ಧಾರವಾಡ | ಐಐಟಿ 7ನೇ ಘಟಿಕೋತ್ಸವ; ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಿ: ಪ್ರಾಧ್ಯಾಪಕ ಭೀಮ ಸಿಂಗ್

Date:

“ಐಐಟಿ ವಿದ್ಯಾರ್ಥಿಗಳು ಕೇವಲ ಪದವಿ ಪಡೆದುಕೊಳ್ಳುವುದು ಮುಖ್ಯವಲ್ಲ. ಅದರ ಬದಲಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಮುಂದಾಗಬೇಕು. ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು” ಎಂದು ನವದೆಹಲಿಯ ಐಐಟಿಯ ಪ್ರಾಧ್ಯಾಪಕ ಭೀಮ ಸಿಂಗ್ ಅವರು ಹೇಳಿದರು. 

- Advertisement -

ಧಾರವಾಡ ಪಟ್ಟಣದ ಭಾರತೀಯ ತಂತ್ರಜ್ಞಾನ ಸಂಸ್ಥೆಯ(ಐಐಟಿ) ಸಿಎಲ್ಟಿ ಸಭಾಂಗಣದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ 7ನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

“ಐಐಟಿ ಧಾರವಾಡ ಜ್ಞಾನ, ವಿಜ್ಞಾನ ಮತ್ತು ಸಂಸ್ಕೃತಿಗೆ ತನ್ನ ಕೊಡುಗೆಯನ್ನು ನೀಡುತ್ತಿದೆ. ನಿಮ್ಮ ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಮತ್ತು ಕಲಿಯುತ್ತಲೇ ಇರುವ ಇಚ್ಛಾಶಕ್ತಿ ನೀವು ಎಷ್ಟು ದೂರ ಹೋಗುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ. ಐಐಟಿ ರೂರ್ಕಿ ಮತ್ತು ಐಐಟಿ ದೆಹಲಿಯಲ್ಲಿ ಅಧ್ಯಯನ ಮಾಡಲು ನನಗೆ ಅವಕಾಶ ಸಿಕ್ಕಿತು. ನಾನು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಶೈಕ್ಷಣಿಕ ಮತ್ತು ಸಂಶೋಧನೆಯಲ್ಲಿ ಕಳೆದಿದ್ದೇನೆ. ಈ ಪ್ರಯಾಣದಲ್ಲಿ, ನಾನು ಅನೇಕ ಮನ್ನಣೆಗಳು ಮತ್ತು ಪ್ರಶಸ್ತಿಗಳನ್ನು ಪಡೆಯುವ ಅದೃಷ್ಟಶಾಲಿಯಾಗಿದ್ದೆ. ಆದರೆ, ನನಗೆ ಅತ್ಯಂತ ದೊಡ್ಡ ತೃಪ್ತಿ ಏನು ಎಂದು ನೀವು ನನ್ನನ್ನು ಕೇಳಿದರೆ, ಅದು ಪ್ರಶಸ್ತಿಗಳಲ್ಲ. ನನ್ನ ವಿದ್ಯಾರ್ಥಿಗಳು ಬೆಳೆದು ಸಂಶೋಧಕರು, ಉದ್ಯಮಿಗಳು, ವೃತ್ತಿಪರರು ಮತ್ತು ಜವಾಬ್ದಾರಿಯುತ ನಾಗರಿಕರಾಗುವುದನ್ನು ನೋಡುವುದು” ಎಂದರು.

ಒಬ್ಬ ಪ್ರಾಧ್ಯಾಪಕರ ನಿಜವಾದ ಸಾಧನೆಯನ್ನು ಪ್ರಕಟಣೆಗಳು ಅಥವಾ ಪ್ರಶಸ್ತಿಗಳ ಸಂಖ್ಯೆಯಿಂದ ಅಳೆಯಲಾಗುವುದಿಲ್ಲ. ಆ ಪ್ರಾಧ್ಯಾಪಕರ ಜೀವನದ ಮೂಲಕ ಹಾದು ಹೋಗುವ ವಿದ್ಯಾರ್ಥಿಗಳ ಯಶಸ್ಸಿನಿಂದ ಅದನ್ನು ಅಳೆಯಲಾಗುತ್ತದೆ” ಎಂದು ತಿಳಿಸಿದರು. 

ಪ್ರತಿಯೊಬ್ಬ ಯಶಸ್ವಿ ಉದ್ಯಮಿ, ಪ್ರತಿಯೊಬ್ಬ ಮಹಾನ್ ವಿಜ್ಞಾನಿ ಮತ್ತು ಪ್ರತಿಯೊಂದು ಮಹಾನ್ ಸಂಸ್ಥೆಯು ಯಶಸ್ಸನ್ನು ಸಾಧಿಸುವ ಮೊದಲು ವೈಫಲ್ಯಗಳನ್ನು ಎದುರಿಸಿದ್ದಾರೆ. ಇಂದು ಅನೇಕ ಕೈಗಾರಿಕೆಗಳು ಸಂಶೋಧನೆ ಆಧಾರಿತ ನಾವೀನ್ಯತೆಯ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದರಿಂದ ಶೈಕ್ಷಣಿಕ ಸಂಸ್ಥೆಗಳನ್ನು ಸಂಪರ್ಕಿಸುತ್ತಿವೆ. ವಿಶ್ವವಿದ್ಯಾನಿಲಯಗಳು ಬೋಧನೆಗೆ ಕೇವಲ ಸ್ಥಳಗಳಲ್ಲ, ಆದರೆ ಹೊಸ ತಂತ್ರಜ್ಞಾನಗಳು ಮತ್ತು ಪರಿಹಾರಗಳ ಮೂಲಗಳಾಗಿವೆ” ಎಂದರು.

ಟಾಟಾ ಪವರ್ ರಿನೀವೆಬಲ್ ಮೈಕ್ರೊ ಗ್ರೀಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ ಗುಫ್ತಾ ಅವರು ಮಾತನಾಡಿ, “ಐಐಟಿ ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನೆಗಳಿಗೆ ಮುಂದಾಗಬೇಕು. ತಮ್ಮ ಪ್ರತಿಭೆಗಳನ್ನು ಹೊರ ಹಾಕಲು ಸಾಕಷ್ಟು ಅವಕಾಶಗಳಿವೆ. ಐಐಟಿ ವಿದ್ಯಾರ್ಥಿಗಳು ದೇಶಕ್ಕೆ ಕೊಡುಗೆ ನೀಡಲು ಶ್ರಮಿಸಬೇಕು. ಹೊಸ ಆವಿಷ್ಕಾರಗಳ ಮೂಲಕ ಧಾರವಾಡ ಐಐಟಿಗೆ ಉನ್ನತ ಸ್ಥಾನಮಾನ ದೊರೆಯುವಂತೆ ಮಾಡಬೇಕು” ಎಂದು ಅವರು ತಿಳಿಸಿದರು. 

ಪ್ಯಾನ್ ಐಐಟಿ ಪೂರ್ವ ಛಾತ್ರಗಣ ಅಧ್ಯಕ್ಷ ಪ್ರಭಾತ್‍ಕುಮಾರ ಅವರು ಮಾತನಾಡಿ, “ಧಾರವಾಡ ಐಐಟಿ ವಿದ್ಯಾರ್ಥಿಗಳಿಗೆ ಇಂದು ನೆನಪಿನಲ್ಲಿಡುವ ದಿನವಾಗಿದೆ. ಧಾರವಾಡವು ಶಿಕ್ಷಣ ಹಾಗೂ ಸಂಸ್ಕøತಿಗೆ ಪ್ರಾಮುಖ್ಯತೆ ನೀಡಿದ ಸ್ಥಳವಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಅವರು ನಡೆದಾಡಿದ ಪುಣ್ಯಭೂಮಿ. ರಾಷ್ಟ್ರವನ್ನು ನಿರ್ಮಿಸುವ ಜವಾಬ್ದಾರಿ ಧಾರವಾಡ ಐಐಟಿ ವಿದ್ಯಾರ್ಥಿಗಳ ಮೇಲಿದೆ” ಎಂದು ಹೇಳಿದರು.

ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಪದ್ಮಭೂಷಣ ಪುರಸ್ಕೃತ ಹಾಗೂ ಲೇಖಕಿ ಸುಧಾ ಮೂರ್ತಿ ಅವರು ಮಾತನಾಡಿ, “ಜೀವನದಲ್ಲಿ ಯಾವುದು ಶಾಶ್ವತವಲ್ಲ. ಶಿಕ್ಷಕರ ಕುಟುಂಬದಿಂದ ನಾನು ಬಂದಿದ್ದೇನೆ. ನನ್ನ ಜಿಲ್ಲೆಯಲ್ಲಿಯೇ ನಾನು ಗೌರವ ಡಾಕ್ಟರೇಟ್ ಪಡೆಯುತ್ತಿರುವುದು ಸಂತೋಷ ತಂದಿದೆ. ಕೆಲಸದ ಮೇಲೆ ನಂಬಿಕೆ ಇಡಬೇಕು. ಯಾವುದೇ ಪದವಿ ಪಡೆಯುವುದು ಮುಖ್ಯವಲ್ಲ. ಭವಿಷ್ಯ ರೂಪಿಸಿಕೊಳ್ಳುವುದು ಮುಖ್ಯ. ಜೀವನದಲ್ಲಿ ಸೋಲುವುದು ಸಾಮಾನ್ಯ. ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ಸು ಪಡೆಯಬಹುದು. ಜೀವನ ಯಾವತ್ತೂ ಕಠಿಣವಾಗಿರುವುದಿಲ್ಲ. ನೀವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಪ್ರತಿದಿನವೂ ಸಂತೋಷದಿಂದ ಕಳೆಯಬೇಕು” ಎಂದು ಅವರು ಕಿವಿಮಾತು ಹೇಳಿದರು. 

ಧಾರವಾಡ ಐಐಟಿ ಆಡಳಿತ ಮಂಡಳಿಯ ಅಧ್ಯಕ್ಷ ಶರದ್‍ಕುಮಾರ್ ಸರಾಫ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ವಿಭಾಗದ ಡೀನ್ ಪ್ರೊ.ದಿಲೀಪ್ ಎ.ಡಿ., ಬೋಧಕ ವರ್ಗ ಕಲ್ಯಾಣ ವಿಭಾಗದ ಡೀನ್ ಪ್ರೊ. ರಂಜೀ ರೇಪಕ, ಶೈಕ್ಷಣಿಕ ಕಾರ್ಯಕ್ರಮಗಳ ಡೀನ್ ಪ್ರೊ. ನವೀನ್ ಎಂ.ಬಿ., ಮೂಲ ಸೌಕರ್ಯ, ಯೋಜನೆ ಮತ್ತು ಬೆಂಬಲ ವಿಭಾಗದ ಡೀನ್ ಪ್ರೊ. ಅಮರನಾಥ್ ಹೆಗಡೆ, ಪ್ರೊ. ಪ್ರತ್ಯಾಸ ಭುಯಿ, ಹೊರವಲಯ, ಹಳೆಯ ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಸಂಬಂಧಗಳ ಡೀನ್ ಪ್ರೊ. ಧೀರಜ್ ವಿ. ಪಾಟೀಲ್, ಆರ್ & ಡಿ ವಿಭಾಗದ ಡೀನ್ ಪ್ರೊ. ಕೋಟೇಶ್ವರರಾವ್ ಕೊಣ್ಡೇಪು, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಆರ್. ಪ್ರಭು, ಎಸ್‍ಡಬ್ಲೂಐ – ಕ್ಷೇಮ ವಿಭಾಗದ ಡೀನ್ ಪ್ರೊ. ರಿಧಿಮಾ ತಿವಾರಿ ದೇಸಾಯಿ, ಕುಲಸಚಿವರಾದ ಡಾ. ಕಲ್ಯಾಣ್ ಕುಮಾರ್ ಭಟ್ಟಾಚಾರ್ಜಿ ಸೇರಿದಂತೆ ಪ್ರಾಧ್ಯಾಪಕರು, ಪಾಲಕರು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.

ರಾಷ್ಟ್ರಪತಿಗಳ ಚಿನ್ನದ ಪದಕ: ಎಲ್ಲಾ ಶಾಖೆಗಳಲ್ಲಿ ಅತ್ಯಂತ ಅತ್ಯುತ್ತಮ ವಿದ್ಯಾರ್ಥಿಯಾಗಿ, ಅತ್ಯಧಿಕ ಸಂಚಿತ ಕಾರ್ಯಕ್ಷಮತೆ ಸೂಚ್ಯಂಕದೊಂದಿಗೆ ತಂತ್ರಜ್ಞಾನ ಪದವಿಯ ಅವಶ್ಯಕತೆಗಳನ್ನು ಪೂರ್ಣಗೊಳಿಸಿದ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಅಮೋಘ ಆರ್. ಅವರು ರಾಷ್ಟ್ರಪತಿಗಳ ಚಿನ್ನದ ಪದಕ ಪ್ರಶಸ್ತಿಯನ್ನು ಪಡೆದುಕೊಂಡರು.

ನಿರ್ದೇಶಕರ ಚಿನ್ನದ ಪದಕ: ನಿರ್ದೇಶಕರ ಚಿನ್ನದ ಪದಕಕ್ಕೆ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಿದ್ಧಾರ್ಥ ಸಿಂಗ್ ಅವರು ಭಾಜನರಾದರು. 

ಓಂ ಪ್ರಕಾಶ್ ಗೋಯಲ್ ಮತ್ತು ಸೇವತಿ ದೇವಿ ಗೋಯಲ್ ಪ್ರಶಸ್ತಿ: ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಪ್ರಕೃತಿ ತ್ರಿಪಾಠಿ ಅವರು ಓಂ ಪ್ರಕಾಶ್ ಗೋಯಲ್ ಮತ್ತು ಸೇವತಿ ದೇವಿ ಗೋಯಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಸಂಸ್ಥೆಯ ಬೆಳ್ಳಿ ಪದಕ: ಒಟ್ಟು 10 ವಿದ್ಯಾರ್ಥಿಗಳು ಸಂಸ್ಥೆಯ ಬೆಳ್ಳಿ ಪದಕಕ್ಕೆ ಭಾಜನರಾದರು. ರಾಸಾಯನಿಕ ಮತ್ತು ಜೀವ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಎಂ.ಡಿ. ಇಂಜಮಾಮುಕ್ ಹಕ್, ಸಿವಿಲ್ ಮತ್ತು ಇನ್ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಹರ್ಷ ಜೈನ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಆರ್.ಈಶ್ವರ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಮನ್ ಮನೋಜ್ ಮಾರು, ಎಂಜಿನಿಯರಿಂಗ್ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿ ನಿಶಾಂತ್ ಶೈಲೇಶ್ ಮೆಹ್ತಾ, ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಜೈ ಶರ್ಮಾ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ವೇದಾಂತ್ ಯೋಗೇಶ್ ಅಸ್ವರ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಪಶುಪುಲೇಟಿ ವೆಂಕಟೇಶ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ವಿಘ್ನೇಶ್ವರನ್ .ವಿ., ಮೆಕ್ಯಾನಿಕಲ್, ಮೆಟೀರಿಯಲ್ಸ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸೋಮನಬೋಯಿನಾ ಮಹೇಶ್ ಮತ್ತು ಸಿದ್ಧಾಂತ್ ಪಾಣಿ ಅವರು ಸಂಸ್ಥೆಯ ಬೆಳ್ಳಿ ಪದಕ ಪಡೆದುಕೊಂಡರು. 

ಬಿ.ಟೆಕ್. 207, ಬಿ.ಎಸ್.13, ಎಂ. ಟೆಕ್.56, ಎಂ.ಎಸ್. 12, ಪಿಎಚ್.ಡಿ 24, ಪಿಜಿ ಡಿಪ್ಲೋಮಾ 1 ಸೇರಿದಂತೆ ಒಟ್ಟಾರೆಯಾಗಿ 313 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಡೀಪುರ ಅರಣ್ಯದಲ್ಲಿ ಹೆಣ್ಣಾನೆ ಕಳೇಬರ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾರಿಕಟ್ಟೆ ಕೆರೆ ಸಮೀಪದ...

ಬಂಡೀಪುರದಲ್ಲಿ ಉರುಳು ಹಾಕಿ ಹುಲಿ ಕೊಂದ ಆರೋಪ: ವ್ಯಕ್ತಿ ಬಂಧನ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉರುಳು ಹಾಕಿ ಹುಲಿಯನ್ನು ಕೊಂದ ಪ್ರಕರಣಕ್ಕೆ...

ವಿಚಾರವಾದಿಗಳು ಕಂಡ ಗಾಂಧೀ-ಟಿಪ್ಪು ಮತ್ತು ಕೋಮುವಾದಿಗಳ ತಿರುಚುವಿಕೆ!

ಇತಿಹಾಸದ ಕುರಿತು ಪ್ರಶ್ನೆಗಳನ್ನು ಎತ್ತುವುದು ಪ್ರಜಾಪ್ರಭುತ್ವದ ಲಕ್ಷಣ. ಆದರೆ ಪ್ರಶ್ನೆಗಳನ್ನು ಎತ್ತುವ...

ವಿಜಯಪುರ | ಸಾಧಕ ಗಣ್ಯರಿಗೆ ರಾಜ್ಯೋತ್ಸವ ಸನ್ಮಾನದ ಗೌರವ; ಅರ್ಜಿ ಆಹ್ವಾನ

2026 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ. 1ರಂದು ವಿಜಯಪುರ...