ಚಿಕ್ಕಬಳ್ಳಾಪುರ |ಭಾರತ ದೇಶದಲ್ಲಿ ನಾಜಿ ಬೀಜಗಳು ಮೊಳೆಯುವುದಿಲ್ಲ : ಗೊಲ್ಲಹಳ್ಳಿ ಶಿವಪ್ರಸಾದ್

Date:

Advertisements

ದೇಶದಲ್ಲಿ ನಾಜಿ ಬೀಜಗಳನ್ನು ಬಿತ್ತುವ ಸಾಂಸ್ಕೃತಿಕ ರಾಜಕಾರಣ ನಡೆಯುತ್ತಿದೆ. ನಮ್ಮ ದೇಶದಲ್ಲಿ ನಾಜಿ ಬೀಜಗಳು ಮೊಳೆಯುವುದಿಲ್ಲ. ಅದು ಜರ್ಮನಿಯಲ್ಲಿ ಮಾತ್ರ ಸಾಧ್ಯ. ಕೆಂಪು, ನೀಲಿ, ಹಸಿರು ಒಂದಾದಲ್ಲಿ ನಿಜವಾದ ಸಮಾಜ ಕಟ್ಟಲು ಸಾಧ್ಯ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

ಚಿಕ್ಕಬಳ್ಳಾಪುರ ನಗರದ ಕೆ.ಇ.ಬಿ ಸಮುದಾಯ ಭವನದ ಆವರಣದಲ್ಲಿ ಗುರುವಾರ ಎಸ್.‌ಎಫ್.‌ಐ ಜಿಲ್ಲಾ ಘಟಕ ಆಯೋಜಿಸಿದ್ದ 16ನೇ ರಾಜ್ಯಮಟ್ಟದ ಸಮ್ಮೇಳನದ ಮೊದಲ ದಿನದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಬರೀ ಸುಳ್ಳುಗಳಿಂದ ಸೌಧ ಕಟ್ಟುವ ಕೆಲಸ ಆಳುವ ನಾಯಕರಿಂದ ಆಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಸುಳ್ಳಗಳಿಂದ ಕಟ್ಟಿದ ಸೌಧ, ನಿಜದ ದಾಳಿಗೆ ನಿಲ್ಲುವುದಿಲ್ಲ ಎಂದು ಹೇಳಬೇಕಿದೆ. ಸತ್ಯ, ಬೆಳಕು ಹಾಗೂ ಬದಲಾವಣೆ ಮೇಲೆ ನಂಬಿಕೆ ಇದೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂಬ ಬದಲಾವಣೆ ವಿದ್ಯಾರ್ಥಿಗಳಿಂದಲೇ ಶುರುವಾಗಬೇಕೆಂದರು.

Advertisements
ಎಸ್‌ ಎಫ್‌ ಐ 2

ಸುಳ್ಳುಗಳನ್ನು ಹೇಳಲು ನಾಲಿಗೆ ಇದ್ದರೆ ಸಾಕು, ಸತ್ಯ ಹೇಳಲಿಕ್ಕೆ ಹೃದಯಬೇಕೆಂದ ಅವರು, ಹೃದಯವಂತ ಸಮಾಜ ನಿರ್ಮಾಣ ಅತ್ಯಗತ್ಯವಾಗಿದೆ. ರಾಜಕಾರಣಕ್ಕೆ ಹಣವೇ ಮಾನದಂಡವಾದರೆ, ನಾಳೆಗಳನ್ನು ನೋಡುವುದಾದರೂ ಹೇಗೆ. ಮಾನವೀಯತೆಯ ನಾಡಿಗಳು ನಿಂತರೆ ದೇಶದ ಹೃದಯ ನಿಲ್ಲುತ್ತದೆ ಎಂಬುದನ್ನು ಯುವಪೀಳಿಗೆ ಅರಿಯಬೇಕಿದೆ ಎಂದರು.

ಸಂತರು, ಶರಣರು, ದಾರ್ಶನಿಕರು, ವಚನಕಾರರು ಈ ನೆಲದಲ್ಲಿ ಜೀವಪರ, ಜನಪರವಾದ ಚಿಂತನೆಗಳೊಂದಿಗೆ ನಾಳಿನ ದಿನಗಳಿಗೆ ನಾವು ಯಾವ ರೀತಿ ಆದರ್ಶ ಆಗಬೇಕೆಂಬುದನ್ನು ಅರಿತು ವಿದ್ಯಾರ್ಥಿಗಳು ಮುನ್ನಡೆಸಬೇಕೆಂದರು.

ಎಸ್‌ ಎಫ್‌ ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ ಸಾನು ಮಾತನಾಡಿ, ಸತತ 3ನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಸರಕಾರ ತನ್ನ ಜನವಿರೋಧಿ ನೀತಿಗಳನ್ನು ಮುಂದುವರಿಸಿಕೊಂಡು ಬರುತ್ತಿದೆ. ಸರಕಾರದ ಜನವಿರೋಧಿ, ವಿದ್ಯಾರ್ಥಿ ವಿರೋಧಿ ನೀತಿಗಳಿಂದ ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗದ ಆಶಯಗಳು ಇದುವರೆಗೂ ಈಡೇರಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ ಇ ಪಿ) ಜಾರಿಯ ಮೂಲಕ ಸರಕಾರಗಳು ಎಲ್ಲರಿಗೂ ಕಡ್ಡಾಯ ಶಿಕ್ಷಣ, ಉದ್ಯೋಗ ನೀಡುವ ಜವಾಬ್ದಾರಿಯಿಂದ ಜಾರಿಕೊಳ್ಳುವ ಯತ್ನ ನಡೆಸಿವೆ ಎಂದರು.

ಈ ಸಮ್ಮೇಳನ ಸರಕಾರಗಳ ವಿರುದ್ಧದ ಹೋರಾಟಕ್ಕೆ ನಮ್ಮೆಲ್ಲರಿಗೂ ಶಕ್ತಿ ನೀಡಲಿದ್ದು, ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗ ಜಾರಿಯಾಗುವವರೆಗೆ ಆಳುವ ಸರಕಾರಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವಕ್ಕೆ ಇದು ಅತೀ ಮುಖ್ಯವಾದ ವರ್ಷವಾಗಿದ್ದು, ದ್ವೀಪಗಳ ನಾಡು ಶ್ರೀಲಂಕಾದಲ್ಲಿ ಕಳೆದ ಬಾರಿ ಶೇ.3ರಷ್ಟು ಮತಗಳಿಸಿದ್ದ ಎಡಪಂಥೀಯ ಪಕ್ಷ, ಇದೀಗ ಶೇ.75ಕ್ಕೂ ಅಧಿಕ ಮತಗಳನ್ನ ಗಳಿಸಿ ಜಯಭೇರಿ ಸಾಧಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ದೊರೆತ ಗೆಲುವು ಎಂದು ಹೇಳಿದರು.

ನವ ಉದಾರವಾದಿ ಬಂಡವಾಳಶಾಹಿ ನೀತಿಯನ್ನು ಅಳವಡಿಸಿಕೊಂಡ ಮೊದಲ ದೇಶ ದಕ್ಷಿಣ ಏಷ್ಯಾ ಹಾಗೂ ಫ್ರಾನ್ಸ್‌ ದೇಶಗಳು ಬಲಪಂಥೀಯ ಸಿದ್ದಾಂತಗಳನ್ನು ಅಳವಡಿಸಿಕೊಂಡವು. ಆದರೆ, ಇದೆಲ್ಲದಕ್ಕೂ ಸೆಡ್ಡುಹೊಡೆದು ನಿಂತಿದ್ದು ಎಡಪಂಥೀಯವಾದಗಳು ಎಂದರು.

ಎಸ್‌ ಎಫ್‌ ಐ 8

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಎಸ್.ಎಫ್‌.ಐ 16ನೇ ರಾಜ್ಯ ಸಮ್ಮೇಳನಕ್ಕೆ ಇಂದಿನಿಂದ ಚಾಲನೆ

ಎಡಪಂಥೀಯ ಸಿದ್ದಾಂತಗಳೊಂದಿಗೆ ಜನರು ನಿಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ

ಎಲ್ಲಿ ಸರಕಾರಗಳು ಜನರ ವಿರುದ್ಧ ನಿಲ್ಲುತ್ತವೋ, ಎಲ್ಲಿ ಜನವಿರೋಧಿ ನೀತಿಗಳನ್ನು ಅನುಸರಿಸುತ್ತವೋ ಅಲ್ಲಿ ಜನರು ಎಡಪಂಥೀಯ ಸಿದ್ದಾಂತಗಳೊಂದಿಗೆ ಜನವಿರೋಧಿ ನೀತಿಗಳ ವಿರುದ್ಧ ಹೋರಾಡುತ್ತಿದ್ದಾರೆ. ಇಡೀ ವಿಶ್ವದಲ್ಲೇ ಇದು ಅನುಕರಣೆಯಾಗುತ್ತಿದ್ದು, ಭಾರತದಲ್ಲೂ ಎಡಪಂಥೀಯ ಸಿದ್ಧಾಂತಗಳೊಂದಿಗೆ ಜನರು ಗಟ್ಟಿ ನಿಲುವು ತಾಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಸ್.ಎಫ್.‌ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ.ಸಾನು ಭವಿಷ್ಯ ನುಡಿದರು.

ಎಸ್‌ ಎಫ್‌ ಐ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಅನಿಲ್ ಮಾತನಾಡಿ, ವೈದ್ಯಕೀಯ ಶಿಕ್ಷಣ ವೈಯಕ್ತಿಕ ಜೀವನ ನಡೆಸಲು ಕೊಡುವ ಶಕ್ತಿಯಲ್ಲ. ಸಮಾಜದ ಆರೋಗ್ಯವನ್ನು ಕಾಪಾಡಲು ಕೊಟ್ಟಿರುವ ಶಕ್ತಿ ಎಂದು ರುಡಾಲ್ಫ್ ವರ್ಚ್ಯು ಅವರ ಮಾತುಗಳನ್ನು ಸ್ಮರಿಸಿದರು.

ಹೊಸ ಶಿಕ್ಷಣ ನೀತಿ ಕುವೆಂಪು ಅವರ ಆಶುಗಳಿಗೆ ವಿರುದ್ಧವಾಗಿದೆ. ಮನುಜ ಮತ, ವಿಶ್ವಪಥ, ದೇಶ ದೇಶಗಳ ನಡುವೆ ಗೋಡೆಗಳನ್ನು ನಿರ್ಮಿಸಿಕೊಂಡು, ಬೇರೆ ದೇಶಗಳಿಗೆ ನಮ್ಮ ದೇಶದ ಜನರನ್ನು ಕಳಿಸುತ್ತಿರುವ ನಮ್ಮ ಸರಕಾರಗಳಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.

ಸರ್ವೋದಯ ಎಂದರೆ ಈ ಭೂಮಿಯಲ್ಲಿ ಹುಟ್ಟಿದ ಮನುಷ್ಯನ ಉದಯ. ಸಮನ್ವಯತೆಯಿಂದ ಸಾಂಸ್ಥೀಕರಣಗೊಂಡಿರುವ ಶಿಕ್ಷಣ ವ್ಯವಸ್ಥೆಯನ್ನು ಒಗ್ಗೂಡಿಸಿಕೊಂಡು ಬೆಳೆಯಬೇಕಿದೆ. ಪೂರ್ಣದೃಷ್ಟಿ ಅಂದರೆ ವೈಜ್ಞಾನಿಕ ಕಣ್ಣೋಟ ಕುವೆಂಪು ಅವರ ಆಶಯ. ಎಲ್ಲವನ್ನೂ ಮೀರಿ ಸಮಾಜವನ್ನು ನಿರ್ಮಿಸಬೇಕು. ಇಂತಹ ಶಿಕ್ಷಣ ನಮ್ಮ ಶಾಲೆ ಕಾಲೇಜುಗಳಲ್ಲಿ ಸಿಗುತ್ತಿಲ್ಲ. ಅದಕ್ಕಾಗಿ ಎಸ್ ಎಫ್ ಐ ಸಂಘಟನೆಯ ಅಧ್ಯಯನ ಆಗಬೇಕಿದೆ. ಹಾಗಾಗಿ ನಾವೆಲ್ಲರೂ ಸಹ ಕುವೆಂಪು ಅವರ ಆಶಯದಂತೆ ಬೆಳೆಯಬೇಕು ಎಂದು ವೈದ್ಯ ಡಾ.ಅನಿಲ್ ಹೇಳಿದರು.

ಎಸ್‌ ಎಫ್‌ ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ ಮಾತನಾಡಿ, ನಮ್ಮ ಶಿಕ್ಷಣ ಪದ್ಧತಿ ಅನೇಕ ತಾರತಮ್ಯದಿಂದ ಕೂಡಿದೆ. ಅಭ್ಯಾಸದ ಜತೆಗೆ ಸಮಾಜದಲ್ಲಿನ ಅಸಮಾನತೆ, ಅನ್ಯಾಯದ ವಿರುದ್ಧ ಹೋರಾಡಬೇಕಿದೆ. ಪ್ರಸ್ತುತ ಶಿಕ್ಷಣ ಸಂಪೂರ್ಣ ವ್ಯಾಪಾರೀಕರಣ ಆಗುತ್ತಿದೆ. ಇದನ್ನು ಆಳುವ ಸರಕಾರಗಳು ಮಾಡುತ್ತಿವೆ ಎಂದು ಗುಡುಗಿದರು.

ಸದ್ದಿಲ್ಲದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದರು. ಎನ್ ಇ ಪಿ ಅಡಿ ವಿದ್ಯಾಭ್ಯಾಸ ಮುಗಿಸಿ ಮೂರು ವರ್ಷಗಳಾದರೂ ಅಂಕಪಟ್ಟಿ ಸಿಕ್ಕಿಲ್ಲ. ಎನ್ ಇ ಪಿ ಪರಿಣಾಮದಿಂದ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ವಿಭಾಗವಾರು ಶಿಕ್ಷಣ ಕೊಡುವದು ನಿಲ್ಲಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಗ.ನ.ಅಶ್ವತ್ಥ್‌ ಹಾಗೂ ತಂಡದವರು ದಲಿತ ಕವಿ ಸಿದ್ದಲಿಂಗಯ್ಯ ಅವರ ನಿನ್ನೆ ದಿನ ನನ್ನ ಜನ, ಕುವೆಂಪು ಅವರ ಮಹಾರಾತ್ರಿ ಹಾಡು ಸೇರಿದಂತೆ ಇತರೆ ಚಳುವಳಿ ಗೀತೆಗಳ ಮೂಲಕ ವಿದ್ಯಾರ್ಥಿಗಳ ಮನರಂಜಿಸಿದರು.

ಇದೇ ವೇಳೆ ಸಮಾವೇಶವನ್ನು ಉದ್ಘಾಟಿಸಿದ ಪದ್ಮಶ್ರೀ ಪ್ರಶಸ್ತಿ ವಿಜೇತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರನ್ನು ಸನ್ಮಾನಿಸಲಾಯಿತು.

ಎಸ್‌ ಎಫ್‌ ಐ6 1

ಸಮಾವೇಶಕ್ಕೂ ಮುನ್ನ ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಕೆ ಇ ಬಿ ಭವನದವರೆಗೆ ನೂರಾರು ವಿದ್ಯಾರ್ಥಿಗಳ ರಾಲಿ ನಡೆಯಿತು.

ಎಸ್‌ ಎಫ್‌ ಐ 3

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪವನ್ – ಕಂಗನಾ ಎಂಬ ‘ಬುದ್ಧಿ’ವಂತರು ಮತ್ತು ಬಿಜೆಪಿ

ಸಮಾವೇಶದಲ್ಲಿ ಎಸ್‌ ಎಫ್‌ ಐ ರಾಜ್ಯ ಕಾರ್ಯದರ್ಶಿ ಭೀಮಪ್ಪ ಗೌಡ, ಅಖಿಲ ಭಾರತ ಜಂಟಿ ಕಾರ್ಯದರ್ಶಿ ಆಕಾಶ್, ರಾಜ್ಯ ಮುಖಂಡ ಎನ್.ಪಿ.ಮುನಿವೆಂಕಟಪ್ಪ, ಎಸ್ಎಫ್ಐ ಮಾಜಿ ಅಧ್ಯಕ್ಷ ಕೆ.ಪ್ರಕಾಶ್, ವಿದ್ಯಾರ್ಥಿನಿಯರ ಉಪಸಮಿತಿ ರಾಜ್ಯ ಸಂಚಾಲಕಿ ಸುಜಾತ, ಸರ್ದಾರ್ ಚಾಂದ್ ಭಾಷಾ, ಎಸ್‌ ಎಫ್‌ ಐ ಕಾರ್ಯದರ್ಶಿ ಡಿ.ಎನ್.ಮುನಿವೆಂಕಟಪ್ಪ, ಎಸ್‌ ಎಫ್‌ ಐ ಜಿಲ್ಲಾಧ್ಯಕ್ಷ ಸೋಮಶೇಖರ್‌, ಕಾರ್ಯದರ್ಶಿ ಸೋಮಶೇಖರ್‌, ಮುನಿಕೃಷ್ಣಪ್ಪ, ಶಿವಪ್ಪ ಕೋಲಾರ ಹಾಗೂ ನೂರಾರು ವಿದ್ಯಾರ್ಥಿಗಳಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X