ಧಾರವಾಡ | ಮನರೇಗಾ ಯೋಜನೆ ಅಡಿ ‘ಘೋಷಿತ ಮಾನವ ದಿನಗಳ’ ಕೆಲಸ ನೀಡುವಂತೆ ಆಗ್ರಹ

Date:

Advertisements

ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮಗಳ ದುಡಿಯುವ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಮನರೇಗಾ) ಯೋಜನೆ ಅಡಿ ‘ಘೋಷಿತ ಮಾನವ ದಿನಗಳ’ ಕೆಲಸವನ್ನು ಸಮರ್ಪಕವಾಗಿ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್‌) ಕಾರ್ಯಕರ್ತರು ಧಾರವಾಡ ಜಿಲ್ಲಾ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.

ಎಐಎಂಎಸ್‌ಎಸ್‌ ಕಾರ್ಯಕರ್ತರು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟಿಸಿದರು.

“ಗ್ರಾಮೀಣ ಭಾಗದ ಜನರಿಗೆ ಅನೂಕೂಲವಾಗಲೆಂದು ಸರ್ಕಾರವು ತಂದಿರುವ ಮನರೇಗಾ ಯೋಜನೆ ಅಡಿಯಲ್ಲಿ ಗೊಂಗಡಿಕೊಪ್ಪ ಮತ್ತು ಕ್ಯಾರಕೊಪ್ಪ ಗ್ರಾಮದ ಕೂಲಿಕಾರರಿಗೆ ಈ ವರ್ಷ ಸಮರ್ಪಕ ಕೆಲಸ ದೊರೆತಿಲ್ಲ. ಬರಗಾಲದ ಕಾರಣ ದುಡಿಯುವ ಜನರು, ರೈತರು, ಕೃಷಿ-ಕೂಲಿ ಕಾರ್ಮಿಕರು ತೀವ್ರ ಸಮಸ್ಯೆಯಲ್ಲಿದ್ದಾರೆ. ಯಾವುದೇ ಉದ್ಯೋಗವಿಲ್ಲದೆ ಗ್ರಾಮಸ್ಥರು ಸಂಕಷ್ಟದಲ್ಲಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಮನರೇಗಾ ಯೋಜನೆ ಅಡಿ ಸಮರ್ಪಕವಾಗಿ ಕೆಲಸ ನೀಡದ ಕಾರಣ ಗ್ರಾಮದ ಜನರು ತಮ್ಮ ಜೀವನೋಪಾಯಕ್ಕಾಗಿ ಪಟ್ಟಣದ ದಾರಿ ಹಿಡಿಯುವಂತಾಗಿದ್ದು, ಕಡಿಮೆ ಕೂಲಿಗೆ ನೆರೆ ಊರುಗಳಿಗೆ ಹೋಗಿ ದುಡಿಯುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

Advertisements

“ಮಾರಡಗಿ ಮತ್ತು ಕ್ಯಾರಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ(ಪಿಡಿಒ) ಅಧಿಕಾರಿಗಳಿಗೆ ಈಗಾಗಲೆ ಮನರೇಗಾ ಕೆಲಸ ನೀಡುವಂತೆ ಕೋರಿ 6 ನಂಬರ್‌ ಫಾರ್ಮ್ ಸಲ್ಲಿಸಿ ಒಂದು ತಿಂಗಳು ಕಳೆದಿವೆ. ಆದರೆ ಅವರ ಕಡೆಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಕೆಲಸವನ್ನೂ ನೀಡಿಲ್ಲ. ಈ ಕಾರಣ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸಿ, ಶೀಘ್ರದಲ್ಲಿಯೇ ಮನರೇಗಾ ಯೋಜನೆ ಅಡಿಯಲ್ಲಿ ಕೆಲಸ ಪ್ರಾರಂಭಿಸಬೇಕು. ಸಂಪೂರ್ಣ ಮಾನವ ದಿನಗಳ ಕೆಲಸ ನೀಡಬೇಕು. ಈಗಾಗಲೇ 6 ನಂಬರ್ ಫಾರ್ಮ್ ಕೊಟ್ಟು ಒಂದು ತಿಂಗಳು ಕಳೆದಿರುವುದರಿಂದ ಕೂಡಲೇ ನಿರುದ್ಯೋಗ ಭತ್ಯೆ ನೀಡಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

“ಮನರೇಗಾ ಯೋಜನೆ ಅಡಿಯಲ್ಲಿ ನಿರಂತರ ಕೆಲಸ ನೀಡಬೇಕು. ಸಂಪೂರ್ಣ ಘೋಷಿತ ಮಾನವ ದಿನಗಳನ್ನು ನೀಡಬೇಕು. ಬರಗಾಲ ಘೋಷಿತ ತಾಲೂಕು ಆಗಿರುವುದರಿಂದ 50 ಮಾನವ ದಿನಗಳನ್ನು ಹೆಚ್ಚಿಗೆ ನೀಡಬೇಕು. ಈವರೆಗೆ ಕೆಲಸ ನೀಡದ ಕಾರಣ ನಿರುದ್ಯೋಗ ಭತ್ಯೆ ಬಿಡುಗಡೆಮಾಡಬೇಕು” ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಬಳಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೂ ಮನರೇಗಾ ಅಧಿಕಾರಿಗಳು (ಎಡಿ) ಎರಡು ಗ್ರಾಮದ ಮನರೇಗಾ ಸಮಸ್ಯೆ ಪರಿಹರಿಸುವುದಾಗಿ ಭರವಸೆಕೊಟ್ಟರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಟ್ಟಡ ಕಾರ್ಮಿಕರು ಆರ್ಥಿಕವಾಗಿ ಸಬಲರಾಗಬೇಕು: ಎಐಟಿಯುಸಿ ಜಿಲ್ಲಾಧ್ಯಕ್ಷ

ಈ ಸಂದರ್ಭದಲ್ಲಿ ಮನರೇಗಾ ಅಧಿಕಾರಿಗಳು (AD) ಉಪಸ್ಥಿತರಿದ್ದರು. ಎಐಎಮ್‌ಎಸ್‌ ಧಾರವಾಡ ಜಿಲ್ಲಾಧ್ಯಕ್ಷ ಮಧುಲತಾ ಗೌಡರ್‌, ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೊಕರೆ, ಗ್ರಾಮ ಘಟಕಗಳ ಸದಸ್ಯರುಗಳಾದ ಮಾಸಬ್ಬಿ ಅಗಸಿಮನಿ, ಕಾಶವ್ವ ತಲ್ವಾರ್, ಮುರಗಮ್ಮ ಗರಗದ, ಶೋಭಾ ಹಿರೆಮಠ, ಶಂಕ್ರಮ್ಮ ಮಲ್ಲಿಗವಾಡ, ಹುಸೇನ ಸಾಬ್ ಎಲಿಗಾರ್, ಹನಮಂತ ಕರಿಕಟ್ಟಿ ಸೇರಿದಂತೆ ಇತರರು ಇದ್ದರು.

ವರದಿ: ದೇವಮ್ಮ ದೇವತ್ಕಲ್
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಆ. 15 ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವ, ಏಕತೆ ರೂಢಿಸಿಕೊಳ್ಳುವ ದಿನ: ಸಚಿವ ಸಂತೋಷ್ ಲಾಡ್

ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ...

ಹುಬ್ಬಳ್ಳಿ | ಜಾತಿ ನಿಂದನೆ; ಸೂಕ್ತ ಕಾನೂನು‌ ಕ್ರಮಕ್ಕೆ ಕುರುಬ ಸಮಾಜ ಒತ್ತಾಯ

ಸಾರ್ವಜನಿಕವಾಗಿ ಕುರುಬ ಸಮಾಜವನ್ನು ನಿಂದನೆ ಮಾಡಿ ಹಾಗೂ ಕುರುಬ ಸಮುದಾಯದ ಮುಖ್ಯಮಂತ್ರಿ...

ಹುಬ್ಬಳ್ಳಿ | ಜನಸಾಮಾನ್ಯರಿಂದ ವೃತ್ತಿ ರಂಗಭೂಮಿ ದೂರವಾಗುತ್ತಿದೆ: ಸುಭಾಷ್ ನರೇಂದ್ರ

ಸಿನೆಮಾ, ದೂರದರ್ಶನ, ಮೊಬೈಲ್‌ಗಳ ಹಾವಳಿಯಿಂದ ಮತ್ತು ಆಧುನಿಕತೆಗೆ ಮಾರುಹೋಗಿ ರಂಗ ಭೂಮಿಯ...

Download Eedina App Android / iOS

X