ಹಳ್ಳದಲ್ಲಿ ಬುಧವಾರ ತಡರಾತ್ರಿ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಂಚಿನಾಳ ಹೊರಹೊಲಯದಲ್ಲಿ ನಡೆದಿದೆ.
ಕುಂದಗೋಳದ ಶಿವಯ್ಯ ವಾಟ್ನಾಳಮಠ (29) ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದ್ದು, ಇನ್ನುಳಿದ ವಾಸುದೇವ ಹೈಭತ್ತಿ, ಮಲ್ಲಿಕಾರ್ಜುನ ಎಂಬ ಇಬ್ಬರು ಪಾರಾಗಿದ್ದಾರೆ. ಹಂಚಿನಾಳ-ದೇವನೂರ ಮದ್ಯದ ಹೊಲಕ್ಕೆ ಬಿತ್ತನೆ ಚಟುವಟಿಕೆಗೆ ಟ್ರ್ಯಾಕ್ಟರ್, ಕೂರಿಗೆ ಒಯ್ಯುವಾಗ ಈ ಘಟನೆ ಸಂಭವಿಸಿದೆ.