಘಟನೆ ಧಾರವಾಡ ನವಲಗುಂದ ರಸ್ತೆಯಲ್ಲಿ ನಡೆದಿದೆ.
ನಗರದ ಶಿವಾಜಿ ಸರ್ಕಲ್’ನಲ್ಲಿ ಗ್ಯಾರೇಜ್ ಕೆಲಸ ಮುಗಿಸಿಕೊಂಡು ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಗೋವನಕೊಪ್ಪ ಮಾರ್ಗಮಧ್ಯದಲ್ಲಿ ಸ್ಕೂಟಿಗೆ ಅಡ್ಡಗಟ್ಟಿದ ಮೂವರು ಸವಾರ ಆದಿಲ್ ಮಸ್ತಾನವಾಲೆ ಕಣ್ಣಿಗೆ ಖಾರದಪುಡಿ ಎರಚಿ ಆತನ ಹತ್ತಿರವಿದ್ದ ಹಣವನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನಿಡಿದ್ದಾರೆ.
ಆದಿಲ್ ಬ್ಯಾಂಕ್’ನಿಂದ ಲೋನ್ ಹಣ ತೆಗೆದುಕೊಂಡದ್ದನ್ನು, ಗಮನಿಸಿ ಹಿಂಬಾಲಿಸಿದ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ | ಗುಂಪು ಹಲ್ಲೆ: ಇಬ್ಬರಿಗೆ ಚಾಕು ಇರಿತ: ಓರ್ವ ಯುವಕ ಸಾವು
ಈ ಕುರಿತು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಗಳ ಹುಡುಕಾಟದಲ್ಲಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.