ಪರಿಸರ ಸ್ನೇಹಿ ಹೆಜ್ಜೆ: ‘ಬಯೋಡಿಗ್ರೇಡೆಬಲ್’ ಪ್ಲಾಸ್ಟಿಕ್ ಪೊಟ್ಟಣದಲ್ಲಿ ನಂದಿನಿ ಹಾಲಿನ ಪೂರೈಕೆ ಆರಂಭಿಸಿದ ಬಮೂಲ್

Date:

Advertisements

ಬೆಂಗಳೂರು ಹಾಲು ಒಕ್ಕೂಟವು (ಬಮೂಲ್) ಮಣ್ಣಿನಲ್ಲಿ ಕರಗಬಲ್ಲ ಪ್ಲಾಸ್ಟಿಕ್‌ನಲ್ಲಿ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ಪರಿಸರ ಸ್ನೇಹಿ ಹೆಜ್ಜೆ ಇರಿಸಿದೆ. ಸದ್ಯ ಬಳಕೆಯಾಗುತ್ತಿರುವ ಪಾಲಿಥಿನ್ ಪೊಟ್ಟಣಗಳ ಬದಲಿಗೆ ಜೈವಿಕವಾಗಿ ವಿಘಟನೆಯಾಗುವ (ಬಯೋಡಿಗ್ರೇಡೆಬಲ್) ಪ್ಲಾಸ್ಟಿಕ್ ಪೊಟ್ಟಣದಲ್ಲಿ ನಂದಿನಿ ಹಾಲಿನ ಪೂರೈಕೆಯನ್ನು ಆರಂಭಿಸಿದೆ.

ಪರಿಸರಕ್ಕೆ ಮಾರಕವಾಗಿರುವ ಪಾಲಿಥಿನ್‌ ಹಾಲಿನ ಪ್ಯಾಕೆಟ್‌ಗಳ ಬದಲಿಗೆ ಪರಿಸರ ಸ್ನೇಹಿ ಬಯೋಡಿಗ್ರೇಡಬಲ್‌ ಹಾಲಿನ ಕವರ್‌ಗಳನ್ನು ಬಳಕೆ ಮಾಡಲು ಬೆಂಗಳೂರು ಹಾಲು ಒಕ್ಕೂಟ ದಿಟ್ಟ ಹೆಜ್ಜೆ ಇಟ್ಟಿದ್ದು, ಇದು ದೇಶದಲ್ಲೆ ಮೊದಲ ಪ್ರಯತ್ನ ಎಂದು ಮಾಜಿ ಸಂಸದ, ಬಮೂಲ್‌ ನಿರ್ದೇಶಕ ಡಿ.ಕೆ.ಸುರೇಶ್‌ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕನಕಪುರ ತಾಲ್ಲೂಕಿನ ಶಿವನಹಳ್ಳಿಯಲ್ಲಿರುವ ಬಮೂಲ್‌ನ ಮೆಗಾ ಡೇರಿ ಘಟಕವು ಇಂತಹದ್ದೊಂದು ಪ್ರಯೋಗಕ್ಕೆ ಸಾಕ್ಷಿಯಾಗಿದ್ದು, ಇದು ದೇಶದಲ್ಲೇ ಮೊದಲು ಎನಿಸಿದೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಮಣ್ಣಿನಲ್ಲಿ ಕರಗಲು ಕನಿಷ್ಠ 500 ವರ್ಷ ಬೇಕು. ಆದರೆ, ಬಮೂಲ್ ಬಳಸಲು ಮುಂದಾಗಿರುವ ಬಯೋಡಿಗ್ರೇಡೆಬಲ್ ಪ್ಲಾಸ್ಟಿಕ್ ಕೇವಲ 6 ತಿಂಗಳಲ್ಲಿ ಕರಗಲಿದೆ. ಮಾತ್ರವಲ್ಲ, ಜೈವಿಕ ಗೊಬ್ಬರವಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದು ಬಮೂಲ್‌ ಮಾಹಿತಿ ನೀಡಿದೆ.

Advertisements

ಪ್ರಸ್ತುತ ಹಾಲಿನ ಪ್ಯಾಕೆಟ್‌ಗೆ ಬಳಸುವ ಪಾಲಿಥಿನ್‌ ಕವರ್‌ ಮಣ್ಣಲ್ಲಿ ಕರಗಲು ನೂರಾರು ವರ್ಷಗಳೇ ಕಾಯಬೇಕಿದೆ. ಒಂದು ದಿನಕ್ಕೆ ಲಕ್ಷಾಂತರ ಕವರ್‌ಗಳನ್ನು ಬಳಸುವ ನಾವು ತಿಂಗಳು, ವರ್ಷಗಳನ್ನು ಲೆಕ್ಕ ಹಾಕಿದರೆ ಅಂಕಿಸಂಖ್ಯೆಗಳ ಪ್ರಮಾಣವನ್ನು ಊಹಿಸುವುದು, ಅದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಯೋಚಿಸಿವುದು ಸಹ ಕಷ್ಟಸಾಧ್ಯ. ಇದೆಲ್ಲವನ್ನು ಮನಗಂಡು ಬಮೂಲ್‌ ಇದಕ್ಕೆ ಪರಿಹಾರ ಕಾಣಬೇಕೆಂಬ ಉದ್ದೇಶದಲ್ಲಿ ಕನಕಪುರದ ಶಿವನಹಳ್ಳಿ ಬಳಿ ಸ್ಥಾಪಿಸಿರುವ ಮೆಗಾಡೇರಿ ಪ್ಲಾಂಟ್‌ನಲ್ಲಿ ಹೊಸದಾಗಿ ‘ಡಿ ಕಂಪೋಸಬಲ್‌’ ಕವರ್‌ಗಳನ್ನು ಬಳಕೆ ಮಾಡಲು ಮುಂದಾಗಿದೆ. ಈ ಕವರ್‌ಗಳು ಪರಿಸರ ಸ್ನೇಹಿಯಾಗಿದ್ದು, ಹಾಲಿನ ಬಳಕೆ ಬಳಿಕ ಐದಾರು ತಿಂಗಳಲ್ಲಿ ಮಣ್ಣಲ್ಲಿ ಕರಗಲಿದೆ.

“ದೇಶದ ಹಾಲು ಉದ್ಯಮದಲ್ಲಿ ಪ್ರಭುತ್ವ ಸ್ಥಾಪಿಸಿರುವ ಅಮೂಲ್‌ನಿಂದಲೂ ಸಾಧ್ಯವಾಗದ ಕೆಲಸವನ್ನು ನಮ್ಮ ಬಮೂಲ್‌ ಮಾಡುತ್ತಿದ್ದು, ದೇಶದಲ್ಲೆ ಮೊದಲ ಪ್ರಯತ್ನ ಇದಾಗಿದೆ. ಇದು ಕೇವಲ ಪ್ರಾಯೋಗಿಕವಾಗಿದ್ದು ಪ್ರಾರಂಭದಲ್ಲಿ 2 ಲಕ್ಷ ಬಯೋ ಡಿ ಕಾಂಪೋಸಬಲ್‌ ಕವರ್‌ಗಳನ್ನು ಬಳಕೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ಒಕ್ಕೂಟ ವ್ಯಾಪ್ತಿಯ ಎಲ್ಲಾ ಕಡೆಯೂ ಇದನ್ನು ಬಳಕೆ ಮಾಡುವ ನಿರ್ಧಾರ ಮಾಡಲಾಗಿದೆ” ಎಂದು ಡಿ ಕೆ ಸುರೇಶ್ ತಿಳಿಸಿದ್ದಾರೆ.

ಏನಿದು ‘ಬಯೋಡಿಗ್ರೇಡೆಬಲ್’?

ವಿದೇಶಿ ತಂತ್ರಜ್ಞಾನದಲ್ಲಿ ತಯಾರಾಗಿರುವ ಬಯೋ ಡಿ ಕಂಪೋಸಬಲ್‌ ಕವರ್‌ಗಳನ್ನು ಜೋಳದಿಂದ ತಯಾರು ಮಾಡಲಾಗುತ್ತದೆ. ಇವು ಇತರೆ ಸಾವಯವ ವಸ್ತುಗಳಂತೆ ವಾತಾವರಣದಲ್ಲಿ ಬಹುಬೇಗ ವಿಘಟನೆ ಹೊಂದುತ್ತವೆ. ಪ್ರಸ್ತುತ ಬಳಕೆ ಮಾಡುತ್ತಿರುವ ಪಾಲಿಥಿನ್‌ ಮಣ್ಣಲ್ಲಿ ಕರಗಲು ನೂರಾರು ವರ್ಷಗಳು ಬೇಕು. ಆದರೆ ಬಮೂಲ್‌ ಬಳಕೆ ಮಾಡಲು ಮುಂದಾಗಿರುವ ಬಯೋ ಡಿ ಕಾಂಪೋಸಬಲ್‌ ಕೇವಲ ಐದಾರು ತಿಂಗಳಲ್ಲಿ ಮಣ್ಣಲ್ಲಿ ಕರಗಲಿರುವ ಕಾರಣ ಪರಿಸರ ಸ್ನೇಹಿಯಾಗಿ ಹೊರಬರಲಿವೆ. ಮಾತ್ರವಲ್ಲ, ಜೈವಿಕ ಗೊಬ್ಬರವಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ ಎಂದು ಬಮೂಲ್ ತಿಳಿಸಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಪಾಯಕಾರಿ ಪ್ಲಾಸ್ಟಿಕ್: ಮನ್ಸೂರ್ ಮಾತುಗಳನ್ನು ಸರ್ಕಾರ-ಜನ ಆಲಿಸುವರೇ?

ಪರಿಸರ ಸ್ನೇಹಿ ಬಯೋಡಿಗ್ರೇಡೆಬಲ್ ಕವರ್‌ಗಳ ಬೆಲೆ ಪಾಲಿಥಿನ್‌ ಕವರ್‌ಗಳ ಬೆಲೆಗಿಂತ ಜಾಸ್ತಿಯಿದ್ದು, ಇವುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಿದೆ. ಪಾಲಿಥಿನ್‌ ಕವರ್‌ ದರ ಕಡಿಮೆ ಇದ್ದರೂ ಪರಿಸರದ ಮೇಲೆ ಅದು ಉಂಟು ಮಾಡುತ್ತಿರುವ ದುಷ್ಪರಿಣಾಮವನ್ನು ಯೋಚಿಸಿದಾಗ ದರ ಜಾಸ್ತಿಯಾದರೂ ಸರಿ ಇವುಗಳನ್ನೇ ಬಳಕೆ ಮಾಡಬೇಕೆಂಬ ನಿರ್ಧಾರವನ್ನು ಬಮೂಲ್ ಕೈಗೊಂಡಿರುವುದು ಪರಿಸರದ ರಕ್ಷಣೆ ದೃಷ್ಟಿಯಿಂದ ವಿಶೇಷ ಎನಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X