ಚಿತ್ರದುರ್ಗ | ಭೋವಿ ನಿಗಮ ಬಡವರ ಬದುಕಿಗೆ ಬೆಳಕಾಗಲಿ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

Date:

Advertisements

ಭೋವಿ ನಿಗಮ ಬಡವರ ಬದುಕಲ್ಲಿ ಬೆಳಕಾಗಲಿ, ಬಡವರ ಜೀವನಕ್ಕೆ ಆಸರೆಯಾಗಲಿ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯ ಬೋರನಹಳ್ಳಿ ಗ್ರಾಮದ ಅಂಗವಿಕಲ ಮಕ್ಕಳನ್ನು ಹೊಂದಿರುವ ಹುಲುಗಮ್ಮ ಕೋಂ ಚಂದ್ರಪ್ಪ ಕುಟುಂಬಕ್ಕೆ ಭೋವಿ ನಿಗಮದಿಂದ ಮಂಜೂರಾದ ಮೂರು ಲಕ್ಷ ಸಹಾಯಧನದ ಕಾರ್ಯಾದೇಶ ವಿತರಿಸಿ ಮಾತನಾಡಿದರು.

ಕಣ್ಣು, ಬಾಯಿ, ಮೂಗುಗಳ ಕಾರ್ಯನಿರ್ವಹಣೆ ಇಲ್ಲದೇ ಅಂಗವೈಕಲ್ಯಕ್ಕೆ ತುತ್ತಾಗಿರುವ ಮಕ್ಕಳ ಪೋಷಣೆಗಾಗಿ ಪೋಷಕರಿಗೆ ಅಭಿವೃದ್ಧಿ ನಿಗಮದಿಂದ ಸಹಾಯಧನ ನೀಡಿ ಅಂಗಡಿ ನಡೆಸುವ ಮೂಲಕ ಕುಟುಂಬ ಸಾಗಿಸಲು ತುಂಬಾ ಸಹಕಾರಿಯಾಗಲಿದೆ. ಇಂತಹ ಕುಟುಂಬಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಗುರುತಿಸಿ ನಿಗಮದಿಂದ ಸೌಲಭ್ಯ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

Advertisements
WhatsApp Image 2024 11 15 at 5.05.49 PM

ಅಲೆಮಾರಿ ಕುಟುಂಬ ವ್ಯವಸ್ಥೆ ಭೋವಿ- ಒಡ್ಡರದಾಗಿದೆ, ಜೀವನಕ್ಕಾಗಿ ಅಲೆಯುವ ಕುಟುಂಬಗಳಿಗೆ ನಿಗಮದ ಯೋಜನೆಗಳು ಆಸರೆಯಾಗಬೇಕು. ಬಡ ಕುಟುಂಬಗಳು ವಲಸೆ ಜೀವನ ಬಿಟ್ಟು ಒಂದೆಡೆ ಸೇರಿ ಜೀವನ ನಡೆಸುವಂತಾಗಬೇಕೆಂದು ತಿಳಿಸಿದರು.

ಭೋವಿ ನಿಗಮದ ಅಧ್ಯಕ್ಷರಾದ ರವಿಕುಮಾರ್ ಮಾತನಾಡಿ, “ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಶ್ರೀಗಳು ಇಂತಹ ಕುಟುಂಬಗಳನ್ನು ಗುರುತಿಸಿ ತಿಳಿಸಿದಾಗ ಸೇವೆ ಮಾಡಲು ಸಾಧ್ಯವಾಗುತ್ತದೆ, ಬಡವರ ಪರವಾಗಿ ನಿಗಮ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಶ್ಲಾಘಿಸಿದರು.

ಕತ್ತಲೆಯಲ್ಲಿರುವವರಿಗೆ ಬೆಳಕು ತೋರಿಸುವಂತಹ ಕಾರ್ಯ ಮಾಡುತ್ತಿದ್ದೇವೆ, ಬಡಕುಟುಂಬದಲ್ಲಿ ಈ ರೀತಿಯಾದ ಅಂಗವೈಕಲ್ಯ ಮಕ್ಕಳು ಇದ್ದಾಗ ಅವರ ಬದುಕಿನ ಬಗ್ಗೆ ಪೋಷಕರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಆರ್ಥಿಕ ಸಂಕಷ್ಟದಿಂದ ಏನನ್ನು ಮಾಡಲು ಆಗುವುದಿಲ್ಲ, ಅಂತಹವರ ಕೈಹಿಡಿಯುವ ಕೆಲಸ ನಿಗಮ ಮಾಡುತ್ತದೆ. ನಿಗಮದಿಂದ ನೇರವಾಗಿ ಅವರಿಗೆ ಮೂರು ಲಕ್ಷ ರೂ.ಗಳ ಸಹಾಯಧನವನ್ನು ನೀಡಲಾಗಿದೆ. ಆ ಹಣದಿಂದ ಅಂಗಡಿ ನಿರ್ವಹಿಸುವುದರ ಮೂಲಕ ಕುಟುಂಬ ಸಾಗಿಸಬೇಕು. ಇದೇ ರೀತಿ ಇತರೆ ನಿಗಮಗಳು ಸಹ ಕಾರ್ಯನಿರ್ವಹಿಸಬೇಕು. ಸಮಾಜದಲ್ಲಿ ಆರ್ಥಿಕವಾಗಿ ಸಬಲರಿರುವವರು ಸಹ ಈ ರೀತಿಯ ಕುಟುಂಬಗಳಿಗೆ ಸಹಾಯಹಸ್ಥ ನೀಡಬೇಕು ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಬೆಳಗಾವಿ | ಆಪ್ತ ಸಹಾಯಕ ಆತ್ಮಹತ್ಯೆ ಪ್ರಕರಣ: ಜಾಮೀನು ಸಿಕ್ಕ ಬೆನ್ನಲ್ಲೇ ಕರ್ತವ್ಯಕ್ಕೆ ಹಾಜರಾದ ತಹಶೀಲ್ದಾರ್

ಭೋವಿ ಗುರುಪೀಠದಿಂದ ಕುಟುಂಬಕ್ಕೆ ಧವಸ ದಾನ್ಯಗಳನ್ನ ವಿತರಿಸಲಾಯಿತು. ಪೋಷಕರು ಮತ್ತು ಗ್ರಾಮಸ್ಥರು ಜಿಲ್ಲಾ ಭೋವಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಾಗರಾಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X