2023-24ನೇ ಸಾಲಿನ ಮಹಾತ್ಮಗಾಂಧಿ ರಾಷ್ಠ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದಕ್ಕಾಗಿ ಬೀದರ್ ಜಿಲ್ಲೆಯಿಂದ ಆಯ್ಕೆಯಾದ ಕಮಲನಗರ ತಾಲ್ಲೂಕಿನ ತೋರಣಾ ಗ್ರಾಮ ಪಂಚಾಯಿತಿಗೆ ಅತ್ಯುತ್ತಮ ಗ್ರಾಮ ಪಂಚಾಯಿತಿ ಪುರಸ್ಕಾರ ಪ್ರದಾನ ಮಾಡಲಾಯಿತು.
ಬೆಂಗಳೂರಿನ ವಸಂತ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ಬುಧವಾರ ಆಯೋಜಿಸಿದ ನರೇಗಾ ಹಬ್ಬ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ತೋರಣಾ ಗ್ರಾಮ ಪಂಚಾಯತಿ ಅಧ್ಯಕ್ಷ ಸುನೀಲ ಗೋಪಾಲರಾವ್ ಸಿಗ್ರೆ ಮತ್ತು ಪಿಡಿಒ ಮಲ್ಲೇಶ ಮಾರುತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಶಾಸಕ ಶರತ್ ಬಚ್ಚೆಗೌಡ್, ಗ್ರಾಮೀಣಾಭಿವೃದ್ಧಿ ಆಯುಕ್ತ ಪವನಕುಮಾರ ಮಾಲಪಾಟಿ, ಔರಾದ್ ತಾಲ್ಲೂಕು ಪಂಚಾಯತ್ ಇಒ ಮಾಣಿಕರಾವ್ ಪಾಟೀಲ್ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ನರೇಗಾ ವೈಯಕ್ತಿಕ ಫಲಾನುಭವಿ ಜಗದೀಶ ಹೂಗಾರಗೆ ಪ್ರಶಸ್ತಿ :

ಭಾಲ್ಕಿ ತಾಲ್ಲೂಕಿನ ಡೋಣಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ನರೇಗಾ ಒಗ್ಗೂಡುವಿಕೆ ಸೌಲಭ್ಯ ಪಡೆದು ಉತ್ತಮವಾಗಿ ಒಂದು ಎಕರೆ ಗುಲಾಬಿ ಹೂವು ಬೆಳದಿದ್ದಕ್ಕಾಗಿ ಜಗದೀಶ ಹೂಗಾರ್ ಅವರಿಗೆ ವೈಯಕ್ತಿಕ ಫಲಾನುಭವಿ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.