ಇಂದಿನ ಯುವಪೀಳಿಗೆ ಬರೀ ಮೊಬೈಲ್, ಏಕಾಂತ, ಪುಸ್ತಕ ಎನ್ನುವ ಭರದಲ್ಲಿ ಕೆಲ ಸಾಮಾಜಿಕ ಜವಾಬ್ದಾರಿಯನ್ನು ಮರೆಯುತ್ತಿದ್ದು, ಇದರಿಂದ ಮುಂದಿನ ಜನಾಂಗಕ್ಕೆ ಮರಗಳನ್ನು, ಉದ್ಯಾನವನಗಳನ್ನು, ಪ್ರಾಣಿ, ಪಕ್ಷಿಗಳನ್ನು ಬರೀ ಚಿತ್ರಗಳಲ್ಲಿ ತೋರಿಸಬೇಕಾಗುತ್ತದೆ ಎನಿಸುತ್ತಿದೆ ಎಂದು ಹೇಳಿದ ಎನ್ಎಸ್ಎಸ್ ಸ್ವಯಂ ಸೇವಕ ಶಿವಪ್ರಸಾದ ಮದನಭಾವಿ; ಉದ್ಯಾನವನ, ಬಾವಿ ಹಾಗೂ ದೇವಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ನಂತರ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆ ಮೊಬೈಲ್ ಇತ್ಯಾದಿ ಪ್ರಪಂಚದಲ್ಲಿ ಕೆಲವು ಸಾಮಾಜಿಕ ಜವಾಬ್ದಾರಿ ಮರೆಯುತ್ತಿದ್ದರಿಂದ, ಇಂತಹ ಸೇವಾ ಕಾರ್ಯಗಳನ್ನು ಸಾಧ್ಯವಾದಷ್ಟು ಮಾಡುತ್ತಾ ಬರುತ್ತಿದ್ದೇವೆ. ಈ ರೀತಿಯ ಹುಟ್ಟುಹಬ್ಬಗಳಲ್ಲಿ ಕೇಕ್, ಬಣ್ಣ ಬಣ್ಣದ ಬಲೂನ್ ಹೊರತಾಗಿ, ಬಣ್ಣ ಬಣ್ಣದ ಕನಸುಗಳಿರುವ ಯುವ ಮನಸ್ಸುಗಳಿರುತ್ತವೆ.
ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ನಾವು ಅರೋಗ್ಯವಾಗಿರಲು ಸಾಧ್ಯ. ನಾವು ಅರೋಗ್ಯವಾಗಿದ್ದರೆ ಮಾತ್ರ ನಮ್ಮಲ್ಲಿ ಒಳ್ಳೆಯ ವಿಚಾರಗಳು ಬರಲು ಸಾಧ್ಯವಾಗುತ್ತದೆ. ಆದ್ದರಿಂದ ಸ್ವಚ್ಛತೆಗೆ ನಾವು ಹೆಚ್ಚಿನ ಆಧ್ಯತೆ ಕೊಡುತ್ತೇವೆ. ಈ ನೆಲ ನಮಗೆ ಇಡೀ ಬದುಕನ್ನು ಕಳೆಯಲು ಸುಂದರವಾದ ಮನೆ, ಗಾಳಿ, ಆಹಾರ, ನೀರು, ಎಲ್ಲವನ್ನೂ ಉಚಿತವಾಗಿ ಕೊಟ್ಟಿದೆ ಮತ್ತು ನಾವುಗಳು ಅದೇ ಭೂಮಿಗೆ ಕಸದ ವಿಷವನ್ನು ಬಿತ್ತಿದರೆ ಹೇಗೆ? ಎಂದರು.
ಇದನ್ನು ಓದಿದ್ದೀರಾ? ಧಾರವಾಡ | ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಮುನ್ನಡೆಯಬೇಕು: ಡಾ. ಐ ಎಂ ಮುಲ್ಲಾ
ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪ್ರೊಫೆಸರ್ ನಂದಿಬೇವೂರ ಸರ್, ನಿವೃತ್ತ ವೈದ್ಯರಾದ ಡಾ! ವಿಲಾಸ ಕುಲಕರ್ಣಿ, ಹಿರಿಯ ಸ್ವಯಂ ಸೇವಕರಾದ ಶಿವಯೋಗಿ ಹಾವೇರಿ, ದೇವರಾಜ, ಹನುಮಂತ, ಪುಂಡಲೀಕ, ಮಹೇಶ, ರವಿ, ರೋಹಿತ, ಕೌಶಲ್ಯ, ಅಶ್ವಿನಿ, ಹಾಗೂ ಶ್ರೀನಗರದ ಹಿರಿಯರು ಉಪಸ್ಥಿತರಿದ್ದರು.