ಬೆಂಗಳೂರು ನಿಮ್ಹಾನ್ಸ್ ಟೆಲಿ-ಮನಸ್ ಅಪೆಕ್ಸ್ ತಂಡದಿಂದ ಧಾರವಾಡ ಡಿಮ್ಹಾನ್ಸ್ ಸಂಸ್ಥೆಯ ಟೆಲಿ-ಮನಸ್ ವಿಭಾಗದ ಆಪ್ತ ಸಮಾಲೋಚಕರಿಗೆ ಮೂರು ದಿನದವರೆಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು.
ಕಾರ್ಯಾಗಾರದಲ್ಲಿ ಬೆಂಗಳೂರು ಮಾನಸಿಕ ಆರೋಗ್ಯ ಸೌಧದ ಉಪನಿರ್ದೇಶಕ ಡಾ. ರಜನಿ.ಪಿ. ಮಾತನಾಡಿ, ರಾಜ್ಯದಲ್ಲಿ ಟೆಲಿ-ಮನಸ್ ಟೊಲ್ ಪ್ರೀ ಸಂಖ್ಯೆ 14416 ಮತ್ತು 1800-89-14416 ರ ಕಾರ್ಯಕ್ಷಮತೆಯ ಬಗ್ಗೆ ಮತ್ತು ಆಪ್ತಸಮಾಲೋಚಕರ ಪಾತ್ರದ ಕುರಿತು ವಿವರಿಸಿದರು. ಬೆಂಗಳೂರು ಮನೋವ್ಯಕೀಯ ವಿಭಾಗ ಮತ್ತು ಪ್ರಿನ್ಸಿಪಲ್ ಇನ್‍ವೆಸ್ಟಿಗೇಟರ್ ಟೆಲಿ-ಮನಸ್‍ನ ಪ್ರಾಧ್ಯಾಪಕ ಡಾ. ನವೀನಕುಮಾರ ಸಿ. ಅವರು ಟೆಲಿ-ಮನಸ್ ಕಾರ್ಯಕ್ರಮದ ದೃಷ್ಟಿ, ಗುರಿ, ಉದ್ದೇಶ ಮತ್ತು ಪ್ರಾಮೂಖ್ಯತೆಯ ಬಗ್ಗೆ ತಿಳಿಸಿದರು.
ನಿಮ್ಹಾನ್ಸ್‌ನ ಮನೋವೈದ್ಯಕೀಯ ವಿಭಾಗ ಹೆಚ್ಚುವರಿ ಪ್ರಾಧ್ಯಾಪಕ ಡಾ. ಎನ್.ಮಂಜುನಾಥ ಮಾತನಾಡಿ, ಆಪ್ತಸಮಾಲೋಚನೆಯ ಕೌಶಲ್ಯಗಳನ್ನು ಬಲಪಡಿಸುವ ಕುರಿತು ಮತ್ತು ಮಾನಸಿಕ ಆರೋಗ್ಯ ಸೇವೆಗಳ ಕುರಿತು ತಿಳಿಸಿದರು. ಮೇಜರ್ ಸಿದ್ದಲಿಂಗಯ್ಯಾ ಹಿರೇಮಠ ಟೆಲಿ-ಮಾನಸ ಕಾರ್ಯಕ್ಷಮತೆಯ ಬಗ್ಗೆ ವಿವರಿಸಿದರು.
ಧಾರವಾಡ ಡಿಮ್ಹಾನ್ಸ್‍ನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಹಾಗೂ ಕರ್ನಾಟಕ ಟೆಲಿ-ಮನಸ್-02 ಸೆಲ್ ನೋಡಲ್ ಅಧಿಕಾರಿ ಡಾ. ರಂಗನಾಥ ಕುಲಕರ್ಣಿ ಮಾತನಾಡಿ, ಟೆಲಿ-ಮನಸ್ ಸೆಲ್-02 ರಲ್ಲಿ ಕಳೆದ 2.5 ವರ್ಷಗಳಿಂದ ನಡೆದ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ. ರಾಘವೇಂದ್ರ ನಾಯಕ, ನಿರ್ದೇಶಕ ಡಾ. ಅರಣಕುಮಾರ.ಸಿ ಭಾಗವಹಿಸಿದ್ದರು.