ಬೆಂಗಳೂರಿನ ಬ್ಯಾಂಕರ್ಸ್ ಕನ್ನಡಿಗರ ಬಳಗದವರು ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಮೇಡನಹಳ್ಳಿ ಸರಕಾರಿ ಕಿರಿಯ ಪಾಠಶಾಲೆ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳ ಕೊಡುಗೆಯನ್ನು ನೀಡಿದರು.

ಬಳಗದ ಅಧ್ಯಕ್ಷ ಎಂ ವೆಂಕಟೇಶ ಶೇಷಾದ್ರಿ ಮಾತನಾಡಿ ಬ್ಯಾಂಕರ್ಸ್ ಕನ್ನಡಿಗರ ಬಳಗದವರು 69 ನೇ ಕನ್ನಡ ರಾಜ್ಯೋತ್ಸವ ಸುಸಂದರ್ಭದಲ್ಲಿ ಕರ್ನಾಟಕದ ರಾಜ್ಯಾದ್ಯಂತ 69 ಸರಕಾರಿ ಶಾಲೆಗಳ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಜೊತೆಗೆ, 69 ಕೇಂದ್ರಗಳಲ್ಲಿ ಕರ್ನಾಟಕ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಿದೆ ಎಂದರು.
ಇದನ್ನು ಓದಿದ್ದೀರಾ? ಮದ್ದೂರು | ಅಮಿತ್ ಶಾ ರಾಜೀನಾಮೆ ನೀಡಿ ಜನರ ಕ್ಷಮೆಯಾಚಿಸಬೇಕು: ಜನ ಸಂಘಟನೆಗಳ ಆಗ್ರಹ
ಈ ಸಂದರ್ಭದಲ್ಲಿ ಮೇಡನಹಳ್ಳಿ ಸರಕಾರಿ ಕಿರಿಯ ಪಾಠ ಶಾಲೆಯ ಉಪಾಧ್ಯಾಯರಾದ ವೆಂಕಟೇಶ್, ಕೆ ಪಿ ಜಿ ಪ್ರಭು, ಕರಕುಶಲ ತರಬೇತಿ ಸಂಸ್ಥೆಯ ಮಾನವ ಸಂಪನ್ಮೂಲ ವ್ಯಕ್ತಿ ಬಿ ಎಮ್ ಚಂದ್ರಶೇಖರ್, ಬ್ಯಾಂಕರ್ಸ್ ಕನ್ನಡಿಗರ ಬಳಗದ ಕಾರ್ಯದರ್ಶಿ ಕೆ ಜಿ ಸಂಪತ್ ಕುಮಾರ್, ಬಳಗದ ಸದಸ್ಯರಾದ ಪಿ ಆರ್ ಮುರಳೀಧರ್, ಶರತ್ ಕುಲಕರ್ಣಿ ಮತ್ತು ಟಿ ಆರ್ ವರದರಾಜನ್ ಉಪಸ್ಥಿತರಿದ್ದರು.