ವಕ್ಫ್ ಹೆಸರಿನಲ್ಲಿ ರೈತರ, ಹಿಂದೂ ದೇವಸ್ಥಾನ ಮತ್ತು ಸಾರ್ವಜನಿಕ ಬೂಮಿಯನ್ನು ಕಾಂಗ್ರೆಸ್ ಅಕ್ರಮವಾಗಿ ಕಬಳಿಸುತ್ತಿದೆ ಎಂದು ಆರೋಪಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಜಿಲ್ಲಾ ಹಾಗೂ ಗ್ರಾಮಾಂತರ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾಕಾರರು ಕಾಂಗ್ರೆಸ್ ವಿರುದ್ಧ ‘ನಮ್ಮ ಹಕ್ಕು ನಮ್ಮ ಭೂಮಿ’ ಎಂದು ಘೋಷಣೆ ಕೂಗುತ್ತ, ಸಚಿವ ಜಮೀರ್ ಅಹ್ಮದ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ಗೋವಾ ಕಡೆಗೆ ಹೊರಟಿದ್ದ ಗೂಡ್ಸ್ ಲಾರಿಗೆ ಆಕಸ್ಮಿಕ ಬೆಂಕಿ
ಪ್ರತಿಭಟನೆಯಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಈರೇಶ ಅಂಚಟಗೇರಿ, ವಿಜಯಾನಂದ ಶೆಟ್ಟಿ, ಸುರೇಶ್ ಬೇದ್ರೆ, ತಿಪ್ಪಣ್ಣ ಮಜ್ಜಗಿ, ಐ.ಸಿ.ಗೋಕುಲ, ಬಸವರಾಜ ಕರಡಿಕೊಪ್ಪ, ಶಂಕರ ಶೇಕಳೆ, ಮೋಹನ ರಾಮದುರ್ಗ, ಶರಣು ಅಂಗಡಿ, ವಿಜಯಾನಂದ ಶಟ್ಟಿ ಭಾಗವಹಿಸಿದ್ದರು.