ಮುಂದಿನ ಪೀಳಿಗೆಯು ತಮ್ಮಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ರೂಢಿಸಿಕೊಂಡು ಮುನ್ನಡೆಯಬೇಕು. ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸುವ ಮತ್ತು ಎತ್ತಿಹಿಡಿಯುವ ಉದ್ದೇಶದಿಂದ ಸೆಪ್ಟೆಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಪ್ರಾಂಶುಪಾಲ ನಳಿನಿ ಬೆಂಗೇರಿ ತಿಳಿಸಿದರು.
ಧಾರವಾಡದ ಕುಮಾರೇಶ್ವರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ರಾಜ್ಯಶಾಸ್ತ್ರ ವಿಭಾಗ, ಎನ್‌ಸಿಸಿ, ಎನ್‌ಎಸ್‌ಎಸ್, ಕ್ರೀಡಾ, ಕ್ರಾಸ್ ರೆಡ್ ಕ್ರಾಸ್, ರೇಂಜರ್ಸ್ ಅಂಡ್ ರೋವರ್ಸ್ ಹಾಗೂ ಗ್ರಂಥಾಲಯ ವಿಭಾಗಗಳ ಸಹಯೋಗದಲ್ಲಿ ಸೆಪ್ಟೆಂಬರ್ 15ರಂದು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್‌ಸಿಸಿ ಅಧಿಕಾರಿ ವಿದ್ಯಾ ರಾಯ್ಕರ್ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಸಂಜಾತ ಶಿರಸಂಗಿ ಹಾಗೂ ಬಿ ಎಸ್ ತಲ್ಲೂರ, ದೈಹಿಕ ಶಿಕ್ಷಕ ಶಿವಾನಂದರಹಟ್ಟಿ, ಸುಜಾತಾ ಮುಖನ ಗೌಡ್ರು, ನಾಗರತ್ನ, ಎಸ್ ಸಿ ಪಟ್ಟಣಶೆಟ್ಟಿ ಎ ಕೆ ಜಮಾದಾರ್ ಇದ್ದರು.