ಆಧುನಿಕ ಶಿಕ್ಷಣ ಪದ್ದತಿಯಲ್ಲಿ ಡಿಜಿಟಲ್ ಗ್ರಂಥಾಲಯದ ಪಾತ್ರ ಮುಖ್ಯವಾದದ್ದು. ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಗೊರವನಹಳ್ಳಿ ಗ್ರಾಮ ಪಂಚಾಯಿತಿ
ಪಿಡಿಒ ಪೂರ್ಣಿಮಾ ತಿಳಿಸಿದರು.
ಮಂಡ್ಯ ಜಿಲ್ಲೆಯ ಮದ್ದೂರು ಗೊರವನಹಳ್ಳಿ ಗ್ರಾಮ ಪಂಚಾಯಿತಿಯ ಅರಿವು ಕೇಂದ್ರದಲ್ಲಿ ಏರ್ಪಡಿಸಿದ್ದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಗ್ರಂಥಾಲಯ ಪಿತಾಮಹ ಎಸ್ ಆರ್ ರಂಗನಾಥನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದರು.
“ವಿದ್ಯಾರ್ಥಿಗಳು ಮೊಬೈಲ್ ನೊಡುವ ಗೀಳು ಬೆಳೆಸಿಕೊಳ್ಳದೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅಧ್ಯಯನ ಶೀಲವ್ಯಕ್ತಿಯ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ” ಎಂದು ಹಿತ ನುಡಿಗಳನ್ನಾಡಿದರು.

“ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಸರ್ಕಾರದ ಆಸಕ್ತಿಯ ಫಲವಾಗಿ ಅರಿವು ಕೇಂದ್ರಗಳಾಗಿ ಪರಿವರ್ತನೆ ಮಾಡಲಾಗಿದೆ. ಈ ಅರಿವು ಕೇಂದ್ರಗಳು ನಾಗರಿಕರು, ರೈತರು, ಸ್ವಸಹಾಯ ಸಂಘದ ಸದಸ್ಯರುಗಳಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಸೇರಿದಂತೆ ಜೀವನೊಪಾಯ ಚಟುವಟಿಕೆ ಕುರಿತು ವೃತ್ತಿ ತತ್ಸಂಬಂಧಿತ ಕುಶಲತೆ ಕುರಿತು ಮಾಹಿತಿ ನೀಡುತ್ತವೆ. ಜೊತೆಗೆ ಕೃಷಿ ಹಾಗೂ ಹವಾಮಾನ ವರದಿ, ಆಧುನಿಕ ಬೇಸಾಯ ಪದ್ದತಿಯ ಕುರಿತು ಅರಿವು ಮೂಡಿಸುವ ಚಟುವಟಿಕೆ ನಡೆಸಲಿದೆ”0 ಎಂದರು.
“ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಮಾಹಿತಿಯೂ ಈ ಡಿಜಿಟಲ್ ಲೈಬ್ರರಿಯಲ್ಲಿ ಲಭ್ಯವಿದೆ. ಗ್ರಾಮೀಣ ಜನರ ಬದುಕು ಹಸನಾಗಿಸುವಲ್ಲಿ ಶ್ರಮಿಸಲಿವೆ. ಗ್ರಂಥಾಲಯ ಸಪ್ತಾಹದ ಮೂಲಕ ಜನರಿಗೆ ಈ ಕುರಿತು ಜಾಗೃತಿ ಮೂಡಿಸಲಾಗುತ್ತದೆ” ಎಂದರು.
ಇದನ್ನು ಓದಿದ್ದೀರಾ? ಮಂಡ್ಯ | ಒಂದು ಟ್ವೀಟ್‌ನಿಂದ ಏನಾಗುತ್ತದೆ ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ!
“ವಿದ್ಯಾರ್ಥಿಗಳು ಶ್ರದ್ದೆಯಿಂದ ಅಧ್ಯಯನ ಮಾಡುತ್ತ ಗ್ರಂಥಾಲಯದ ಉಪಯುಕ್ತತೆ ಪಡೆದುಕೊಳ್ಳಿ. ಬದುಕಿನಲ್ಲಿ ಇಂತಹ ಮಹನೀಯರ ಪ್ರೇರಣೆಯೊಂದಿಗೆ ಸಾಧನೆಯ ಹಾದಿಯಲ್ಲಿ ಯಶಸ್ಸು ಸಾಧಿಸಬಹುದಾಗಿದೆ” ಎಂದರು
ಅರಿವು ಕೇಂದ್ರದ ಮೇಲ್ವಿಚಾರಕ ಚನ್ನಸಂದ್ರ ವಿವೇಕ್, ರಾಷ್ಟ್ರಕವಿ ಕುವೆಂಪು, ದ ರಾ ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ವಿ ಕೃ ಗೊಕಾಕ್‌ರ ಪರಿಚಯ ಮಾಡಿಸುತ್ತ, ಅವರ ಕೃತಿಗಳ ಪರಿಚಯ ಮಾಡಿಕೊಟ್ಟರು.
ಗೊರವನಹಳ್ಳಿ ಅರಿವು ಕೇಂದ್ರದಲ್ಲಿ ನಡೆದ ಗ್ರಂಥಾಲಯ ಸಪ್ತಾಹದ ಈ ಕಾರ್ಯಕ್ರಮದಲ್ಲಿ ಗೊರವನಹಳ್ಳಿ ಶಾಲೆಯ ಮಕ್ಕಳು ಭಾಗವಹಿಸಿದ್ದರು.