ಕರ್ನಾಟಕ ಜನಶಕ್ತಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಮಹಿಳಾ ಮುನ್ನಡೆ, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಸೆಪ್ಟೆಂಬರ್.1 ರಿಂದ 8 ರ ವರಗೆ ಸ್ಲಂಗಳ ಸಮಸ್ಯೆಗಳ ಕುರಿತು ಆಹೋರಾತ್ರಿ ಪ್ರತಿಭಟನೆಯ ಮೂಲಕ ಮಂಡ್ಯ ಜಿಲ್ಲಾಡಳಿತದ ಗಮನ ಸೆಳೆದ ಪರಿಣಾಮ ದಿನಾಂಕ-18-9-25 ರಂದು ಜಿಲ್ಲಾಧಿಕಾರಿಗಳು ಸಭೆ ನಡೆಸಿ, ಸ್ಲಂಗಳಲ್ಲಿ ಹೆಚ್ಚುವರಿ ಕುಟುಂಬಗಳಿಗೆ ನಿವೇಶನ, ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕುಮಾರ್ ಸೂಚನೆ ನೀಡಿದರು.
ಶ್ರಮಿಕ ನಗರಗಳು, ಜಿಲ್ಲಾಸ್ಪತ್ರೆ, ಅಕ್ರಮ ಮದ್ಯ ಮಾರಾಟ, ಗಾಂಜಾ, ಅಫೀಮು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಎಂ. ಸಿದ್ದರಾಜು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು. ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಂಡ್ಯ ನಗರ ಮತ್ತು ಮದ್ದೂರು ತಮಿಳು ಕಾಲೊನಿ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ಮಾದೇವಪುರ ಬೋರೆ ಸೇರಿದಂತೆ ಹಲವು ಕೊಳಗೇರಿ ಪ್ರದೇಶಗಳ ದಶಕಗಳ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ್ “ನನ್ನ ನೇತೃತ್ವದಲ್ಲಿ ಹಲವು ಬಾರಿ ಸಭೆ ನಡೆದಿದೆ. ಈ ವಿಚಾರ, ಸಮಸ್ಯೆ ಕುರಿತಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಸಾಧ್ಯ ಆದಷ್ಟು ಬಗೆ ಹರಿಸಲಾಗಿದೆ. ಇನ್ನು ಸಮಸ್ಯೆಗಳಿದ್ದು ಪೂರಕವಾಗಿ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ತಿಳಿಸಲಾಗಿದೆ. ಸ್ಲಂ ಸಮಸ್ಯೆಗಳನ್ನು, ಬಡವರ ಕಷ್ಟಗಳನ್ನು ಅರ್ಥೈಸಿ ಇಲಾಖೆ ವತಿಯಿಂದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಬೇಡಿಕೆಗಳಿಗೆ ಸ್ಪಂದಿಸುವಂತೆ ಮನವಿ
ಸಭೆಯ ನಿರ್ಣಯಗಳು:
- ಕಾಳಪ್ಪ ಬಡಾವಣೆ ಸೇರಿದಂತೆ ಬೇರೆ ಶ್ರಮಿಕ ನಗರಗಳ ಸಾವಿರಾರು ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡಿ. ವಸತಿ ಯೋಜನೆ ಕಲ್ಪಿಸುವ ಕಾರ್ಯಕ್ರಮ ಸದ್ಯದಲ್ಲೆ ಜರುಗುತ್ತದೆ ಎಂದು ಭರವಸೆ ನೀಡಿದರು.
- ಲ್ಯಾಂಡ್ ಆರ್ಮಿ ಕೊಳಗೇರಿ ಪ್ರದೇಶವು ಖಾಸಗಿ ಮಾಲಿಕತ್ವ ಇರುವುದರಿಂದ ದುಬಾರಿ ಪರಿಹಾರ ನೀಡಿ ಜಾಗ ಪಡೆಯಲು ಸಾಕಷ್ಟು ಹಣದ ಕೊರತೆ ಇರುವುದರಿಂದ. 70 ಕುಟುಂಬಗಳಿಗೆ ಸರ್ಕಾರದ ಜಾಗವನ್ನು ಗುರುತಿಸಿ ಸ್ಥಳಾಂತರ ಮಾಡಲು ಮಂಡ್ಯ ತಹಶೀಲ್ದಾರ್ ರವರಿಗೆ ಸೂಚಿಸಿದರು.
- ಗುರುಮಠ ಸ್ಲಂ ಪ್ರದೇಶವು ಸರ್ಕಾರಿ ಕಟ್ಟೆ ಎಂದಿದ್ದು. ಈಗ ಅದರ ಸ್ವರೂಪ ಕಳೆದುಕೊಂಡಿದೆ. ಮರು ಘೋಷಣೆ ಮಾಡಿ ಹಕ್ಕುಪತ್ರಗಳನ್ನು ವಿತರಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದು, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳಿಗೆ ಯಾವ ಹಂತದಲ್ಲಿದೆ ತಿಳಿಯುವಂತೆ ಹೇಳಿದರು.
- ನ್ಯೂ ತಮಿಳು ಕಾಲೋನಿಗೆ ಹಕ್ಕುಪತ್ರ ನೀಡಿದ್ದು. ಕಂದಾಯ ಕಟ್ಟಿಸಿಕೊಂಡು ಹಾಗೂ ನಮೂನೆ ಪತ್ರ ನೀಡುವ ಚಾಲನೆಯಲ್ಲಿದೆ. ಮೂಲಭೂತ ಸೌಕರ್ಯಗಳನ್ನು ನಗರಸಭೆಯಿಂದ ನೀಡಲು ಅಯುಕ್ತರಿಗೆ ತಿಳಿಸಿದರು.
- ಇಂದಿರಾ ಬಡಾವಣೆ ಸ್ಲಂ ಜಾಗವು ರೈಲ್ವೆ ಇಲಾಖೆ ಹಾಗೂ ಖಾಸಗಿ ಮಾಲಿಕತ್ವದಲ್ಲಿದ್ದು. ಬಫರ್ ಝೋನ್ ನಲ್ಲಿ ಇರುವುದರಿಂದ ಪರ್ಯಾ ಜಾಗವನ್ನು ಗುರುತಿಸಿ, ಸ್ಥಳಿಯ ನಿವಾಸಿಗಳ ಜೊತೆ ಸಭೆ ನಡೆಸಿ ಸ್ಥಳಾಂತರ ಮಾಡಿದರೆ ಸೂಕ್ತ ಎಂದು ಕೊಳಗೇರಿ ಅಬಿವೃದ್ದಿ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
- ಕಾಳಿಂಕಾಭ ಸ್ಲಂ ವಿಚಾರವಾಗಿ ಹೈಕೊರ್ಟ್ ನಲ್ಲಿ ಪೈನಲ್ ಜಡ್ಜ್ ಮೆಂಟ್ ಈ ತಿಂಗಳ 28 ರಂದು ನಿಗಧಿಯಾಗಿದೆ. ತೀರ್ಪು ಬಂದ ನಂತರ ಮುಂದಿನ ಕೆಲಸಗಳ ಭಾಗವಾಗಿ ತುರ್ತು ಕ್ರಮ ಜರುಗಿಸಲು ತಿಳಿಸಿದರು.
- ಗಾಡಿ ಕಾರ್ಖಾನೆ, ಶ್ರಮಿಕ ನಗರವನ್ನು ನಗರ ಸಭೆಗೆ ಹಸ್ತಾಂತರ ಮಾಡಿಕೊಂಡು. ಕಂದಾಯ ಕಟ್ಟಿಸಿಕೊಂಡು ಫಲಾನುಭವಿಗಳ ಹೆಸರಿಗೆ ಖಾತೆ ಮಾಡಿಕೊಡಲು ನಗರಸಭೆ ಅಯುಕ್ತರಿಗೆ ಅದೇಶ ನೀಡಿದರು.
- ಸ್ಲಾಟರ್ ಹೌಸ್ ನ 5 ಕುಟುಂಬಗಳಿಗೆ ಪರ್ಯಾಯ ನಿವೇಶನ ನೀಡಲು ಅಶ್ರಯ ಕಮಿಟಿ ಸಭೆ ನಿಗಧಿ ಮಾಡಿ, ನಿವೇಶನ ಕಾಯ್ದಿರಿಸಲು ನಗರಸಭೆ ಅಯುಕ್ತರು ಹಾಗೂ ಕೊಳಗೇರಿ ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
- ಮದ್ದೂರು ತಮಿಳು ಕಾಲೋನಿಯವರಿಗೆ ನೀಡಿರುವ ಜಾಗದಲ್ಲಿ ಅನ್ಯ ವ್ಯಕ್ತಿಗಳು ಬಂದು ಉಳುಮೆ ಮಾಡಿರುವುದು ಕಾನೂನು ಬಾಹಿರ. ಹೈಕೊರ್ಟ್ ನಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಜಿಲ್ಲಾಡಳಿತವು ತಕ್ಷಣ ಮುಂದಾಗಿ ಸ್ಥಳವನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಯ ವಶಕ್ಕೆ ಪಡೆದು, ಮುಂದಿನ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಅಗತ್ಯ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
- ಮಾದೇವಪುರ ಬೋರೆಯ ಹಕ್ಕಿಪಿಕ್ಕಿ ನಿವಾಸಿಗಳಿಗೆ ಹಕ್ಕುಪತ್ರ ನೀಡಿ ವಸತಿ ಯೋಜನೆಯೊಂದಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಸಮಾಜ ಕಲ್ಯಾಣ ಇಲಾಖೆ ಹಾಗೂ ತಹಶೀಲ್ದಾರ್ ಮತ್ತು ಇಓ ರವರಿಗೆ ಸೂಚನೆ ನೀಡಿದರು.
- ಮಂಡ್ಯ ನಗರದ ಹಲವು ಕೊಳಗೇರಿ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟ ಬೇಕು. ಇದರಿಂದ, ವಯಸ್ಕರ ಮಕ್ಕಳು ಗಾಂಜಾ, ಅಫೀಮು, ಮದ್ಯದ ಚಟಕ್ಕೆ ಬಿದ್ದು ಜೀವನ ಕಳೆದು ಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
- ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ನನ್ನ ಗಮನಕ್ಕೆ ಬಂದಿದೆ. ತಕ್ಷಣವೇ ಸರಿಪಡಿಸಿ, ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದರು.
- ಸಖಿ ಸೆಂಟರ್ ಗೆ ಜಿಲ್ಲಾಡಳಿತ ಕಛೇರಿಯಲ್ಲಿ ಒಂದು ಕೊಠಡಿ ನೀಡಿದೆ. ಹಾಗೂ ಅಸ್ಪತ್ರೆಯಲ್ಲಿ ಒಂದು ಕೊಠಡಿ ಇದೆ. ಎರಡನ್ನು ನೊಂದ ಮಹಿಳೆಯರ ಸುರಕ್ಷತಾ ವಿಚಾರವಾಗಿ ಬಳಸಿಕೊಳ್ಳಲು ತಿಳಿಸಿದರು.
ಸಭೆಯಲ್ಲಿ ಮುಡಾ ಅಯುಕ್ತರು, ನಗರಸಭೆ ಅಯುಕ್ತರು,ಜಿಲ್ಲಾಸ್ಪತ್ರೆ ಎಂ ಎಸ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ,ಮಹಿಳಾ ಮತ್ತು ಮಕ್ಕಳ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ, ಮದ್ದೂರು ತಹಶೀಲ್ದಾರ್, ಕೊಳಗೇರಿ ಅಬಿವೃದ್ದಿ ಮಂಡಳಿ. ಅಧಿಕಾರಿಗಳು, ಮಹಿಳಾ ಮುನ್ನಡೆಯ ಶಿಲ್ಪಾ, ಶ್ರಮಿಕ ನಗರಗಳ ಮುಖಂಡರಾದ ಶಿವಣ್ಣ,ನಿಂಗಮ್ಮ, ವೈದುನಾ. ಪ್ರಕಾಶ್, ರೈಸ್, ಚಿಕೂ, ದಿವಾಕರ್, ಲತಾ, ಯಾಶೋದಮ, ಪ್ರಕಾಶ್, ಸುಶೀಲಾ, ರೇಖಾ ಸೇರಿದಂತೆ ಇನ್ನಿತರರು ಇದ್ದರು.