ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ವಾ.ಕ.ರಾ.ರ.ಸಾ.ಸಂಸ್ಥೆ ಘಟಕದ ಕನ್ನಡ ಕ್ರಿಯಾ ಸಮಿತಿಯಿಂದ ಹಮ್ಮಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗುವ ಮೂಲಕ ಶಾಸಕ ಎನ್ ಎಚ್ ಕೋನರಡ್ಡಿ ಉದ್ಘಾಟಿಸಿದರು.
ಜ್ಞಾನಪೀಠ ಪುರಸ್ಕೃತ ಕುವೆಂಪು, ದ ರಾ ಬೇಂದ್ರೆ, ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ, ವಿ ಕೃ ಗೋಕಾಕ, ಮಾಸ್ತಿ ವೆಂಕಟೇಶ ಅಯ್ಯಂಗಾರ, ಶಿವರಾಮ ಕಾರಂತ ಹಾಗೂ ಕೆ ಎಸ್ ನಿಸಾರ್ ಅಹಮ್ಮದರ ಭಾವಚಿತ್ರಗಳನ್ನು ಅನಾವರಣಗೊಳಿಸಿ, ಯುವ ಪೀಳಿಗೆ ಮತ್ತು ಸಮಾಜಕ್ಕೆ ಅರಿವು ಮೂಡಿಸಲು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ ಅಳವಡಿಸಿ ಜನರಿಗೆ ಪರಿಚಯಿಸಲು ಲೋಕಾರ್ಪಣೆ ಮಾಡುತ್ತಿರುವುದು ಸಮಾಜಕ್ಕೆ ಮಾದರಿ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ, ಗಂಗಾಧರ ಕಮಲದಿನ್ನಿ, ಅಶೋಕ ಮಜ್ಜಿಗುಡ್ಡ, ಪುರಸಭಾ ಅಧ್ಯಕ್ಷ ಶಿವಾನಂದ ತಡಸಿ, ಘಟಕ ವ್ಯವಸ್ಥಾಪಕ ಅಶೋಕ ಕಾಡರಕೊಪ್ಪ, ಕನ್ನಡ ಕ್ರಿಯಾ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾಬುಸಾಬ ದಿವಾನಖಾನವರ, ಎಂ ಆರ್ ಹೆಬಸೂರ, ರಾಜು ಎಂ ಮಾಲಗತ್ತಿ, ಖಾಜಾಮಿಯಾ ನಾಯ್ಕರ, ಮಂಜು ಸೂಡಿ, ಬಾಬುಶಾ ಮಕಾಂದಾರ, ರವಿ ಹುನಸಿಮರದ, ಸಲೀಮ ಮಕಾಂದಾರ ಮುನ್ನಾ ಕಲ್ಕುಟ್ರಿ, ರಹೀಮಾನ ಧಾರವಾಡ ಸೇರಿ ಪುರಸಭಾ ಸದಸ್ಯರು ಸಮಿತಿ ಪದಾಧಿಕಾರಿಗಳು ಘಟಕದ ಎಲ್ಲ ನೌಕರರ ಸಿಬ್ಬಂದಿ ಭಾಗವಹಿಸಿದ್ದರು.