ಈದಿನ ಡಾಟ್ ಕಾಮ್ “ಶಿವಮೊಗ್ಗ| ನೆರವಿನ ಹಸ್ತಕ್ಕಾಗಿ ಎದುರು ನೋಡುತ್ತಿದೆ ಬಡ ಕುಟುಂಬ” ಎಂಬ ಶೀರ್ಷಿಕೆಯಡಿಯಲ್ಲಿ ಸುದ್ದಿಯೊಂದನ್ನು ಮಾಡಿತ್ತು. ಈ ಸುದ್ದಿಗೆ ಸ್ಪಂದಿಸಿದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಆರೋಗ್ಯಾಧಿಕಾರಿಗಳು ಬಡ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ.
ಶಿವಮೊಗ್ಗ ನಗರದ ಕರವೇ ಸ್ವಾಭಿಮಾನಿ ಬಣದ ಕಿರಣ್ ಅವರ ತಂಡ, ಸಹಾಯಕ್ಕೆ ಧಾವಿಸಿದ್ದು, ಒಂದು ತಿಂಗಳಿಗೆ ಸರಿಹೊಂದುವಷ್ಟು ಆಹಾರ, ದಿನಸಿ ಕಿಟ್ ಹಾಗೂ ಧನ ಸಹಾಯ ನೀಡಿ ಮಾನವೀಯತೆ ಮೆರದಿದೆ. ತಂಡದ ಉಪಾಧ್ಯಕ್ಷ ವಿಜಯ್ ಕುಮಾರ್ ಮೊಬೈಲ್ ಕ್ಯಾಂಟೀನ್ ವ್ಯವಸ್ಥೆಗೆ ಅನುಕೂಲವಾಗುವಂತೆ ತಾತ್ಕಾಲಿಕವಾಗಿ ಆಟೋ ನೀಡಿದ್ದಾರೆ. ಜೊತಗೆ ಮುಂದಿನ ದಿನಗಳಲ್ಲಿ ಇವರಿಗೆ ಅವಶ್ಯಕ ನೆರವು ಬೇಕಾದಲ್ಲಿ ತಿಳಿಸಲು ಹೇಳಿದರು.

ಶಿವಮೊಗ್ಗ ನಗರದ ಆರೋಗ್ಯಾಧಿಕಾರಿ ಕೃಷ್ಣಮೂರ್ತಿ ಸಹ ಈದಿನ ಡಾಟ್ ಕಾಮ್ ಸುದ್ದಿಗೆ ಸ್ಪಂದಿಸಿ, ಮನೆಗೆ ತೆರಳಿ ತಮ್ಮ ಕೈಯಲ್ಲಾಗುವ ಎಲ್ಲಾ ರೀತಿಯ ಸಹಾಯವನ್ನು ನೀಡಲಿದ್ದೇವೆ. ಸರ್ಕಾರದಿಂದ ಬರುವ ಯೋಜನೆಯ ಸಹಾಯ ಮಾಡಿಸಿಕೊಡುತ್ತೇವೆ ಎಂದು ತಿಳಿಸಿದರು. ಶಿವಮೊಗ್ಗ ಈದಿನ ಮಾಧ್ಯಮ ಪ್ರತಿನಿಧಿ ರಾಘವೇಂದ್ರ ಅವರಿಗೆ ಉತ್ತಮ ಸಮಾಜಮುಖಿ ಸುದ್ದಿ ಮಾಡಿದ್ದೀರಿ ಎಂದು ಮೆಚ್ಚುಗೆ ಸೂಚಿಸಿದರು.
ಮಾಧ್ಯಮ ಪ್ರತಿನಿಧಿ ರಾಘವೇಂದ್ರ MILAAP ಎಂಬ App ಮೂಲಕ ಅನಾರೋಗ್ಯಕ್ಕೆ ಒಳಗಾಗಿರುವ ಈ ಕುಟುಂಬಕ್ಕೆ ಸಹಾಯ ಹಸ್ತ ಕೋರಿದ್ದಾರೆ. MILAAP ಎಂಬ ತಂತ್ರಾಂಶವು ದೇಶದ ಯಾವುದೇ ಬಡ ಕುಟುಂಬಕ್ಕೆ ದಾನಿಗಳ ಮುಖೇನ ಹಣ ಸಂಗ್ರಹಣೆ ಮಾಡಿ ಸಹಾಯ ಮಾಡುತ್ತದೆ.

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ನೆರವಿನ ಹಸ್ತಕ್ಕಾಗಿ ಎದುರು ನೋಡುತ್ತಿದೆ ಬಡ ಕುಟುಂಬ
ಬಡ ಕುಟುಂಬಕ್ಕೆ ಮತ್ತಷ್ಟು ಸಹಾಯದ ಅವಶ್ಯಕತೆ ಇದೆ. ಮಗಳ ವಿದ್ಯಾಭ್ಯಾಸ ಹಾಗೂ ಬುದ್ದಿಮಾಂದ್ಯ ಮಗನ ಜೀವನಕ್ಕೆ ದಾರಿ ರೂಪಿಸಿಕೊಡಬೇಕಿದೆ. ಮುಂದಿನ ದಿನಗಳಲ್ಲಿ ದಾನಿಗಳು ಹಾಗೂ ಶಕ್ತರು ಬಡ ಕುಟುಂಬಕ್ಕೆ ನೆರವು ನೀಡುವ ಮೂಲಕ ಕುಟುಂಬವನ್ನು ಸ್ವಾವಲಂಬಿಯಾಗಿ ಮಾಡುವ ನಿಟ್ಟಿನಲ್ಲಿ ಒಂದಾಗಿ ಸದೃಢ ಸಮಾಜ ಕಟ್ಟುವ ಕೆಲಸ ಆಗಲಿ ಎಂಬುದು ನಮ್ಮ ಈದಿನ ಡಾಟ್ ಕಾಮ್ ಆಶಯವಾಗಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.