ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಪುಸ್ತಕ ವಿತರಣೆಯಾಗದ ಹಿನ್ನೆಲೆಯಲ್ಲಿ ತಾಲೂಕು ಶಿಕ್ಷಣಾಧಿಕಾರಿಗಳೇ ಖುದ್ದು ಬುಕ್ ಗೋಡನ್ಗೆ ಭೇಟಿ ನೀಡಿದ್ದು, ಪುಸ್ತಕ ಒದಗಿಸಿದ್ದಾರೆ.
2025-2026 ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಯಲ್ಲಿ 211 ವಿದ್ಯಾರ್ಥಿಗಳ ದಾಖಲಾತಿಯಾಗಿದ್ದು. ಕಳೆದ ವರ್ಷ 164 ವಿದ್ಯಾರ್ಥಿಗಳ ದಾಖಲಾತಿಯಾಗಿದ್ದು, ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಹೀಗಿರುವಾಗ ಇಲಾಖೆಯಿಂದ ಇನ್ನುಳಿದ 30 ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಲಭ್ಯವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಆಗಸ್ಟ್ 11ರಂದು ಭದ್ರಾವತಿ | ಹೊಸ ಸಿದ್ದಾಪುರ ಶಾಲೆಯ ವಿದ್ಯಾರ್ಥಿಗಳಿಗೆ, ಪಠ್ಯ ಪುಸ್ತಕವಿಲ್ಲದೆ ಪರದಾಟ ; ಜಾಣ ಮೌನಕ್ಕೆ ಜಾರಿದ ಡಿಡಿಪಿಐ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಭದ್ರಾವತಿ ತಾಲೂಕು ಶಿಕ್ಷಣಾಧಿಕಾರಿ ಈ ದಿನ.ಕಾಮ್ ವರದಿಗೆ ಸ್ಪಂದಿಸಿದ್ದು, ಸಿದ್ದಾಪುರದ ಶಾಲೆಗೆ ಭೇಟಿ ನೀಡಿ ಪುಸ್ತಕಗಳ ಕೊರತೆಯ ಬಗ್ಗೆ ಮಾಹಿತಿ ಪಡೆದು, ಲಭ್ಯತೆ ಇರುವ ಪುಸ್ತಕಗಳನ್ನು ಒದಗಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕು ಎಸ್‌ಡಿಎಂಸಿ ಸಮನ್ವಯ ವೇದಿಕೆಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.
