ರಾಜಿಯಿಲ್ಲದ ಸಾಮಾಜಿಕ ನ್ಯಾಯದ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ: ಚಿಂತಕ ಮುನಿರಾಜು.ಎಂ ಅರಿಕೆರೆ ಅಭಿಮತ

Date:

ಚಿಕ್ಕಬಳ್ಳಾಪುರ: ಅವಕಾಶ ವಂಚಿತ ಭಾರತೀಯರಿಗೆ ಘನತೆಯ ಬದುಕನ್ನು ಕಲ್ಪಿಸುವ ಏಕೈಕ ಉದ್ದೇಶದಿಂದ ತಮ್ಮಿಡೀ ಬದುಕನ್ನು ಅದಕ್ಕಾಗಿ ಮೀಸಲಾಗಿಟ್ಟಿದ್ದ ಸಾಮಾಜಿಕ ನ್ಯಾಯದ ಹರಿಕಾರ ನ್ಯಾಯದ ಹರಿಕಾರ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಮಾತ್ರ ಎಂದು ಚಿಂತಕ ಉಪನ್ಯಾಸಕ ಎಂ.ಮನಿರಾಜು ಅರಿಕೆರೆ ತಿಳಿಸಿದರು.

ನಗರದ ಗೋಲ್ಡ್ನ್ ಗ್ಲೀಮ್ಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಬಾಬಾ ಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತಿಗೆ ದೀಪಬೆಳಗುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿ ಅಪ್ರತಿಮ ಜ್ಞಾನಿಯಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ತಮ್ಮಿಡಿ ಬದುಕನ್ನು ದಮನಿತ ಸಮುದಾಯಗಳ ಸಬಲೀಕರಣಕ್ಕಾಗಿ ಬಳಸಿದರು. ಎಲ್ಲರನ್ನೂ ಒಳಗೊಂಡ ಸದೃಢ ಭಾರತ ನಿರ್ಮಾಣಕ್ಕಾಗಿ ಅಂತಃಕರಣ ದಿಂದ ಮಿಡಿದರು. ಅವರ ಜೀವನ ವ್ಯಕ್ತಿತ್ವ ಹೋರಾಟ ಮತ್ತು ಕೊಡುಗೆಗಳ ಅರಿವಿನ ಅಗತ್ಯತೆ ಮತ್ತು ಅನಿವಾರ್ಯತೆ ಇಂದು ಹೆಚ್ಚಿದೆ. ಸಂವಿಧಾನದ ಶಕ್ತಿ ಮತ್ತು ಸೌಂದರ್ಯ ಅದರ ಅರಿವಿನಲ್ಲಿಯೇ ಇದೆ ಎಂದರು.
ನಮ್ಮದು ಶ್ರೇಷ್ಠ ಸಂವಿಧಾನ ಎನ್ನುತ್ತೇವೆ. 26 ಜನವರಿ 1950 ಸಂವಿಧಾನವನ್ನು ಅಂಗೀಕರಿಸಿಕೊ0ಡ ನಾವು ಈ 76 ವರ್ಷದಲ್ಲಿ 105 ಬಾರಿ ತಿದ್ದುಪಡಿ ಮಾಡಿಕೊಂಡಿದ್ದೇವೆ. ಅಮೆರಿಕದ ಸಂವಿಧಾನಕ್ಕೆ ಹೋಲಿಸಿದರೆ ಭಾರತದ ಸಂವಿಧಾನಕ್ಕೆ ಆದಷ್ಟು ತಿದ್ದುಪಡಿ ಬೇರೆ ಯಾವುದಕ್ಕೂ ಆಗಿಲ್ಲದಿರುವುದು ದುಧೈವ ಎಂದರು.

ಸಂವಿಧಾನವೆಂದರೆ ಕೇವಲ ಪುಸ್ತಕವಲ್ಲ ಭಾರತೀಯರ ಆತ್ಮ. ಭಾರತದ ದಮನಿತರ ಅಶಕ್ತರ, ಶೋಷಿತರ ಬದುಕು ಸಂವಿಧಾನದಲ್ಲಿ ಇದೆ ಎಂದರೆ ತಪ್ಪಾಗಲಾರದು.ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರು ಅದನ್ನು ಅನುಷ್ಠಾನ ಮಾಡುವವರು ದುರ್ಬಲರಾಗಿದ್ದರೆ, ದುಷ್ಟರಾಗಿದ್ದರೆ ಅವಸಾನ ಖಚಿತ ಎಂದು ಅಂಬೇಡ್ಕರ್ ಹೇಳಿದ್ದರು. ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಈ ಮಾತು ನಿಜವಾಗುತ್ತಿದೆ ಎಂದರು.

ಮಹಿಳಾ ಮೀಸಲಾತಿ ವಿದೇಯಕದ ಬಗ್ಗೆ ಮಾತನಾಡುವವರು ಖಂಡಿತವಾಗಿ ಹಿಂದೂ ಕೊಡುವಿಲ್ ಬಗ್ಗೆ ಮಾತನಾಡಬೇಕು. ಹಿಂದೂ ಕೋಡ್ ಬಿಲ್ ಭಾರತೀಯ ಮಹಿಳೆಯರ ಆತ್ಮ ಗೌರವದ ಬಿಲ್ಲಾಗಿತ್ತು. ಲೋಕಸಭೆಯಲ್ಲಿ ಅಂಬೇಡ್ಕರ್ ಅವರನ್ನು ಮಂಡಿಸಿದಾಗ ಸೋಲಾಗವಂತೆ ನೋಡಿಕೊಂಡ ಮನುವಾದಿಗಳೇ ಇಂದು ಈ ಬಗ್ಗೆ ಪುಂಖಾನು ಪುಂಖವಾಗಿ ಮಾತನಾಡುತ್ತಿದ್ದಾರೆ ಎಂದರು.

ಅಂಬೇಡ್ಕರರು ಕೇವಲ ಸಂವಿಧಾನವನ್ನು ರಚಿಸಲಿಲ್ಲ ಆ ಮೂಲಕ ಸಮ ಸಮಾಜದ ಆಶಯಗಳನ್ನುಳ್ಳ ಬಲಿಷ್ಠ ಭಾರತವನ್ನು ಕಟ್ಟುವ ಕನಸು ಕಂಡಿದ್ದರು. ಶೋಷಿತ ಯುವಜನತೆ ರಾಜಕೀಯ ಪ್ರವೇಶ ಮಾಡಿ ಆಳುವ ವರ್ಗವಾದಾಗ ಸಾಮಾಜಿಕ ಅಸಮಾನತೆಗೆ ಮದ್ದರೆಯಬಹುದು, ನ್ಯಾಯ ಪಡೆಯಬಹುದು ಎಂದು ಅಂಬೇಡ್ಕರ್ ಭಾವಿಸಿದ್ದರು ಎಂದರು.

ನಮಗೆ ಘನತೆಯ ಬದುಕನ್ನು ಕೊಡಲು ತಮ್ಮಿಡಿ ಕುಟುಂಬವನ್ನು ಬಲಿಕೊಟ್ಟ ಏಕೈಕ ಸ್ವಾತಂತ್ರ‍್ಯ ಸೇನಾನಿ ಬಾಬಾ ಸಾಹೇಬರು. ಅವರ ಋಣದಲ್ಲಿ ಇಡೀ ದೇಶವಿದೆ. ಹೀಗಾಗಿ ಅವರ ಹುಟ್ಟುಹಬ್ಬ ಭಾರತೀಯರ ಮನೆ ಮನೆಯಲ್ಲಿ ಆಚರಿಸಲ್ಪಡಬೇಕು. ಆಗಲೇ ಸಮ ಸಮಾಜದ ಆಶಯದ ಹಣತೆ ಬೆಳಗಲಿದೆ ಎಂದು ಕರೆ ನೀಡಿದರು.

- Advertisement -

ಖ್ಯಾತ ನ್ಯಾಯವಾದಿ ಶ್ರೀರಾಮಪುರ ನರಸಿಂಹಮೂರ್ತಿ ಮಾತನಾಡಿ ದೇಶ ಮತ್ತು ದೇಶವಾಸಿಗಳ ಭವಿಷ್ಯಕ್ಕಾಗಿ ಸಂವಿಧಾನದ ಮೂಲಕ ಹೊಸ ಭಾಷ್ಯ ಬರೆದ ಧೀಮಂತ ನಾಯಕ ಅಂಬೇಡ್ಕರಾಗಿದ್ದಾರೆ. ಅವರ ಆದರ್ಶದ ಬದುಕು ನಮ್ಮದಾಗಲಿ. ದೇಶಕ್ಕೆ ಹೊರೆಯಾಗದ ಜವಾಬ್ದಾರಿಯುತ ನಾಗರೀಕರಾಗಿ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸಂವಿಧಾನಕ್ಕೆ ಬದ್ಧವಾಗಿ ಬಳಸೋಣ. ಉತ್ತಮ ಶಿಕ್ಷಣ ಪಡೆಯುವ ಮೂಲಕ ಶೋಷಣೆ ಮುಕ್ತ ಸಮಾಜ ಕಟ್ಟೋಣ, ಆ ಮೂಲಕ ಭ್ರಾತೃತ್ವವನ್ನು ಜಗತ್ತಿಗೆ ಸಾರೋಣ. ಬಾಬಾ ಸಾಹೇಬರ ಜಯಂತಿ ಆಚರಿಸುವುದೆಂದರೆ ಭಾರತದ ಅಂಚಿನ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ದಿನವಾಗಲಿ ಎಂದು ಆಶಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ...

ಇಂಧನ ಬೆಲೆ ಏರಿಕೆ, ಕೈಗೆಟುಕದ ಮನೆಬಾಡಿಗೆ, ಕಡಿಮೆ ವೇತನ, ನಿರುದ್ಯೋಗದ ಆತಂಕ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಅನುದಾನ ಕಡಿತದ ವಿರುದ್ಧ ಯೂರೋಪಿನ ಹಲವು ದೇಶಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಫ್ರಾನ್ಸ್‌ನಿಂದ ಇಟಲಿ, ಬೆಲ್ಜಿಯಂ, ಸ್ಪೇನ್...

ಬೆಳಗಾವಿ | ಅಲೆಮಾರಿಗಳಿಗೆ ಆಧಾರ್ ಕಾರ್ಡ್ ಸಮಸ್ಯೆ; ʼಈದಿನʼದ...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಸುಮಾರು 25ರಿಂದ 30 ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರ ಬದುಕಿನ ಕಥೆ ಕೇಳಿದರೆ ಎಂಥವರಿಗೂ ಕನಿಕರ ಬರುತ್ತದೆ. ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ...

ಶಿವಮೊಗ್ಗ | ಜಿ.ಪಂ., ತಾ.ಪಂ. ಚುನಾವಣೆ: ಗ್ರಾಮೀಣ ರಾಜಕೀಯದಲ್ಲಿ...

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತಿ (ಜಿ.ಪಂ.) ಹಾಗೂ ತಾಲೂಕು ಪಂಚಾಯತಿ (ತಾ.ಪಂ.) ಚುನಾವಣೆಗಳ ಕುರಿತು ರಾಜಕೀಯ ಚರ್ಚೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೀರ್ಘಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ,...

ಪ್ರಾಂಶುಪಾಲ ಸಿ.ಎಂ.ಮುನಿಕೃಷ್ಣಪ್ಪ ಮಾತನಾಡಿ ಭಾರತ ಇಂದು ಏನಾದರೂ ಸಾಧಿಸಿದೆ ಎಂದರೆ ಆ ಸಾಧನೆಯಲ್ಲಿ ಅಂಬೇಡ್ಕರರ ಕೊಡುಗೆ ಇದೆ. ಸರ್ವರಿಗೆ ಸಮಬಾಳು ಸಮಪಾಲು ಕೊಡಲು ನಿರ್ವಂಚನೆಯಿಂದ ಶ್ರಮಿಸಿದ ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟ ಮಹಾಜ್ಞಾನಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದರು.

ಶಿಕ್ಷಣ ಸಂಘಟನೆ ಹೋರಾಟ ಎಂಬುದು ಕೇವಲ ಶಬ್ದಗಳಲ್ಲ ಅವು ಅಧ್ಯಯನ ಆಂದೋಲನ ಅಧಿಕಾರ ಪಡೆಯುವ ಬಲಿಷ್ಠ ಅಸ್ತ್ರಗಳು. ಈ ದಿಕ್ಕಿನಲ್ಲಿ ಯುವಜನತೆ ಯೋಚಿಸಲಿಲ್ಲ ಎಂದರೆ ಸ್ವಾತಂತ್ರ‍್ಯಕ್ಕೆ ಅರ್ಥವಿರುವುದಿಲ್ಲ. ಅಂಬೇಡ್ಕರ್ ಜಯಂತಿ ಎಂದರೆ ಕೇವಲ ಆಡಂಬರದ ಕಾರ್ಯಕ್ರಮವಾಗಬಾರದು. ಬದಲಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಅರಿವಿನ ಜ್ಯೋತಿಯಾಗಬೇಕು. ಈ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಸಾರ್ಥಕವಾಗಿದೆ ಎಂದರು.
ಗೋಲ್ಡನ್ ಗ್ಲಿಮ್ಸ್ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವುಳ್ಳ ಬೃಹತ್ ಕೇಕನ್ನು ಕತ್ತರಿಸಿ ಸಿಹಿ ಹಂಚುವ ಮೂಲಕ ಜ್ಞಾನ ಸೂರ್ಯನ ಜಯಂತಿಗೆ ಹೊಸ ಭಾಷ್ಯ ಬರೆದರು.

ಇದನ್ನು ಓದಿದ್ದೀರಾ..? ಕೋಲಾರ | ನಸೀರ್ ಅಹಮದ್‌ ವಜಾ ಮಾಡಿದ್ದಕ್ಕೆ ಉಲಮಾಗಳ ಆಕ್ರೋಶ

ಈ ವೇಳೆ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ವರ್ಗ, ವಿದ್ಯಾರ್ಥಿ ಸಮೂಹ ಹಾಜರಿದ್ದು ಬಾಬಾ ಸಾಹೇಬರಿಗೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ |ಬಡವರು, ದೀನ-ದುರ್ಬಲರು ಹಾಗೂ ವಿಕಲಚೇತನರ ಬದುಕಿಗೆ ಬೆಳಕಾದ ಎಂ.ಎಸ್. ಖೇಡ: 10ನೇ ಪುಣ್ಯಸ್ಮರಣೆ

ಬಡವರು, ದೀನ-ದುರ್ಬಲರು ಹಾಗೂ ವಿಕಲಚೇತನರಿಗೆ ಶಿಕ್ಷಣದ ಮೂಲಕ ಬದುಕು ಕಟ್ಟಿಕೊಟ್ಟ ವಿಜಯಪುರ...

ಹಾಸನ | ಅಕ್ರಮ ಪೋಡಿ ದುರಸ್ತಿ: ರದ್ದು ಪಡಿಸಲು ನ್ಯಾಯಾಲಯ ಆದೇಶ 

ಸಕಲೇಶಪುರ ತಾಲೂಕಿನ ಸರ್ವೆಯರ್ ಹಾಗೂ ಸೂಪರ್‌ವೈಸರ್ ಸೇರಿ ಅಕ್ರಮವಾಗಿ ಕಿರುಹುಣಸೆ ಗ್ರಾಮದ...

ವಿಜಯಪುರ | ಮಧ್ವಾಚಾರ್ಯರ ದ್ವೈತ ಸಿದ್ಧಾಂತ ಭಾರತೀಯ ತತ್ವಶಾಸ್ತ್ರಕ್ಕೆ ಮಹತ್ವದ ಕೊಡುಗೆ: ಪ್ರೊ. ಪಿ.ಜಿ. ತಡಸ

ಮಧ್ವಾಚಾರ್ಯರು ದ್ವೈತ ತತ್ವವನ್ನು ದೇಶಾದ್ಯಂತ ಪಸರಿಸುವ ಮೂಲಕ ಭಾರತೀಯ ತತ್ವಶಾಸ್ತ್ರ ಹಾಗೂ...

ಹಾಸನ | ಮತದಾರರ ಗುರುತಿನ ಚೀಟಿ ಸುಟ್ಟ ಪ್ರಕರಣ 

ಸಕಲೇಶಪುರ ತಾಲೂಕಿನಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ಇತರೆ ಕಾರ್ಡ್‌ಗಳನ್ನು ಸುಟ್ಟುಹಾಕಿರುವ...