ಡಿಸೆಂಬರ್ 21 ಮತ್ತು 22 ರಂದು ಕೆಲವು ಮಾಧ್ಯಮಗಳಲ್ಲಿ ಧೃವ ಎಂಬ ಮಗುವಿಗೆ ಲಸಿಕೆ ನೀಡಿದ ನಂತರ ಮಗು ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿ ಅನುಸಾರ ಮಗುವಿಗೆ ಡಿ.21ರಂದು ಲಸಿಕೆ ನೀಡಿಲಾಗಿದೆ. ಅದೇ ಲಸಿಕೆಯನ್ನು ಅದೇ ದಿನ ಬೇರೆ ಮಕ್ಕಳಿಗೂ ಕೂಡ ನೀಡಲಾಗಿದೆ. ಆ ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ. ಆದರೆ, ಲಸಿಕೆಯಿಂದಲೇ ಮಗು ಸಾವನ್ನಪ್ಪಿದೆ ಎಂದು ಸುದ್ದಿ ಬಿತ್ತಸಿವೆ. ಮಾಧ್ಯಮಗಳು ಲಸಿಕೆಯ ಕುರಿತು ತಪ್ಪು ಮಾಹಿತಿ ಹರಡಬಾರದು ಎಂದು ಧಾರವಾಡ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
“ಮಕ್ಕಳನ್ನು ಮಾರಕ ರೋಗಗಳಿಂದ ರಕ್ಷಿಸಲು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಲಸಿಕೆ ನೀಡಲಾಗುತ್ತದೆ. ಮಗುವಿನ ಮರಣದ ಕುರಿತಂತೆ ನಿಯಮಾನುಸಾರ ಸಮಿತಿಯಿಂದ ತನಿಖೆ ನಡೆಸಲಾಗುತ್ತಿದೆ. ವರದಿಯನ್ನು ರಾಜ್ಯಮಟ್ಟಕ್ಕೆ ಸಲ್ಲಿಸಲಾಗುತ್ತದೆ. ಮಗು ಸಾವಿಗೆ ಕಾರಣವೇನೆಂದು ನಿರ್ಧರಿಸಲಾಗುತ್ತದೆ” ಎಂದು ಹೇಳಿದ್ದಾರೆ.
“ಯಾವುದೇ ವಿಚಾರದಲ್ಲಿಯೂ ನಿಖರ ಕಾರಣ ತಿಳಿಯದೇ ತಪ್ಪು ಮಾಹಿತಿಯನ್ನು ಮಾಧ್ಯಮಗಳು ಭಿತ್ತಿರಿಸಬಾರದು” ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.