ಧಾರವಾಡ | ಚಳಿಯ ಕೊರತೆ; ಸಂಕಷ್ಟದಲ್ಲಿ ಕಡಲೆ ಬೆಳೆದ ರೈತರು

Date:

Advertisements

ಮುಂಗಾರು ಮಳೆ ವೈಫಲ್ಯದಿಂದ ಮುಂಗಾರು ಬೆಳೆ ಕಳೆದುಕೊಂಡಿದ್ದ ಧಾರವಾಡ ಜಿಲ್ಲೆಯ ರೈತರಿಗೆ, ಇದೀಗ ಚಳಿಯ ಬರಗಾಲ ಎದುರಾಗಿದೆ.

ಹಿಂಗಾರು ಬೆಳೆಯ ನಿರೀಕ್ಷೆಯಲ್ಲಿ ರೈತರು ಬೇಗ ಬಿತ್ತನೆ ಮಾಡಿದ್ದು, ಶೇ.75 ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಮಾಡಲಾಗಿದೆ. ಆದರೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ತಾಪಮಾನ ಕಡಿಮೆಯಾಗದ ಕಾರಣ ಕಡಲೆ ಮತ್ತು ಮಾವಿನ ಇಳುವರಿ ಕಡಿಮೆ ಯಾಗುವ ಸಾಧ್ಯತೆ ಇದೆ.

ಈ ಎರಡೂ ಬೆಳೆಗಳಿಗೆ ತಂಪಾದ ವಾತಾವರಣ ಬೇಕು. ಆದರೆ, ಸದ್ಯದ ವಾತಾವರಣದಲ್ಲಿ ಉಷ್ಣತೆ ಹಾಗೇ ಇದೆ. ಡಿಸೆಂಬರ್‌ ಅಂತ್ಯದವರೆಗೆ ವಾತಾವರಣ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ.

Advertisements

ಹಿಂಗಾರು ಮಳೆಯ ಭರವಸೆ ಇಟ್ಟು ಬಿತ್ತಿದ್ದರೈತರು ಮಳೆಯಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಕ್ಷವನ್ನು ಬೋರ್‌ವೆಲ್‌ ನೀರು, ಹೊಳೆ ನೀರು, ಟ್ಯಾಂಕರ್‌ಗಳ ಮೂಲಕ ನೀರು ಹರಿಸಿ ಬೆಳೆ ಉಳಿಸಿಕೊಂಡಿದ್ದಾರೆ. ಈಗ ಚಳಿಗಾಲಕ್ಕೆ ಇರಬೇಕಿರುವಷ್ಟು ಚಳಿ ಬೀಳದೆ ಬೆಳೆ ಆರೋಗ್ಯವಾಗಿ ಬೆಳೆಯಲು ಸಮಸ್ಯೆಯಾಗಿದೆ ಎನ್ನುತ್ತಿದ್ದಾರೆ ಸ್ಥಳೀಯ ರೈತರು.

ಮುಂಗಾರು ಬೇಸಾಯಕ್ಕೂ ಹಿಂಗಾರು ಬೇಸಾಯಕ್ಕೂ ಇರುವ ವ್ಯತ್ಯಾಸವೆಂದರೆ ಮುಂಗಾರು ಬೆಳೆಗಳಿಗೆ ಬಿತ್ತನೆಯ ಸಮಯದಿಂದ ಕೊಯ್ಲು ಮಾಡುವವರೆಗೆ ಮಳೆ ಬೇಕು. ಹಿಂಗಾರು ಬಿತ್ತನೆ ಸಮಯದಲ್ಲಿ ಮಳೆಯಾದರೆ ಸಾಕು. ಆದರೆ, ಬೆಳೆ ಕೊಯ್ಲು ಆಗುವ ತನಕ, ಹವಾಮಾನವು ತಂಪಾಗಿರಬೇಕು. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹವಾಮಾನವು ಬೆಚ್ಚಗಿರುತ್ತದೆ. ಬೆಳಗಿನ ಸಮಯದಲ್ಲಿ ಒಂದೆರಡು ಗಂಟೆಗಳ ಕಾಲ ಮಾತ್ರ ತಂಪಾದ ಹವಾಮಾನವಿರುತ್ತದೆ.

ಕೃಷಿ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ 2.5ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ, 1.5ಲಕ್ಷ ಹೆಕ್ಟೇರ್‌ ಅಂದರೆ ಶೇ.75ರಷ್ಟು ಬಿತ್ತನೆಯಾಗಿದೆ. ಏಕೆಂದರೆ ಬಿತ್ತನೆ ಸಮಯದಲ್ಲಿ ಮಳೆ ಆಗಿರಲಿಲ್ಲ.

ಧಾರವಾಡ ಜಿಲ್ಲೆಯಲ್ಲಿ ಕಡಲೆ ಪ್ರಮುಖ ಹಿಂಗಾರಿ ಬೆಳೆಯಾಗಿದ್ದು, ರೈತರು ಒಂದು ಲಕ್ಷ ಹೆಕ್ಟೇರ್ ಗುರಿಯನ್ನು ಮೀರಿ, 1.5ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಿದ್ದಾರೆ. 16,088 ಹೆಕ್ಟೇರ್ ಗುರಿಗೆ, 9,254 ಹೆಕ್ಟೇರ್‌ನಲ್ಲಿ ಗೋಧಿ ಬಿತ್ತನೆಯಾಗಿದೆ. ಉಳಿದ ಜಮೀನಿನಲ್ಲಿ ಜೋಳ ಮತ್ತಿತರ ಬೆಳೆಗಳನ್ನು ಬಿತ್ತಲಾಗಿದೆ.

ಆರ್ದ್ರತೆಯ ಕೊರತೆಯಿಂದ ಕಡಲೆ ಬೆಳೆ ಒಣಗುತ್ತಿದೆ ಮತ್ತು ಬೆಳೆಗೆ ಕೀಟಗಳು ಕಾಡುವ ಅಪಾಯವನ್ನು ರೈತರು ಎದುರಿಸುತ್ತಿದ್ದಾರೆ. ಮುಂಗಾರು ಬೆಳೆ ಕೈಗೆ ಸಿಗದಿದ್ದಕ್ಕೆ ತುಂಬಾ ಬೇಗ ಹಿಂಗಾರು ಬೆಳೆ ಬಿತ್ತಿದ್ದೇವೆ ಈಗ ಬೆಳೆ ಕೈಕೊಡುವ ಹಾಗಿದೆ, ಮುಂದೆ ಏನು ಮಾಡುವುದು ತೋಚದಂತಾಗಿದೆ ಎನ್ನುತ್ತಿದ್ದಾರೆ ರೈತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X