ದಸರಾ ಮೆರವಣಿಗೆ : ತುಮಕೂರು ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ

Date:

Advertisements

ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಚರಿಸಲಾಗುತ್ತಿರುವ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 12ರಂದು ವೈಭವದ ದಸರಾ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಾಹನ ಸಂಚಾರ ಮಾರ್ಗ ಬದಲಾಯಿಸಿ ಕೆಲವು ಸ್ಥಳಗಳಲ್ಲಿ ವಾಹನಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ.

ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತ ಜಂಬೂಸವಾರಿ, 25 ಕಲಾತಂಡ, ತುಮಕೂರು ನಗರದ ದೇವರು, ವಿಂಟೇಜ್ ಕಾರು, ಅಶ್ವ, ಸಾಂಪ್ರಾಯದಾಯಿಕ ಉಡುಗೆ ತಂಡ ಪಾಲ್ಗೊಳ್ಳಲಿವೆ. ಸುಮಾರು 1.5 ಕಿ.ಮೀಗಳಷ್ಟು ದೂರ ಸಾಗುವ ಮೆರವಣಿಗೆಯಲ್ಲಿ ವಿವಿಧ ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು, ಗಣ್ಯ ವ್ಯಕ್ತಿಗಳು, ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರು ಸೇರಿ ಸುಮಾರು 30,000-35,000 ಜನರು ಸೇರುವ ನಿರೀಕ್ಷೆಯಿರುವುದರಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ವಾಹನ ಸಂಚಾರ ಮಾರ್ಗವನ್ನು ಬದಲಾಯಿಸಿ ಆದೇಶ ಹೊರಡಿಸಲಾಗಿದೆ.

ಮೆರವಣಿಗೆಯು ಅಶೋಕರಸ್ತೆ, ಸ್ವತಂತ್ರ ಚೌಕ, ಕೋಡಿ ಸರ್ಕಲ್, ಅಮಾನಿಕೆರೆರಸ್ತೆ, ಕೋತಿತೋಪು ರಸ್ತೆ, ಎಸ್.ಎಸ್. ಸರ್ಕಲ್ ಮಾರ್ಗವಾಗಿ ಭದ್ರಮ್ಮ ಸರ್ಕಲ್ ಮುಖಾಂತರ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಆಗಮಿಸಲಿದೆ. ತುಮಕೂರು ದಸರಾ ಮೆರವಣಿಗೆ ಹಿನ್ನೆಲೆಯಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ವ್ಯತ್ಯಯ ಉಂಟಾಗಲಿದ್ದು, ನಗರದಲ್ಲಿ ಅಕ್ಟೋಬರ್ 12ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ ಆದೇಶ ಜಾರಿಯಲ್ಲಿರುತ್ತದೆ.

Advertisements

ಬೆಂಗಳೂರು ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು : ದಸರಾ ಮೆರವಣಿಗೆಯು ಬಿ.ಜಿ.ಎಸ್. ಸರ್ಕಲ್‌ನಿಂದ ಪ್ರಾರಂಭವಾಗುವ ಸಮಯದಲ್ಲಿ ಬಿ.ಜಿ.ಎಸ್. ಸರ್ಕಲ್ ಕಡೆಗೆ ಬರುವ ವಾಹನಗಳು ಎಸ್.ಎಸ್. ಸರ್ಕಲ್‌ನಿಂದ ಕೋತಿತೋಪು ಮಾರ್ಗವಾಗಿ ಕೆ.ಇ.ಬಿ. ಸರ್ಕಲ್-ಹೊರಪೇಟೆ-ಗುಂಚಿ ಸರ್ಕಲ್–ಚರ್ಚ್ ಸರ್ಕಲ್ ಮೂಲಕ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬರುವುದು. ದಸರಾ ಮೆರವಣಿಗೆಯ ಮುಂಭಾಗವು ಕೋಡಿ ಸರ್ಕಲ್‌ಗೆ ಬಂದಾಗ ಜಿ.ಎಸ್. ಸರ್ಕಲ್ ಕಡೆಗೆ ಬರುವ ವಾಹನಗಳು ಬಿ.ಹೆಚ್. ರಸ್ತೆ ಮಾರ್ಗವಾಗಿ ಭದ್ರಮ್ಮ ಸರ್ಕಲ್, ಬಿ.ಜಿ.ಎಸ್. ಸರ್ಕಲ್ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬರುವುದು.

ಬೆಂಗಳೂರು ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು : ದಸರಾ ಮೆರವಣಿಗೆಯು ಬೆಸ್ಕಾಂ ಕಚೇರಿ ಮುಂದಕ್ಕೆ ಬಂದಾಗ ಎನ್.ಹೆಚ್-48 ರಸ್ತೆಯಿಂದ ಸತ್ಯಮಂಗಲ ಸರ್ವಿಸ್ ರಸ್ತೆಗೆ ಬಂದು ಶಿರಾಗೇಟ್-ಗಾರ್ಡನ್ ರಸ್ತೆ-ದಿಬ್ಬೂರು ರಸ್ತೆ ಜಂಕ್ಷನ್-ಗುಬ್ಬಿ ರಿಂಗ್ ರಸ್ತೆ ಜಂಕ್ಷನ್-ಗುಬ್ಬಿಗೇಟ್-ಲಕ್ಕಪ್ಪ ಸರ್ಕಲ್ ಮೂಲಕ ಬರುವುದು. ನಂತರದಲ್ಲಿ ಪೂರ್ಣ ಮೆರವಣಿಗೆಯು ಎಸ್.ಎಸ್. ಸರ್ಕಲ್‌ನಿಂದ ಭದ್ರಮ್ಮ ಸರ್ಕಲ್ ಕಡೆಗೆ ಹೋದ ನಂತರ ಎಲ್ಲಾ ವಾಹನಗಳು ಎಸ್.ಎಸ್. ಸರ್ಕಲ್-ಕೋತಿತೋಪು ರಸ್ತೆ-ಕೋಡಿ ಸರ್ಕಲ್ ಅಶೋಕ ರಸ್ತೆಗೆ ಬರುವುದು.

ಕುಣಿಗಲ್ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು :ದಸರಾ ಮೆರವಣಿಗೆಯು ಬಿ.ಜಿ.ಎಸ್. ಸರ್ಕಲ್‌ನಿಂದ ಪ್ರಾರಂಭವಾಗಿ ಪ್ರಶಾಂತ ಟಾಕೀಸ್ ಬಿಟ್ಟು ಹೋಗುವವರೆವಿಗೂ ಕುಣಿಗಲ್ ಸರ್ಕಲ್‌ನಿಂದ ಗುಬ್ಬಿ ರಿಂಗ್ ರಸ್ತೆ ಜಂಕ್ಷನ್, ಗುಬ್ಬಿಗೇಟ್-ಲಕ್ಕಪ್ಪ ಸರ್ಕಲ್-ಜೆ.ಸಿ ರಸ್ತೆ-ಹೆಲ್ತ್ಕ್ಯಾಂಟೀನ್ ರಸ್ತೆ ಮೂಲಕ ಹಳೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬರುವುದು.

ಗುಬ್ಬಿ ಗೇಟ್ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು : ದಸರಾ ಮೆರವಣಿಗೆಯು ಬಿ.ಜಿ.ಎಸ್. ಸರ್ಕಲ್‌ನಿಂದ ಪ್ರಾರಂಭವಾಗಿ ಪ್ರಶಾಂತ ಟಾಕೀಸ್ ಬಿಟ್ಟು ಹೋಗುವವರೆವಿಗೂ ಗುಬ್ಬಿಗೇಟ್-ಲಕ್ಕಪ್ಪ ಸರ್ಕಲ್-ಜೆ.ಸಿ ರಸ್ತೆ-ಹೆಲ್ತ್ಕ್ಯಾಂಟೀನ್ ರಸ್ತೆ ಮೂಲಕ ಹಳೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬರುವುದು. ಶಿರಾ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು :ದಸರಾ ಮೆರವಣಿಗೆಯು ಅಶೋಕ ರಸ್ತೆಗೆ ಬಂದಾಗ ಶಿರಾ ಕಡೆಯಿಂದ ಬರುವ ವಾಹನಗಳು ಶಿರಾಗೇಟ್-ಗಾರ್ಡನ್ ರಸ್ತೆ-ದಿಬ್ಬೂರುರಸ್ತೆ ಜಂಕ್ಷನ್-ಗುಬ್ಬಿರಿಂಗ್‌ರಸ್ತೆ ಜಂಕ್ಷನ್-ಗುಬ್ಬಿಗೇಟ್-ಲಕ್ಕಪ್ಪ ಸರ್ಕಲ್ ಮೂಲಕ ಬರುವುದು. ಪೂರ್ಣ ಮೆರವಣಿಗೆಯು ಕೋಡಿ ಸರ್ಕಲ್‌ನಿಂದ ಕೋತಿತೋಪು ರಸ್ತೆಗೆ ಸಾಗಿದ ನಂತರ ಎಲ್ಲಾ ವಾಹನಗಳು ಕೋಡಿ ಸರ್ಕಲ್ – ಅಶೋಕ ರಸ್ತೆಗೆ ಬರುವುದು.

ದಸರಾ ಮೆರವಣಿಗೆ ನಿಮಿತ್ತ ಅಕ್ಟೋಬರ್ 12ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಿ.ಜಿ.ಎಸ್ ಸರ್ಕಲ್- ಚರ್ಚ್ ಸರ್ಕಲ್- ಕೋಡಿ ಸರ್ಕಲ್-ಅಮಾನಿಕೆರೆ ರಸ್ತೆ-ಕೋತಿತೋಪು ರಸ್ತೆ-ಎಸ್.ಎಸ್ ಸರ್ಕಲ್-ಭದ್ರಮ್ಮ ಸರ್ಕಲ್ -ಬಿ.ಜಿ.ಎಸ್ ಸರ್ಕಲ್-ಲಕ್ಕಪ್ಪ ಸರ್ಕಲ್-ಕುಣಿಗಲ್ ರಸ್ತೆಗಳಲ್ಲಿ ಯಾವುದೇ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ಅವರು ಆದೇಶಿಸಿದ್ದಾರೆ.

ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ವಾಹನ ಸವಾರರಿಗೆ ಸೂಚಿಸಲಾಗಿದೆ, ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ಕಾನೂನು ರೀತ್ಯಾ ಅಗತ್ಯ ಕ್ರಮ ವಹಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X