ಧಾರವಾಡದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿವಂಗತ ಮನ್ನಾಬಿ ಪಠಾಣ ಮಹಿಳಾ ಹಾಸ್ಟೆಲ್’ನ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ. ಶಮೀಮಬಾನು ಪಾಟೀಲ್ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳಾ ಹಾಸ್ಟೆಲ್ ಅತ್ಯಂತ ಪ್ರಯೋಜನಕಾರಿ ಆಗಿದ್ದು, ಕಲಿಯುವ ವಿದ್ಯಾರ್ಥಿನಿಗಳಿಗೆ ಅತ್ಯಂತ ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಸ್ಮಾಯಿಲ್ ತಮಟಗಾರ್ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮತ್ತು ಉದ್ಯೋಗದಲ್ಲಿ ಅವರದೇ ಮೇಲುಗೈ ಆಗಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಪ್ರಗತಿ ಸಾಧಿಸಲಿ ಎಂದು ಶುಭಹಾರೈಸಿದರು.
ಉಪಾಧ್ಯಕ್ಷ ಬಸೀರ್ ಅಹಮದ್ ಜಹಗೀರದಾರ, ಕಾರ್ಯದರ್ಶಿ ಡಾ. ಸೈಯದ್ ಖಾದಿರ್ ಸರ್ಗಿರೋ, ಖಜಾಂಚಿ ಮಹಮ್ಮದ್ ರಫೀಕ್ ಶಿರಹಟ್ಟಿ, ಪ್ರಾಚಾರ್ಯ ಡಾ. ಏನ್. ಎಂ. ಮಕಾಂದಾರ್ ವೇದಿಕೆ ಮೇಲಿದ್ದರು. ಕುಮಾರ್ ಅಹಮದ್ ರಜಾ ಕುರಾನ್ ಪಠಣ, ಕುಮಾರಿ ಆಕಾಂಕ್ಷ ಶ್ಲೋಕ ಪಠಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ಹೆಣ್ಣು ಮಕ್ಕಳನ್ನು ಚುಡಾಯಿಸಿದರೆ ಗಡಿಪಾರು: ಪೋಲಿಸ್ ಆಯುಕ್ತ ಎನ್.ಶಶಿಕುಮಾರ್ ಎಚ್ಚರಿಕೆ
ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ. ಸೌಭಾಗ್ಯ ಜಾದವ್ ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿದರು. ಡಾ. ಬೀಬಿ ಆಯಾಶಾ ಚಕೋಲಿ ವಂದನಾರ್ಪಣವನ್ನು, ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ಸಯ್ಯದ್ ತಾಜುನ್ನೆಸಾ ಕಾರ್ಯಕ್ರಮವನ್ನು ನಿರೂಪಿಸಿದರು.