ಡಾ. ಓ ನಾಗರಾಜು ವಿರಚಿತ ʼಹಿಂದೂಪುರʼ ಕಾದಂಬರಿ ಬಿಡುಗಡೆ

Date:

Advertisements

ಬಂಡಾಯ ಸಾಹಿತ್ಯ ಸಂಘಟನೆಯ ತುಮಕೂರು ಜಿಲ್ಲಾ ಘಟಕದ ಸಂಚಾಲಕರೂ ಆಗಿರುವ ಲೇಖಕ, ಪ್ರಾಧ್ಯಾಪಕ ಡಾ. ಓ ನಾಗರಾಜು ಅವರು ರಚಿಸಿರುವ ʼಹಿಂದೂಪುರʼ ಕಾದಂಬರಿಯ ಜನಾರ್ಪಣೆ ಕಾರ್ಯಕ್ರಮ ಶನಿವಾರ (ಏ.5)ದಂದು ತುಮಕೂರು ನಗರದ ಕನ್ನಡ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ನಾಡೋಜ ಪುರಸ್ಕೃತ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆ ಇರಲಿದ್ದು, ಪತ್ರಕರ್ತ ಹಾಗೂ ಸಾಹಿತಿ ರಘುನಾಥ್‌ ಚ.ಹ. ಕೃತಿ ಬಿಡುಗಡೆ ಮಾಡಲಿದ್ದಾರೆ.

ಇನ್ನು ʼಹಿಂದೂಪುರʼ ಕಾದಂಬರಿ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತರಾದ ಡಾ. ಎಚ್‌ ಲಕ್ಷ್ಮೀನಾರಾಯಣಸ್ವಾಮಿ ಅವರು ಬರೆದಿರುವ ಬೆನ್ನುಡಿಯು ಇಂತಿದ್ದು, ನಿಮ್ಮ ಓದಿಗಾಗಿ..

Advertisements

“ಕವಿ ಕೆ ಬಿ ಸಿದ್ದಯ್ಯರಿಂದ ಕಾವ್ಯ ಕೇಂದ್ರಿತವಾಗಿದ್ದ ತುಮಕೂರು, ಡಾ. ಓ. ನಾಗರಾಜು ಅವರಿಂದ ಸೃಜನಶೀಲ ಕಥನ ಕೇಂದ್ರಿತವೂ ಆಗುತ್ತಿದೆ. ಕಾವ್ಯಾತ್ಮಕ ಗುಣಗಳಿಂದ ಮೈವೆತ್ತಿರುವ ‘ಹಿಂದೂಪುರ’ ಕನ್ನಡದ ಗಮನಾರ್ಹ ಕಾದಂಬರಿಗಳಲ್ಲಿ ಒಂದು. ಅಷ್ಟು ಮಾತ್ರವಲ್ಲದೆ ಗ್ರಾಮ್ಯ ಭಾಷೆಯಿಂದ ಓದುಗನೊಳಗೆ ಹೊಸ ಲೋಕವನ್ನು ಸೃಷ್ಟಿಸುವ ಶಕ್ತಿ ಅದಕ್ಕಿದೆ. ತಳ ಸಮುದಾಯದ ಸಾಂಸ್ಕೃತಿಕತೆ ಮತ್ತು ಸ್ತ್ರೀಪರ ಸಂವೇದನೆ ಹಿಂದೂಪುರದ ಜೀವಾಳ. ಭಾರತದ ವಾಸ್ತವತೆಯ ಜೊತೆಗೆ ಸಕಲೆಂಟು ಜಾತಿಗಳು ಸಾಮರಸ್ಯದಿಂದ ಬದುಕಬಲ್ಲ ಆದರ್ಶ ಗ್ರಾಮವಿದು!. ಇಲ್ಲಿ ಸಂಕಟಗಳು, ಕುಚೇಷ್ಟೆಗಳು ಇಲ್ಲವೆಂದಲ್ಲ, ಅದರ ಪ್ರಮಾಣ ಕಡಿಮೆ.
ಅವಸ್ಥಾತರದ ಕಾಲದಲ್ಲಿ ವರ್ಗ ಪ್ರಜೆಯೂ ಪ್ರಬಲಗೊಂಡು ಮನಸ್ಸುಗಳ ನಡುವೆ ಹೇಗೆಲ್ಲಾ ಗೋಡೆಗಳ ನಿರ್ಮಿಸಬಲ್ಲದು ಎಂಬ ಪರಿಪ್ರೇಕ್ಷೆ ಕಾದಂಬರಿಯ ಮೊದಲ ಭಾಗದಲ್ಲಿ ಕಂಡರೆ, ಎರಡು ಮತ್ತು ಮೂರರಲ್ಲಿ ಹೊಸ ತಲೆಮಾರಿನ ಪರಿವರ್ತನೆಯ ಗಂಭೀರತೆ ಇದೆ.

ಗ್ರಾಮೀಣ ಬದುಕಿನ ಬಗೆಗಿನ ಅದಮ್ಯ ಕಾಳಜಿ ಮತ್ತು ಸೂಕ್ಷ್ಮ ಗ್ರಾಹಿತ್ವ ಕಾದಂಬರಿಯ ಸೊಗಸನ್ನು ಹೆಚ್ಚಿಸಿದೆ. ಪರಂಧಾಮನ ಪಾತ್ರ ಮತ್ತೊಬ್ಬ ಹೂವಯ್ಯನಂತೆ ಕಂಡರೆ, ಲಕ್ಷ್ಮಣದಾಸ್‌ ಕುಲಾಚಾರಗಳಿಂದ ಪರಕೀಯಗೊಂಡರಷ್ಟೇ ತಳ ಸಮುದಾಯಗಳು ನೆಲೆ ಕಾಣಲಿಕ್ಕೆ ಸಾಧ್ಯವೆಂದು ನಂಬಿದಂತಿದೆ. ಓದುಗರ ಎದೆಯಲ್ಲಿ ಅಚ್ಚರಿ ಹುಟ್ಟಿಸುವ ಮೆಧೇಟಿ ಪಾತ್ರ ಸ್ಥಾಪಿತ ಮೌಲ್ಯಗಳ ಭಜನೆಯಂತಿದೆ – ಇಂತಹ ಸಂಗತಿಗಳಿಂದ ಕಾದಂಬರಿಗೆ ದಲಿತರ ನವಬೌದ್ಧಿಕತೆ ದಕ್ಕಿದೆ. ಒಬ್ಬಿಬ್ಬರು ಲೇಖಕರಷ್ಟೇ ದಲಿತ ಕಾದಂಬರಿಯ ವಕ್ತಾರರಾಗಿದ್ದ ದಶಕಗಳ ಭ್ರಮೆಯನ್ನ ಮತ್ತು ಭಜನಾ ಮಂಡಳಿಗಳನ್ನ ಓ. ನಾಗರಾಜ್ ತಮ್ಮ ವಿಶಿಷ್ಟ ಕಸೂತಿಯಿಂದ ಭಂಜಿಸಿದ್ದಾರೆ. ಇದು ಕಾದಂಬರಿಯ ಹೊಸ ಮನ್ವಂತರ, ನಾಗರಾಜ್ ಅದರ ಪ್ರವರ್ತಕರು.

ಇದನ್ನೂ ಓದಿ: ತುಮಕೂರು | ದಲಿತರಲ್ಲಿ ಅರಿವಿನ ಕಿಡಿ ಹೊತ್ತಿಸಿದ ‘ಮಹಾಡ್‌ ಸತ್ಯಾಗ್ರಹ’ : ಡಾ.ನಾಗಭೂಷಣ್ ಬಗ್ಗನಡು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸಾಗುವಳಿ ರೈತರಿಗೆ ಭೂಮಿಯನ್ನು ಮಂಜೂರು ಮಾಡಬೇಕು : ಮಾರೆಪ್ಪ ಹರವಿ

ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕೆಂದು ಭೂಮಿ ಮತ್ತು ವಸತಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

Download Eedina App Android / iOS

X