ಮುಸ್ಲಿಮರ ಪವಿತ್ರ ಹಬ್ಬವಾದ ಈದುಲ್ ಅಝ್ಹಾ (ಬಕ್ರೀದ್) ಹಬ್ಬವನ್ನು ಇಂದು ಉಡುಪಿಯಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು.
ಉಡುಪಿಯ ಹಾಶಿಮಿ ಮಸೀದಿಯ ಇಮಾಮರಾದ ಮೌಲಾನಾ ಉಬೇದಾರ್ ರೆಹಮಾನ್ ನದ್ವಿ ಈದ್ ಸಂದೇಶ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೇರೆ ಸಮಾಜದವರನ್ನು ನಿಂದಿಸುವುದು, ಅವಹೇಳನ ಪೋಸ್ಟ್ಗಳನ್ನು ಮಾಡಬಾರದೆಂದು, ಸೋಶಿಯಲ್ ಮೀಡಿಯಾ ದುರುಪಯೋಗ ಮಾಡದಿರುವಂತೆ ಕರೆ ನೀಡಿದರು.

ಡ್ರಗ್ಸ್ ಸೇವನೆಯಿಂದ ಹಲವಾರು ಯುವಕರು ತಮ್ಮ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಹೆತ್ತವರು ತಮ್ಮ ಮಕ್ಕಳನ್ನು ಇಂತಹ ವಿಷ ಪದಾರ್ಥದಿಂದ ದೂರ ಇರಲು ಮಕ್ಕಳನ್ನು ಸಲಹೆ ನೀಡಬೇಕಾಗಿ ಕರೆ ಕೊಟ್ಟರು. ಸಮಾಜವನ್ನು ಪ್ರೀತಿ, ಸೌಹಾರ್ದತೆ ಹಾಗೂ ಶಾಂತಿಯ ಮಾರ್ಗವನ್ನು ಅನುಸರಿಸ ಬೇಕೆಂದು ಕರೆ ಕೊಟ್ಟರು.
ಈದ್ ಅಲ್ ಅಧಾ ನಮಾಜ್ ಮಾಡಲು ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
