ಮಾನಸಿಕ ರೋಗಕ್ಕೆ ತುತ್ತಾದವರನ್ನು ನಿರ್ಲಕ್ಷಿಸದೆ ಅವರನ್ನು ಗುರುತಿಸಿ ಸ್ವಾವಲಂಬನೆ ಬದುಕು ನಡೆಸಲು ಉಪಜೀವನಕ್ಕೆ ಸಹಾಯಧನ ನೀಡುತ್ತಿರುವ ಆರ್ಬಿಟ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಕಲಬುರಗಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಮೈಕೆಲ್ ಮಿರಂದ್ ಹೇಳಿದರು.
ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದ ಆರ್ಬಿಟ್ ಸಂಸ್ಥೆಯಲ್ಲಿ ಆರ್ಬಿಟ್ ಸಂಸ್ಥೆ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಮಾನಸಿಕ ಕಾಯಿಲೆಯಿಂದ ಗುಣಮುಖರಾದ ಫಲಾನುಭವಿಗಳಿಗೆ ಕುರಿ ಹಾಗೂ ಕೋಳಿಗಳನ್ನು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಮನೋದೌರ್ಬಲ್ಯದಿಂದ ದೂರು ಮಾಡುವ ಮೂಲಕ ಅವರನ್ನು ಪುನಃ ಘನತೆಯ ಬದುಕಿಗೆ ಬರಲು ಸಂಸ್ಥೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಇಂತಹ ಮಾನವೀಯ ಕಾರ್ಯಕ್ಕೆ ಕೈಜೋಡಿಸಿದಲ್ಲಿ ಸಮಾಜ ಬದಲಾವಣೆ ನಿರೀಕ್ಷಿಸಬಹುದುʼ ಎಂದು ನುಡಿದರು.
ಬೀದರ್ ಜಿಲ್ಲೆಯ ಸಾವಿರಾರು ಮಾನಸಿಕ ಅಸ್ವಸ್ಥರನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಯಂ ಉದ್ಯೋಗ ಕುರಿ ಕೋಳಿ ಸಾಕಾಣಿಕೆ ಉದ್ಯೋಗ ಕೊಡಿಸುವ ಸಹಾಯಧನ ಮಾಡಿದ್ದೇವೆ. ಸಂಪೂರ್ಣ ಗುಣಮುಖರಾಗಿ ಸ್ವಾವಲಂಬನೆ ಬದುಕು ನಡೆಸಲು ನಮ್ಮ ಸಂಸ್ಥೆಯಿಂದ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಆರ್ಬಿಟ್ ಸಂಸ್ಥೆಯ ನಿರ್ದೇಶಕರಾದ ಫಾದರ್ ವಿಕ್ಟರ್ ವಾಸ್ ಮಾತನಾಡಿ, ʼಸಂಸ್ಥೆಯು ಸುಮಾರು 30 ವರ್ಷಗಳಿಂದ ಸಾಮಾಜಿಕ ಕಾರ್ಯದಲ್ಲಿ ನಿರತವಾಗಿದ್ದು, ಕಳೆದ 2018 ರಿಂದ ಮಾನಸಿಕ ಅಸ್ವಸ್ಥರ ಪುನರ್ವಸತಿಗಾಗಿ ಸಂಸ್ಥೆ ಶ್ರಮಿಸುತ್ತಿದೆ. ಮಾನಸಿಕ ಕಾಯಿಲೆಯಿಂದ ಗುಣಮುಖರಾದವರಿಗೆ ಉತ್ತಮ ಬದುಕನ್ನು ಕಟ್ಟಿಕೊಂಡು ಸ್ವಾವಲಂಬಿಯಾಗಿ ಬದುಕಬೇಕೆಂಬ ಉದ್ದೇಶದಿಂದ ಫಲಾನುಭವಿಗಳಿಗೆ ಇಂದು ಕುರಿ ಹಾಗೂ ಕೋಳಿಯನ್ನು ವಿತರಿಸಲಾಗುತ್ತಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಹಂದಿಗಳ ಜೊತೆ ಗುದ್ದಾಡಲ್ಲ: ಕುಮಾರಸ್ವಾಮಿಗೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಮಾರ್ಮಿಕ ಉತ್ತರ
ಕಾರ್ಯಕ್ರಮದಲ್ಲಿ ಪ್ರಮುಖರಾದ ಜೇಮ್ಸ್, ರೋನಾಲ್ಡ್, ಬಾಲಾಜಿ ಕುಂಬಾರ್ ಹಾಗೂ ಆರ್ಬಿಟ್ ಸಂಸ್ಥೆಯ ಸಹ ನಿರ್ದೇಶಕರು, ನವಜೀವನ ಕಾರ್ಯಕ್ರಮದ ಸಂಯೋಜಕ ಪ್ರವೀಣ, ಆಪ್ತ ಸಮಾಲೋಚಕರಾದ ಅರುಣ್ ಕೋಟೆ, ರವಿ ಚಳಕಾಪುರೆ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಪ್ರೀತಿ ಸ್ವಾಗತಿಸಿದರು, ಅರುಣಕುಮಾರ್ ರಂಜೇರಿ ನಿರೂಪಿಸಿದರು, ಮಮತಾ ವಂದಿಸಿದರು.