ಧಾರವಾಡ | ಬುದ್ಧನ ಅಷ್ಟಾಂಗ ಮಾರ್ಗದಿಂದ ಪರಿವರ್ತನೆ ಸಾಧ್ಯ: ಡಾ. ಸಂಜೀವ ಕುಲಕರ್ಣಿ

Date:

Advertisements

“ಬುದ್ಧ ಪ್ರತಿಪಾದಿಸಿದ ಅಷ್ಟಾಂಗ ಮಾರ್ಗಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡರೆ; ಪರಿವರ್ತನೆ ಸಾದ್ಯವಾಗುತ್ತದೆ ಎಂದು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಡಾ. ಸಂಜೀವ ಕುಲಕರ್ಣಿ ಹೇಳಿದರು.

ಧಾರವಾಡ ಪಟ್ಟಣದ  ಕೃಷಿ ವಿಶ್ವವಿದ್ಯಾಲಯದಲ್ಲಿ ಸಂತೋಷ್ ಲಾಡ್ ಫೌಂಡೇಷನ್‌ ವತಿಯಿಂದ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

“ಬದುಕಿನಲ್ಲಿ ಕಷ್ಟ ಬರುತ್ತವೆ, ಆ ಕಷ್ಟಗಳಿಗೆ ಕಾರಣಗಳಿರುತ್ತವೆ, ಕಷ್ಟ ಪರಿಹಾರಕ್ಕೆ ಪ್ರಯತ್ನಿಸಿದರೆ ನಿವಾರಣೆ ಆಗುತ್ತದೆ. ಮತ್ತು ಸೂಕ್ತ ಮಾರ್ಗವೂ ಇದೆ’ ಎಂದು ಬುದ್ಧ ನಾಲ್ಕು ಸತ್ಯಗಳನ್ನು ಸಾರಿದ್ದಾರೆ. ಬುದ್ಧನ ಬೋಧನೆಯಲ್ಲಿ ಬರುವ ಸಮ್ಯಕ್ ಪದವು ಯೋಗ್ಯವಾದುದು, ಸರಿಯಾದದ್ದು, ಸೂಕ್ತವಾದದ್ದು ಮತ್ತು ಸಹಜವಾದದ್ದು ಎಂದರ್ಥವನ್ನು ಕೊಡುತ್ತದೆ. ಹಲವು ತಾರತಮ್ಯಗಳನ್ನು ಕೃತಕವಾಗಿ ಸೃಷ್ಟಿ ಮಾಡಿಕೊಂಡು ಕಷ್ಟಗಳನ್ನು ಅನುಭವಿಸುತ್ತಿದ್ದೇವೆ. ಅವುಗಳಿಂದ ಹೊರಬಂದು ಸುಂದರ ಬದುಕು ನಿರ್ಮಾಣ ಮಾಡಿಕೊಳ್ಳಲು ಸಮ್ಯಕ್ ಪದದ ಅರ್ಥದಲ್ಲಿ ಸಾಗಬೇಕಿದೆ” ಎಂದರು.

Advertisements

ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, “ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಮನೆ ಮತ್ತು ಮನಗಳಲ್ಲಿ ಅಳವಡಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಮಹನೀಯರು ಹುಟ್ಟಿ ಬರದೇ ಇದ್ದಿದ್ದರೆ, ನಾವಾರೂ ಸಮಾನತೆಯಿಂದ ಬದುಕಲು ಸಾಧ್ಯವಿದ್ದಿದ್ದಿಲ್ಲ. ನಾವೇ ಶ್ರೇಷ್ಠ ಇತರರು ಕನಿಷ್ಠವೆಂಬ ಮನೋಭಾವ ಹೆಚ್ಚಾಗುತ್ತಿದೆ. ನೆರೆಹೊರೆಯ ರಾಷ್ಟ್ರಗಳನ್ನು ಶತ್ರುಗಳಂತೆ ಕಾಣುವ ವಾತಾವರಣ ಸೃಷ್ಟಿಯಾಗಿರುವ ಪರಿಣಾಮ ಸಮಾಜದಲ್ಲಿ ಅಶಾಂತಿ ಹೆಚ್ಚಾಗುತ್ತಿದೆ” ಎಂದರು.

ಉಪನ್ಯಾಸಕಿ ಅನಸೂಯಾ ಕಾಂಬಳೆ ಅವರು ‘ಬುದ್ದ ಬೋಧನೆಯಲ್ಲಿ ಮಹಿಳೆಯರ ಸ್ಥಾನಮಾನ’ ಕುರಿತು ಮಾತನಾಡುತ್ತಾ, “ಬುದ್ಧನ ಬೋಧನೆಗಳಲ್ಲಿ ಧರ್ಮದ ವಿಧಿ ಮತ್ತು ನಿಷೇಧಗಳಿಲ್ಲ. ಅವರ ವಿಚಾರಗಳಲ್ಲಿ ಮಹಿಳೆಯರ ಜೀವನ ಸುಧಾರಣಾ ಮಾರ್ಗಗಳು ಕಾಣುತ್ತವೆ’ ಎಂದರು. 

IMG 20250616 WA0007 1

ಶಿಲಾಧರ ಮುಗಳಿ ಮಾತನಾಡಿ, “ಬುದ್ಧ ಅಹಿಂಸಾ ಪರಮೋ ಧರ್ಮವನ್ನು ಪಾಲಿಸಿದರು. ಪ್ರಸ್ತುತ ಸಮಸ್ಯೆಗಳಿಗೆ ಬುದ್ಧನ ವಿಚಾರಗಳಲ್ಲಿ ಪರಿಹಾರವಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ಕರ್ತವ್ಯ ಲೋಪ ಎಸಗಿದ್ದಕ್ಕೆ ಪಿಡಿಒ ಅಮಾನತು

ಫೌಂಡೇಶನ್‌ನ ಮುಖ್ಯಸ್ಥ ಮತ್ತು ಸಚಿವ ಸಂತೋಷ್ ಲಾಡ್ ಸಮಾಜದಲ್ಲಿ ಬದಲಾವಣೆ ತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. 

ಈ ಸಂದರ್ಭದಲ್ಲಿ ಎನ್. ಎಚ್. ಕೋನರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

ವಿಜಯನಗರ | ಅಲೆಮಾರಿ ಸಮುದಾಯಗಳ ಅಭಿವೃದ್ಧಿಯೇ ನಿಗಮದ ಮುಖ್ಯ ಧ್ಯೇಯ: ಪಲ್ಲವಿ

ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಔದ್ಯೋಗಿಕವಾಗಿ ಮುಂಚೂಣಿಗೆ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ಯಾದಗಿರಿ | ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ನೀಡುವಂತೆ ಒತ್ತಾಯ

ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕಲ್ಯಾಣ...

Download Eedina App Android / iOS

X