ಧಾರವಾಡದಲ್ಲಿ ಏಪ್ರೀಲ್ 1ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆಯುಐಡಿಎಫ್‌ಸಿ ಯೋಜನಾ ಅನುಷ್ಠಾನ ಘಟಕದ ಕುಸ್ಸೆಂಪ್ ಯೋಜನೆಯ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರವಾಡದ ಸವದತ್ತಿ ರಸ್ತೆಯ ಎಂ.ಆರ್. ನಗರದದಿಂದ 1ಕಿ.ಮೀ. ದೂರದಲ್ಲಿರುವ, ಪೆಟ್ರೋಲ್ ಪಂಪ್ ಹತ್ತಿರವಿರುವ 750 ಎಂ.ಎಂ. ವ್ಯಾಸದ ಶುದ್ಧ ನೀರು ಕೊಳವೆ ಮಾರ್ಗದಲ್ಲಿ ಭಾರಿ ಪ್ರಮಾಣದ ಸೋರುವಿಕೆ ಕಂಡು ಬಂದಿರುವುದರಿಂದ, ಏಪ್ರೀಲ್ 1ರಂದು ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಇದರಿಂದಾಗಿ ಧಾರವಾಡ ನಗರದ ಎಲ್ಲಾ ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಕೆಯುಐಡಿಎಫ್‌ಸಿ ಯೋಜನಾ ಅನುಷ್ಠಾನ ಘಟಕದ ಕುಸ್ಸೆಂಪ್ ಯೋಜನೆಯ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.